ಸಿಮಿಟೆರೊ ಮ್ಯುಮೆಂಟ್‌ಲೆ; ಇದು ಕಣ್ಮನ ಸೆಳೆಯುವ ಜಗತ್ತಿನ ಸುಂದರ ಸ್ಮಶಾನ

ಇಟಲಿಯ ಮಿಲನ್ ನಗರದಲ್ಲಿರುವ ಪ್ರಸಿದ್ಧ ಸ್ಮಾರಕ ಸ್ಮಶಾನವು ವಿಶ್ವದ ಅತ್ಯಂತ ಸುಂದರ ವಾದ ಸ್ಮಶಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಮಶಾನವೇ ಸಿಮಿಟೆರೊ ಮ್ಯುಮೆಂಟ್‌ಲೆ. ಈ ಸ್ಮಶಾನವು ಸುಂದರವಾದ ಶಿಲ್ಪಕಲೆಗಳು ಮತ್ತು ದೊಡ್ಡ ಗೋರಿಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಸಿಮಿಟೆರೊ ಮ್ಯುಮೆಂಟ್‌ಲೆ; ಇದು ಕಣ್ಮನ ಸೆಳೆಯುವ ಜಗತ್ತಿನ ಸುಂದರ ಸ್ಮಶಾನ
ಸಿಮಿಟೆರೊ ಮ್ಯುಮೆಂಟ್‌ಲೆ
Image Credit source: Getty Images

Updated on: Aug 11, 2026 | 7:40 PM

ಮುಖ್ಯಾಂಶಗಳು

  • ಜಗತ್ತಿನ ಸುಂದರವಾದ ಸ್ಮಶಾನವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ
  • ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನವು ಇಟಲಿಯ ಮಿಲನ್ ನಗರದಲ್ಲಿದೆ
  • ಈ ಸ್ಮಶಾನವು ಅದ್ಭುತ ವಾಸ್ತುಶಿಲ್ಪ, ಕಲ್ಲಿನ ಕೆತ್ತನೆಗಳು ಹಾಗೂ ಶಿಲ್ಪಗಳಿಂದ ನಿರ್ಮಿಸಲ್ಪಟ್ಟಿದೆ

ಸ್ಮಶಾನ (cemeteries) ಅಂದರೆ ಎಲ್ಲರಿಗೂ ಭಯ. ಹೀಗಾಗಿ ಈ ಸ್ಥಳದತ್ತ ಹೋಗುವುದು ಬಿಡಿ, ಆ ಕಡೆ ತಿರುಗಿಯೂ ಮುಖ ಮಾಡಲ್ಲ. ಆದರೆ ಈ ಸ್ಮಶಾನವನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ. ಹೌದು ಈ ಸ್ಮಶಾನವು ತನ್ನ ವಾಸ್ತುಶಿಲ್ಪ ಹಾಗೂ ಅಪ್ರತಿಮ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದುವೇ ಇಟಲಿಯ ಮಿಲನ್ ನಗರದಲ್ಲಿರುವ (Milan, City in Italy) ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ. ಹಾಗಾದ್ರೆ ಈ ಸ್ಮಶಾನವನ್ನು ಜಗತ್ತಿನ ಸುಂದರವಾದ ಸ್ಮಶಾನ ಎನ್ನುವುದರ ಹಿಂದಿರುವ ಕಾರಣ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ: ಏನಿದರ ವಿಶೇಷತೆ?

ಇಟಲಿಯ ಮಿಲನ್ ನಗರದಲ್ಲಿರುವ ಈ ಸ್ಮಶಾನವನ್ನು ಮೊದಲ ಬಾರಿಗೆ ನೋಡಿದ್ರೆ ಅರಮನೆ, ಕಲಾ ವಸ್ತುಸಂಗ್ರಹಾಲಯ ಅಥವಾ ಪ್ರಾಚೀನ ಕಾಲದ ಭವ್ಯ ರೈಲು ನಿಲ್ದಾಣ ಎಂದುಕೊಳ್ತಾರೆ. ಆದರೆ ಈ ಸ್ಮಶಾನವು ಅದ್ಭುತ ವಾಸ್ತುಶಿಲ್ಪ, ಕಲ್ಲಿನ ಕೆತ್ತನೆಗಳು ಮತ್ತು ಅದ್ಭುತ ಶಿಲ್ಪಗಳಿಂದ ನಿರ್ಮಿಸಲ್ಪಟ್ಟಿದೆ. ಪ್ರಸಿದ್ಧ ಇಟಾಲಿಯನ್ ಶಿಲ್ಪಿಗಳು ಹಾಗೂ ವಾಸ್ತುಶಿಲ್ಪಿಗಳು ಕೆತ್ತಿದ ಪ್ರತಿಮೆಗಳು ಮತ್ತು ಸಮಾಧಿ ಛಾವಣಿಯ ರಚನೆಗಳನ್ನು ಇಲ್ಲಿ ಕಾಣಬಹುದು. ಈ ಸ್ಮಶಾನವನ್ನು 1866 ರಲ್ಲಿ ನಿರ್ಮಿಸಲಾಯಿತು. ಅನೇಕ ಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳು ಇಲ್ಲಿವೆ. ಕಲಾ ಪ್ರೇಮಿಗಳು ಮತ್ತು ಇತಿಹಾಸಕಾರರಿಗೆ ಈ ಸ್ಥಳವು ಸ್ವರ್ಗದಂತಿದೆ.

ಇದನ್ನೂ ಓದಿ: ಅಪ್ಪನ ಚಿತೆ ಉರಿಯುತ್ತಿದ್ದಾಗ ಇನ್ನೂ ಎಷ್ಟು ಟೈಮ್ ಬೇಕೆಂದು ವಿಡಿಯೋ ಕಾಲ್​ನಲ್ಲಿ ಕೇಳಿದ ಮಗಳು

ಈ ಸ್ಮಶಾನದ ಹೊರಭಾಗದಲ್ಲಿ ತಾಜಾ ಹೂವಿನ ಅಂಗಡಿಗಳೂ ಇವೆ. ಇಲ್ಲಿಗೆ ಪ್ರವಾಸಿಗರು ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರು ಇಲ್ಲಿಗೆ ಬರುತ್ತಾರೆ. ಹೂವಿನ ಅಂಗಡಿಗಳಲ್ಲಿರುವ ವರ್ಣರಂಜಿತ ಮತ್ತು ಪರಿಮಳಯುಕ್ತ ಹೂವುಗಳನ್ನು ಖರೀದಿಸಿ ತಮ್ಮ ಅಗಲಿದ ವ್ಯಕ್ತಿಗಳ ಸಮಾಧಿಗೆ ಇಟ್ಟು ಗೌರವ ಸಲ್ಲಿಸುತ್ತಾರೆ. ಹೂವಿನ ಅಂಗಡಿಗಳು ಈ ಸ್ಮಶಾನ ಚಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:35 pm, Tue, 11 August 26

Loading...
Unable to load recommendations.
Follow Us