Bed Rotting: ‘ಹಾಸಿಗೇಲೇ ಕೊಳೀತೀಯಾ’ ಯಾರಾದರೂ ಬೈದ್ರೆ ನಾನು ಟ್ರೆಂಡ್ ಸೆಟ್ಟರ್ ಅಂತ ಖುಷಿಪಡಿ

| Updated By: Digi Tech Desk

Updated on: Jun 08, 2023 | 1:09 PM

Bed Rotting: ಹಿಂದೊಮ್ಮೆ “ಸಂಪೂರ್ಣ ಶವರ್” ಎಂಬ ಅಲೆ ಎದ್ದಿತ್ತು, ಅದು ಬಚ್ಚಲಿಗೆ ಸಂಬಂಧಿಸಿದ್ದು. ಈಗ ಎದ್ದಿರುವ ಅಲೆ ''ಬೆಡ್​ ರೋಟಿಂಗ್​'' ಇದು ಬೆಡ್​ರೂಮಿಗೆ ಸಂಬಂಧಿಸಿದ್ದು. ಏನಿದರ ಮರ್ಮ?

Bed Rotting: ಹಾಸಿಗೇಲೇ ಕೊಳೀತೀಯಾ ಯಾರಾದರೂ ಬೈದ್ರೆ ನಾನು ಟ್ರೆಂಡ್ ಸೆಟ್ಟರ್ ಅಂತ ಖುಷಿಪಡಿ
ಸೌಜನ್ಯ : ಅಂತರ್ಜಾಲ
Follow us on

Sleeping : ಒಮ್ಮೊಮ್ಮೆ ನಮಗೆ ಎಷ್ಟೊಂದು ಜಾಡ್ಯ ಹಿಡಿದಿರುತ್ತದೆಯೆಂದರೆ ಬೆಳಿಗ್ಗೆ ಹಾಸಿಗೆ ಬಿಟ್ಟೇಳುವುದೇ ಬೇಡವಾಗಿರುತ್ತದೆ. ಬಹಳ ಬೇಸರವಾಗಿದ್ದಲ್ಲಿ, ರಾತ್ರಿ ಸರಿಯಾಗಿ ನಿದ್ದೆಯಾಗಿರದಿದ್ದಲ್ಲಿ, ಹಿಂದಿನ ರಾತ್ರಿ ಸ್ವಲ್ಪ ಅಳತೆ ಮೀರಿ ‘ಸೇವನೆ’ ಆಗಿದ್ದಲ್ಲಿ,  ಮತ್ತಿನ್ನು ವಾರಾಂತ್ಯದ ನಂತರ ಸೋಮವಾರ ಬೆಳಿಗ್ಗೆ ಹಾಗಾಗುವುದು ಅಸಹಜವೇನಲ್ಲ. ಹಾಸಿಗೆಯಲ್ಲೇ ಬಿದ್ದುಕೊಂಡು ಹೊರಳಾಡುತ್ತಿರುವುದೇ (Bed Rotting) ಜೀವನದ ಪರಮ ಧ್ಯೇಯ ಎಂಬಂತೆ ವರ್ತಿಸಿದಾಗ ನಿಮ್ಮ ಗಂಡನೋ, ಹೆಂಡತಿಯೋ, ತಾಯಿಯೋ, “ಏನೋ ಅದೂ… ಹಾಸಿಗೇಲೇ ಬಿದ್ದು ಕೊಳೀತಾ ಇದೀಯಾ?” ಎಂದು ಹಲವರು ಬೈಸಿಕೊಂಡಿರಬಹುದು. ಆದರೆ “ಹಾಸಿಗೆ ಕೊಳೆತ” ಎನ್ನುವುದೊಂದು ಅಭೂತಪೂರ್ವ ಟ್ರೆಂಡ್ ಆಗಿ ಬೆಳೆಯುತ್ತಿರುವುದು ನಿಮಗೆ ಗೊತ್ತಿತ್ತೇ?

ಇದನ್ನೂ ಓದಿ : Viral Video: ಉತ್ತರ ಕರ್ನಾಟಕ ನನ್ನ ಬೇರು; ಮೇಘನಾ ಗಾಂವಕರ್​ ಇಳಕಲ್ ಸೀರೆ ಸಂಭ್ರಮ

ಈ ಹಿಂದೆ “ಸಂಪೂರ್ಣ ಶವರ್” ಎಂಬ ಅಲೆ ಎದ್ದಿತ್ತು. ಬಚ್ಚಲಿನಲ್ಲಿ ಹಾಡು ಕೇಳುತ್ತ ದೇಹದ ಒಂದೊಂದೇ ಭಾಗವನ್ನು ಸಾವಕಾಶ ಉಜ್ಜುತ್ತ ಯುವಜನರು ಗಂಟೆಗಟ್ಟಲೇ ಜಳಕ ಮಾಡುವುದೇ ಸಂಪೂರ್ಣ ಶವರ್. ಈಗ ಇದು ಅದರ ತದ್ವಿರುದ್ಧ: ಹಾಸಿಗೆ ಹೊದಿಕೆಗಳನ್ನು ಮಡಿಸದೇ, ಕೊಳೆಯಾಗಿದ್ದರೂ ಬದಲಿಸದೇ, ಹಂದಿಗಳು ಕೆಸರಿನಲ್ಲಿ ಬಿದ್ದು ಹೊರಳಾಡಿದಂತೆ ಅವುಗಳಲ್ಲೇ ಇಡೀ ದಿನ ಬಿದ್ದು ಹೊರಳಾಡುವುದೇ ಹಾಸಿಗೆ ಕೊಳೆತ ಎಂಬ ಹೊಸ ಟ್ರೆಂಡ್.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!

“ನಮ್ಮಲ್ಲಿ ಅನೇಕರು ಇದನ್ನು ಮಾಡುತ್ತೇವೆ. ಸುಸ್ತಾದಾಗ, ದುಗುಡವಿದ್ದಾಗ ಹಾಸಿಗೆ ಹಿಡಿಯಬೇಕೆನ್ನಿಸುವುದು ನಿಜ. ಅದು ನಮ್ಮನ್ನು ನಿದ್ದೆಗೂ ತಳ್ಳಬಹುದು. ಆದರೆ ಆ ನಿದ್ದೆ ನಮ್ಮನ್ನು ಪುನಶ್ಚೈತನ್ಯಕಾರಿಯೋ ಅಥವಾ ಜಾಡ್ಯಕ್ಕೆ ದಾರಿ ಮಾಡಿಕೊಡುವಂಥದ್ದೋ ಎಂಬ ಅರಿವಿರಬೇಕು,” ಎಂದು ಈ ಟ್ರೆಂಡ್ ಬಗ್ಗೆ ಮನೋವಿಜ್ಞಾನಿಯೊಬ್ಬರು ಎಚ್ಚರವಿತ್ತಿದ್ದಾರೆ.

ಇದನ್ನೂ ಓದಿ : Viral Video: ಕಪ್ಪಾ ಕ್ಲಾಸಿಕಲ್​ ವಿಥ್ ಕಾಫಿ ಗ್ಲಾಸ್​; 5 ಲಕ್ಷ ಜನರು ಮೆಚ್ಚಿದ ಈ ರೀಲ್ಸ್

ಇದೂ ಒಂದು ಟ್ರೆಂಡಾ ಅಂತ ನಿಮಗನ್ನಿಸಬಹುದು. ಇದೂ ಒಂದು ಸುದ್ದಿಯಾ ಅಂತಲೂ ಅನ್ನಿಸಬಹುದು. ಏನು ಮಾಡುವುದು? ಈ ಡಿಜಿಟಲ್ ಯುಗದಲ್ಲಿ ನಾವೆಲ್ಲ ಹಗಲೂ ರಾತ್ರಿ ಸ್ಕ್ರಾಲ್ ಮಾಡುತ್ತ, ಅದೂ ಹಾಸಿಗೆಯಲ್ಲಿ ಪವಡಿಸಿ, ಬೇಕಾದ ಬೇಡಾದ ಮಾಹಿತಿಯನ್ನು ಕಬಳಿಸುತ್ತ ಸಮಯ ಕಳೆಯುತ್ತಿರುವಾಗ ಇಂಥವು ಟ್ರೆಂಡ್‌ಗಳಾಗದಿರುತ್ತವೆಯೇ? ಯೋಚಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:04 pm, Thu, 8 June 23