ಧರ್ಮಶಾಲಾದ ಕಿಕ್ಕಿರಿದ ಬೀದಿಯಲ್ಲಿ ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ ಈ ಪುಟ್ಟ ಬಾಲಕ! ವಿಡಿಯೋ ನೋಡಿ

ಧರ್ಮಶಾಲೆಯ ಬೀದಿಯಲ್ಲಿ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದು, ಮಾಸ್ಕ್​ ಧರಿಸದೇ ಇದ್ದವರಿಗೆ ಪುಟ್ಟ ಬಾಲಕನೊಬ್ಬ ಗದರುತ್ತಿದ್ದಾನೆ. ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ.

ಧರ್ಮಶಾಲಾದ ಕಿಕ್ಕಿರಿದ ಬೀದಿಯಲ್ಲಿ ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ ಈ ಪುಟ್ಟ ಬಾಲಕ! ವಿಡಿಯೋ ನೋಡಿ
ಧರ್ಮಶಾಲೆಯ ಕಿಕ್ಕಿರಿದ ಬೀದಿಯಲ್ಲಿ ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ ಈ ಪುಟ್ಟ ಬಾಲಕ!
Follow us
TV9 Web
| Updated By: Digi Tech Desk

Updated on:Jul 07, 2021 | 4:13 PM

ಕೊರೊನಾ ವೈರಸ್​ ಸಾಂಕ್ರಾಮಿಕ ತಡೆಗಟ್ಟುವ ಕ್ರಮದ ಕುರಿತಾಗಿ ಜನರು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ಇದೀಗ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಜನರೆಲ್ಲಾ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಕೆಲವು ಕಟ್ಟು-ನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿಲ್ಲ. ಹೀಗಿರುವಾಗ ಪುಟ್ಟ ಬಾಲಕನೊಬ್ಬ ಜನರಿಗೆ ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ. ಜನರಿಗೆ ಗದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಬಾಲಕನ ತಿಳುವಳಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿನಲ್ಲಿ ಲಕ್ಷಾಂತರ ಪ್ರವಾಸಿಗರು ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದಾರೆ. ಪ್ರವಾಸಿಗರ ತಾಣಗಳಾದ ಶಿಮ್ಲಾ, ಧರ್ಮಶಾಲಾ ಹೀಗೆ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಧರ್ಮಶಾಲೆಯ ಬೀದಿಯಲ್ಲಿ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದು, ಮಾಸ್ಕ್​ ಧರಿಸದೇ ಇದ್ದವರಿಗೆ ಪುಟ್ಟ ಬಾಲಕನೊಬ್ಬ ಗದರುತ್ತಿದ್ದಾನೆ. ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ.

ಸಾಂಕ್ರಾಮಿಕ ಖಾಯಿಲೆಯ ಹರಡುವಿಕೆಯಿಂದ ಜನರು ಬೇಸತ್ತಿದ್ದಾರೆ. ಅದೆಷ್ಟೋ ಜನರು ಸಾವು-ಬದುಕಿನ ನಡುವೆ ಹೋರಾಡಿದ್ದಾರೆ. ಹೀಗಿರುವಾಗ ಕೊರೊನಾ ವೈರಸ್​ ತಡೆಗೆ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗಿರುವಾಗಲೂ ಸಹ ಜನರು ಬೇಜವಾಬ್ದಾರಿ ತೋರಿಸುತ್ತಿರುವುದನ್ನು ಕಂಡ ಬಾಲಕ ಜನರಿಗೆ ಮಾಸ್ಕ್​ ಧರಿಸುವಂತೆ ಗದರುತ್ತಿದ್ದಾನೆ. ಬಾಲಕನಿಗೆ ಧರಿಸಲು ಚಪ್ಪಲಿ ಸಹ ಇಲ್ಲ. ಆದರೆ ಆತನಿಗೆ ತಿಳುವಳಿಕೆ ಇದೆ. ಆತನು ಗದರುತ್ತಿರುವುದನ್ನು ನೋಡಿ, ಜನರು ನಗುತ್ತಾ ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.  ಇಲ್ಲಿ ಶಿಕ್ಷಣವಂತರು ಯಾರು? ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಗಮನಿಸುವಂತೆ ಪುಟ್ಟ ಬಾಲಕ ಮಾಸ್ಕ್​ ಧರಿಸಿ ಕೋಲು ಹಿಡಿದಿರುವುದನ್ನು ಕಾಣಬಹುದು. ಅವನ ಎದುರು ಹಾದು ಹೋಗುತ್ತಿರುವ ಎಲ್ಲರಿಗೂ ಸಹ ನಿಮ್ಮ ಬಳಿ ಮಾಸ್ಕ್​ ಎಲ್ಲಿದೆ? ಎಂದು ಪ್ರಶ್ನಿಸುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 2.47 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಮಾಸ್ಕ್​ ಧರಿಸುವಂತೆ ಜನರಿಗೆ ಎಚ್ಚರಿಕೆ ನೀಡುತ್ತಿರುವುದಕ್ಕೆ ಬಾಲಕನಿಗೆ ಶ್ಲಾಘನೆ ವ್ಯಕ್ತವಾಗಿದೆ. ಬೇಜವಾಬ್ದಾರಿಯುತ ಜನರಿಗಿಂದ ಆ ಪುಟ್ಟ ಬಾಲಕ ಶಿಕ್ಷಣವಂತ, ನಿಜವಾಗಿಯೂ ಆತನಿಗೆ ತಿಳುವಳಿಕೆ ಇದೆ, ದೇವರು ಆಶೀರ್ವದಿಸುತ್ತಾನೆ ಎಂದು ಇನ್ನೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ದಾರಿ ತಪ್ಪಿ ರಸ್ತೆಗೆ ಬಂದು ಅಲೆದಾಡುತ್ತಿರುವ 5 ಸಿಂಹಗಳು; ದೃಶ್ಯ ಕ್ಯಾಮರಾದಲ್ಲಿ ಸೆರೆ

Viral Video: ಗೋಲ್​ಗಪ್ಪಾ ಪ್ರಿಯೆ ವಧುವಿಗೆ ಪುರಿಯದ್ದೇ ಹಾರ.. ಕಿರೀಟ; ವಧುವಿಗೆ ಖುಷಿಯೋ ಖುಷಿ

Published On - 9:47 am, Wed, 7 July 21