Viral: ವಿಶ್ವದ ಅತೀ ಎತ್ತರದ ಹಾಗೂ ಕುಬ್ಜ ಮಹಿಳೆಯರಿಬ್ಬರ ಮೊದಲ ಭೇಟಿ ಹೇಗಿತ್ತು ನೋಡಿ…

ವಿಶ್ವದ ಅತೀ ಎತ್ತರದ ಮಹಿಳೆ ಎಂಬ ಗಿನ್ನೆಸ್‌ ದಾಖಲೆ ಬರೆದ ಟರ್ಕಿಯ ರುಮೇಸಾ ಗೆಲಿಗೊ ಹಾಗೂ ವಿಶ್ವದ ಅತೀ ಕುಬ್ಜ ಮಹಿಳೆ ಎಂಬ ಗಿನ್ನೆಸ್‌ ದಾಖಲೆ ಬರೆದ ಭಾರತದ ಜ್ಯೋತಿ ಅಮ್ಗೆ ಅವರು ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದು, ಈ ಇಬ್ಬರ ಮೊದಲ ಭೇಟಿಯ ಸುಂದರ ವಿಡಿಯೋವನ್ನು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್‌ ತನ್ನ ಅಧೀಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ಅಪರೂಪದ ಭೇಟಿಯ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ವೈರಲ್‌ ಆಗಿದ್ದು, ವಿಶ್ವದ ಅತೀ ಎತ್ತರದ ಹಾಗೂ ವಿಶ್ವದ ಅತೀ ಕುಳ್ಳಗಿನ ಮಹಿಳೆಯರಿಬ್ಬರನ್ನು ಕಂಡು ನೋಡುಗರು ಬೆರಗಾಗಿದ್ದಾರೆ. ವಿಶ್ವದ ಅತೀ ಎತ್ತರದ ಮಹಿಳೆ ದಾಖಲೆ ಬರೆದ ಟರ್ಕಿಯ ರುಮೇಸಾ ಗೆಲಿಗೊ ಹಾಗೂ ವಿಶ್ವದ ಅತೀ ಕುಬ್ಜ ಮಹಿಳೆ ಎಂಬ ಗಿನ್ನೆಸ್‌ ದಾಖಲೆ ಬರೆದ ಭಾರತದ ಜ್ಯೋತಿ ಅಮ್ಗೆ ಅವರು ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದು, ಈ ಇಬ್ಬರ ಮೊದಲ ಭೇಟಿಯ ಸುಂದರ ವಿಡಿಯೋವನ್ನು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್‌ ತನ್ನ ಅಧೀಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ

2024 ರ ಗಿನ್ನೆಸ್‌ ವಿಶ್ವ ದಾಖಲೆಯ ದಿನವನ್ನು ಆಚರಿಸುವ ಸಲುವಾಗಿ ಲಂಡನ್‌ನಲ್ಲಿ ವಿಶ್ವದ ಅತೀ ಎತ್ತರದ ಹಾಗೂ ಅತೀ ಕುಬ್ಜ ಮಹಿಳೆಯರಿಬ್ಬರು ಪರಸ್ಪರ ಭೇಟಿಯಾಗಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಸವೊಯ್ ಹೋಟೆಲ್‌ನಲ್ಲಿ ಈ ಇಬ್ಬರೂ ಭೇಟಿಯಾಗಿ, ಜೊತೆಯಾಗಿ ಕೂತು ಟೀ ಸವಿದಿದ್ದಾರೆ. ಈ ಅಪರೂಪದ ಭೇಟಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಇಬ್ಬರ ಎತ್ತರ ಎಷ್ಟು?

ವಿಶ್ವದ ಅತಿ ಎತ್ತರದ ಮಹಿಳೆ, ವೆಬ್ ಡೆವಲಪರ್ ಆಗಿರುವ 27 ವರ್ಷದ ರುಮೇಸಾ ಅವರ ಎತ್ತರ 7 ಅಡಿ 1 ಇಂಚು ((215.16 ಸೆಂ) ಮತ್ತು ನಮ್ಮ ಭಾರತದ 30 ವರ್ಷದ ಜ್ಯೋತಿ ಅಮ್ಗೆ ಅವರ ಎತ್ತರ 2 ಅಡಿ 1 ಇಂಚು (62.8 ಸೆಂ). ಈ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದು, ಟೀ ಸವಿಯುತ್ತಾ ತಮ್ಮ ಜೀವನದ ಕಥೆ ಮತ್ತು ಅನುಭವಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು guinnessworldrecords ಅಧೀಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಶಿಶುಗಳು ಅದಲು ಬದಲು; 60 ವರ್ಷಗಳ ಬಳಿಕ ತಮ್ಮ ಜನ್ಮ ರಹಸ್ಯ ತಿಳಿದು ಶಾಕ್‌ ಆದ ಮಹಿಳೆಯರು

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಿಶ್ವದ ಎತ್ತರದ ಹಾಗೂ ವಿಶ್ವದ ಅತ್ಯಂತ ಕುಳ್ಳಗಿನ ಮಹಿಳೆಯರಿಬ್ಬರ ಭೇಟಿಯ ಅಪರೂಪದ ಹಾಗೂ ಸುಂದರ ದೃಶ್ಯವನ್ನು ಕಾಣಬಹುದು. ಲಂಡನ್‌ನ ಹೋಟೆಲ್‌ ಒಂದರಲ್ಲಿ ಭೇಟಿಯಾದ ಈ ಇಬ್ಬರು ಚಹಾ ಸವಿಯುತ್ತಾ ಚಿಟ್‌ಚ್ಯಾಟ್‌ ನಡೆಸಿದ್ದಾರೆ.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 56.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್‌ ತುಂಬಾ ಅದ್ಭುತವಾದ ದೃಶ್ಯವಿದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎರಡು ಸುಂದರ ಮನಸುಗಳುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us