ಕೆಲ ಯುವಕರು ಶೋಕಿಗಾಗಿ ಏನೇನೋ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಹೀಗೆ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿದವರು ಅನೇಕರಿದ್ದಾರೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕಾಲೇಜ್ ಫೇರ್‌ವೆಲ್ ಪಾರ್ಟಿಯಲ್ಲಿ ಶೋಕಿ ಮಾಡಲು ಹೋಗಿ ಒಂದಷ್ಟು ಹುಡುಗರು ಪಜೀತಿಗೆ ಸಿಲುಕಿದ್ದಾರೆ. ಹೌದು ಫೇರ್‌ವೆಲ್ ಪಾರ್ಟಿಗೆ ಗ್ರ್ಯಾಂಡ್ ಎಂಟ್ರಿ ಕೊಡ್ಬೇಕು ಅಂತ ಹೋಗಿ ಇಲ್ಲೊಂದಷ್ಟು ವಿದ್ಯಾರ್ಥಿಗಳು ಚಲಿಸುತ್ತಿರುವ ಥಾರ್‌ನ ಬಾನೆಟ್ ಮೇಲೆ ಕುಳಿತು ಪ್ರಯಾಣಿಸಿದ್ದು, ಡ್ರೈವರ್ ಫಾಸ್ಟ್ ಆಗಿ ಗಾಡಿ ಓಡಿಸಲು ಶುರು ಮಾಡಿದಾಗ ಬಾನೆಟ್ ಮೇಲೆ ಕುಳಿತಿದ್ದ ವಿದ್ಯಾರ್ಥಿಗಳು ಬ್ಯಾಲೆನ್ಸ್ ಸಿಗದೆ ದೊಪ್ಪನೆ ಕೆಳಗೆ ಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, 12 ನೇ ತರಗತಿಯ ಒಂದಷ್ಟು ವಿದ್ಯಾರ್ಥಿಗಳು ತಮ್ಮ ಪೇರ್‌ವೆಲ್ ಪಾರ್ಟಿಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಹೋಗಿ ಪಜೀತಿಗೆ ಸಿಲುಕಿದ್ದಾರೆ. ಹೌದು ಕಪ್ಪು ಬಣ್ಣದ ಥಾರ್‌ನ ಬಾನೆಟ್ ಮೇಲೆ ಕುಳಿತು ಆ ವಿದ್ಯಾರ್ಥಿಗಳು ಕಾಲೇಜಿಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಹೋಗಿದ್ದು, ಆ ಸಂದರ್ಭದಲ್ಲಿ ಡ್ರೈವರ್ ಫಾಸ್ಟ್ ಆಗಿ ಗಾಡಿ ಓಡಿಸಲು ಶುರು ಮಾಡಿದಾಗ ಬಾನೆಟ್ ಮೇಲೆ ಕುಳಿತಿದ್ದ ವಿದ್ಯಾರ್ಥಿಗಳು ಬ್ಯಾಲೆನ್ಸ್ ಸಿಗದೆ ದೊಪ್ಪನೆ ಕೆಳಗೆ ಬಿದ್ದಿದ್ದಾರೆ.
मध्य प्रदेश का मामला pic.twitter.com/vWEjnS3IRN
— 🇮🇳Jitendra pratap singh🇮🇳 (@jpsin1) January 20, 2025
ಜಿತೇಂದ್ರ ಪ್ರತಾಪ್ ಸಿಂಗ್ (jithendra pratam singh) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕಪ್ಪು ಬಣ್ಣದ ಕಾರಿನ ಬಾನೆಟ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ದೊಪ್ಪನೆ ಕಾರಿನಿಂದ ಕೆಳಗೆ ಬೀಳುವಂತಹ ಭಯಾನಕ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇಎಂಐ ಅಲ್ಲ ಫುಲ್ ಕ್ಯಾಶ್ ಕೊಟ್ಟು ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಸಿದ ಭಿಕ್ಷುಕ; ವಿಡಿಯೋ ವೈರಲ್
ಜನವರಿ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರಿಗಲ್ಲ, ಇವರ ಪೋಷಕರಿಗೆ ಬುದ್ಧಿ ಹೇಳ್ಬೇಕುʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆಲ್ಲಾ ಮಾಡಲು ಕಾಲೇಜಿನಲ್ಲಿ ಅನುಮತಿಯಿದೆಯೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ