ಇಎಂಐ ಅಲ್ಲ ಫುಲ್ ಕ್ಯಾಶ್ ಕೊಟ್ಟು ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಸಿದ ಭಿಕ್ಷುಕ; ವಿಡಿಯೋ ವೈರಲ್
ಈಗಂತೂ ಶ್ರೀಮಂತರು ಮಾತ್ರವಲ್ಲ ಸಾಮಾನ್ಯ ಜನರು ಕೂಡಾ ಐಫೋನ್ ಕೈಯಲ್ಲಿಟ್ಟುಕೊಂಡಿರುತ್ತಾರೆ. ಹೀಗೆ ಹೆಚ್ಚಿನವರು ಇಎಂಐ ಮೂಲಕವೇ ಈ ದುಬಾರಿ ಫೋನ್ ಖರೀದಿ ಮಾಡಿರುತ್ತಾರೆ. ಆದ್ರೆ ಇಲ್ಲೊಬ್ಬ ಭಿಕ್ಷುಕ ಫುಲ್ ಕ್ಯಾಶ್ ಕೊಟ್ಟೇ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿ ಮಾಡಿದ್ದು, ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಈತನ ಕೈಯಲ್ಲಿದ್ದ ದುಬಾರಿ ಬೆಲೆಯ ಫೋನ್ ಕಂಡು ಜನ ಫುಲ್ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಬಹುತೇಕ ಹೆಚ್ಚಿನವರಿಗೆ ಬ್ರ್ಯಾಂಡೆಡ್ ಫೋನ್‌ಗಳಲ್ಲಿ ಒಂದಾದ ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ದುಬಾರಿ ಬೆಲೆಯ ಫೋನನ್ನು ಹೆಚ್ಚಿನವರು ಇಎಂಐ ನಲ್ಲಿ ಖರೀದಿ ಮಾಡಿದ್ರೆ, ಇನ್ನೂ ಕೆಲವರು ಈ ಫೋನ್ ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋ ಕಾರಣಕ್ಕೆ ಇಷ್ಟ ಇದ್ರೂ ಖರೀದಿಸುವ ಗೋಜಿಗೆ ಹೋಗಲ್ಲ. ಇಂತಹ ಜನಗಳ ನಡುವೆ ಇಲ್ಲೊಬ್ಬ ಭಿಕ್ಷುಕ ಭಿಕ್ಷೆ ಬೇಡಿಯೇ ಇಎಂಐ ಬದಲು ಫುಲ್ ಕ್ಯಾಶ್ ಕೊಟ್ಟು ದುಬಾರಿ ಬೆಲೆಯ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿ ಮಾಡಿದ್ದು, ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಈತನ ಕೈಯಲ್ಲಿದ್ದ ದುಬಾರಿ ಬೆಲೆಯ ಫೋನ್ ಕಂಡು ಜನ ಫುಲ್ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ರಾಜಸ್ಥಾನದ ಅಜ್ಮೀರ್‌ನ ವಿಕಲಾಂಗ ಚೇತನ ಭಿಕ್ಷುಕ ತಾನು ಭಿಕ್ಷೆ ಬೇಡಿದ ಹಣದಿಂದ ಸುಮಾರು 1.44 ಲಕ್ಷ ಮೌಲ್ಯದ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿ ಮಾಡಿದ್ದಾನೆ. ಈತ ಭಿಕ್ಷೆ ಬೇಡುತ್ತಾ ಬರುತ್ತಿದ್ದಾಗ ಈತನ ಕೈಯಲ್ಲಿ ಐಫೋನ್ ನೋಡಿದ ಜನ ಶಾಕ್ ಆಗಿ ನಿಮಗೆ ಈ ದುಬಾರಿ ಫೋನ್ ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಕೇಳಿದಾಗ, ಆ ಭಿಕ್ಷುಕ ತಾನು ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ ಹಣದಿಂದ ಇಎಂಐ ಇಲ್ದೇ ಫುಲ್ ಕ್ಯಾಶ್ ಕೊಟ್ಟೇ ಮೊಬೈಲ್ ಖರೀದಿಸಿರುವುದಾಗಿ ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು rohit_informs ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಿಕ್ಷುಕ ಇದು ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್, ತಾನು ಭಿಕ್ಷಾಟನೆಯ ಮೂಲಕ ಸಂಗ್ರಹಿಸಿದ ಹಣದಿಂದ ಇಎಂಐ ಇಲ್ದೇ ಫುಲ್ ಕ್ಯಾಶ್ ಕೊಟ್ಟೇ ಮೊಬೈಲ್ ಖರೀದಿಸಿರುವುದಾಗಿ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಏರ್ ಹೋಸ್ಟೆಸ್ ಕೆಲಸ ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ ಯುವತಿ; ಕಾರಣ ಏನ್ ಗೊತ್ತಾ?
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿದಾಗ ಭಿಕ್ಷುಕರಲ್ಲ, ಬಡವರು ನಾವು ಎಂದು ಅನ್ನಿಸುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ವಿಡಿಯೋ ಮಾಡುವ ಸಲುವಾಗಿ ಆತನಿಗೆ ಐಫೋನ್ ಕೊಟ್ಟಿರಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಭಿಕ್ಷುಕನ ಕೈಯಲ್ಲಿ ಐಫೋನ್ ಕಂಡು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ