Viral: ಹೆಂಡ್ತಿ ಸಹಾಯದಿಂದ ಬೆಂಚ್‌ ಪ್ರೆಸ್‌ ವ್ಯಾಯಾಮ ಮಾಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ; ವಿಡಿಯೋ ವೈರಲ್

ಜಿಮ್‌ನಲ್ಲಿ ನಡೆಯುವ ಅವಘಡಗಳಿಗೆ ಸಂಬಂಧಿಸಿದ ಕೆಲವೊಂದು ಆಘಾತಕಾರಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ಟ್ರೈನರ್‌ ಇರ್ಲಿಲ್ಲ ಎಂದು ಹೆಂಡ್ತಿ ಸಹಾಯದಿಂದ ಬೆಂಚ್‌ ಪ್ರೆಂಸ್‌ ವ್ಯಾಯಾಮ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾನೆ. ಭಾರ ತಡೆಯಲಾರದೆ 165 ಕೆಜಿ ತೂಕದ ಸ್ಪಾಟರ್‌ ಆತನ ಮೇಲೆಯೇ ಬಿದ್ದಿದ್ದು, ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Viral: ಹೆಂಡ್ತಿ ಸಹಾಯದಿಂದ ಬೆಂಚ್‌ ಪ್ರೆಸ್‌ ವ್ಯಾಯಾಮ ಮಾಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ; ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ
Edited By:

Updated on: Feb 12, 2025 | 3:03 PM

ಈಗಂತೂ ಯುವಕರಲ್ಲಿ ಫಿಟ್‌ನೆಸ್‌ ಪ್ರಜ್ಞೆ ಹೆಚ್ಚಾಗಿದ್ದು, ಹೆಚ್ಚಿನವರು ಜಿಮ್‌ಗೆ ಹೋಗಿ ಅತಿಯಾಗಿ ದೇಹ ದಂಡಿಸುತ್ತಿದ್ದಾರೆ. ಹೀಗೆ ದೇಹವನ್ನು ಫಿಟ್‌ ಆಗಿ ಇಡಬೇಕೆಂಬ ಆತುರದಲ್ಲಿ ಜಿಮ್‌ನಲ್ಲಿ ಕೆಲವು ಅವಘಡಗಳಿಗೆ ತುತ್ತಾದವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಟ್ರೈನರ್‌ ಇರ್ಲಿಲ್ಲ ಎಂದು ಹೆಂಡ್ತಿ ಸಹಾಯದಿಂದ ಬೆಂಚ್‌ ಪ್ರೆಸ್‌ ವ್ಯಾಯಾಮ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾನೆ. ಹೌದು ಭಾರ ತಡೆಯಲಾರದೆ 165 ಕೆಜಿ ತೂಕದ ಸ್ಪಾಟರ್‌ ಆತನ ಮೇಲೆಯೇ ಬಿದ್ದಿದ್ದು, ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಆಘಾತಕಾರಿ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಜಿಮ್‌ನಲ್ಲಿ ಸ್ಪಾಟರ್‌ ತರಹದ ಭಾರದ ವಸ್ತುಗಳನ್ನು ಎತ್ತಿ ವ್ಯಾಯಾಮ ಮಾಡುವಾಗ ಸೂಕ್ತ ತರಬೇತಿಯನ್ನು ಪಡೆಯುವುದು ಅತ್ಯಗತ್ಯ. ವೃತ್ತಿಪರ ಟ್ರೈನರ್‌ ಇಲ್ಲದೆ ಹೀಗೆ ಬೇಕಾಬಿಟ್ಟಿ ವ್ಯಾಯಾಮ ಮಾಡಲು ಹೋದ್ರೆ ಎಡವಟ್ಟು ಆಗೋದಂತೂ ಖಂಡಿತ. ಅಂತಹದ್ದೇ ಘಟನೆ ಇದೀಗ ನಡೆದಿದ್ದು, ಸಹಾಯಕ್ಕೆ ಯಾರೂ ಇರಲಿಲ್ಲವೆಂದು ವ್ಯಕ್ತಿಯೊಬ್ಬ ಹೆಂಡ್ತಿ ಸಹಾಯದಿಂದ 165 ಕೆಜಿ ಸ್ಪಾಟರ್‌ ಎತ್ತಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಬೆಂಚ್‌ ಪ್ರೆಸ್‌ ವ್ಯಾಯಾಮ ಮಾಡುವಾಗ 165 ಕೆಜಿ ತೂಕದ ಸ್ಪಾಟರ್‌ ಆತನ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ


imjustbait ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಂಡ್ತಿ ಸಹಾಯದಿಂದ ಬೆಂಚ್‌ ಪ್ರೆಸ್‌ ವ್ಯಾಯಾಮ ಮಾಡುವ ದೃಶ್ಯವನ್ನು ಕಾಣಬಹುದು. ಟ್ರೈನರ್‌ ಇರ್ಲಿಲ್ಲ ಎಂದು ಹೆಂಡ್ತಿ ಸಹಾಯದಿಂದ ವ್ಯಾಯಾಮ ಮಾಡಲು ಹೋಗಿದ್ದು, ಆ ಸಂದರ್ಭದಲ್ಲಿ ಸ್ಪಾಟರ್‌ ಆತನ ಮೇಲೆಯೇ ಬಿದ್ದಿದೆ. ಕೊನೆಗೆ ಹೆಂಡತಿ ತನ್ನ ಸಮಯ ಪ್ರಜ್ಞೆಯಿಂದ ಆತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾಳೆ.

ಇದನ್ನೂ ಓದಿ: ಮುಂದುವರೆಸಲು ಕಷ್ಟವಾಗ್ತಿದೆ; ಗಬಗಬನೆ ತಿನ್ನೋ ಕೆಲಸಕ್ಕೆ ನಿವೃತ್ತಿ ಘೋಷಿಸಿದ ಫೇಮಸ್‌ ಫುಡ್‌ ಇನ್‌ಫ್ಲುಯೆನ್ಸರ್

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 19.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದರಲ್ಲಿ ಆತನ ಹೆಂಡ್ತಿಯದ್ದು ಯಾವುದೇ ತಪ್ಪಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಕೆ ಆತನನ್ನು ಕಾಪಾಡಲು ಪಟ್ಟ ಶ್ರಮಕ್ಕೆ ಒಂದು ಸಲಾಂʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಷ್ಟೆಲ್ಲಾ ರಿಸ್ಕ್‌ ತೆಗೆದುಕೊಳ್ಳುವ ಅವಶ್ಯಕತೆ ಬೇಕಿತ್ತಾʼ ಎಂದು ಕೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ