Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?

ಪುಟ್ಟ ಮಗುವನ್ನು ಮಲಗಿಸಿದಂತೆಯೇ ಲಾಲಿ ಹಾಡುತ್ತಾ ಕತ್ತೆಯನ್ನು ಮಲಗಿಸುತ್ತಿದ್ದಾನೆ. ಹಾಡು ಕೇಳಿಸಿಕೊಳ್ಳುತ್ತಾ ಕತ್ತೆ ಮಲಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿ..

Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?
ಹಾಡು ಹೇಳುತ್ತಾ ಕತ್ತೆಯನ್ನು ಮಲಗಿಸುತ್ತಿರುವ ವ್ಯಕ್ತಿ
Updated By: shruti hegde

Updated on: Oct 04, 2021 | 11:02 AM

ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯರನ್ನು ಹಚ್ಚಿಕೊಂಡಷ್ಟು ಮನುಷ್ಯರೇ ಮನುಷ್ಯರನ್ನು ಹಚ್ಚಿಕೊಳ್ಳುವುದಿಲ್ಲ. ಕೆಲವು ಮೂಕ ಪ್ರಾಣಿಗಳೊಡನೆ ಸ್ನೇಹ ಗಟ್ಟಿಯಾಗಿರುತ್ತವೆ. ಮೂಕ ಪ್ರಾಣಿಗಳಾದರೂ ಸಹ ನಮ್ಮೆಲ್ಲಾ ನೋವು, ಕಷ್ಟಗಳನ್ನು ಅರ್ಥೈಸಿಕೊಂಡು ಸಂತೈಸುತ್ತವೆ. ನಾವು ಎಷ್ಟು ಪ್ರೀತಿ ನೀಡುತ್ತೇವೆಯೋ ಅಷ್ಟೇ ಪ್ರೀತಿಯನ್ನು ಪ್ರಾಣಿಗಳೂ ಸಹ ನಮಗೆ ನೀಡುತ್ತವೆ. ಪ್ರಾಣಿ ಮಾನವರ ನಡುವಿನ ಹೃದಯಸ್ಪರ್ಶಿ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರಿಗೂ ಇಷ್ಟವಾಗುವಂತಹ ವಿಡಿಯೋವಿದು.

ವ್ಯಕ್ತಿ ಕತ್ತೆಯನ್ನು ಎತ್ತಿಕೊಂಡಿದ್ದಾನೆ. ಆತನ ಭುಜದ ಮೇಲೆ ಕತ್ತೆ ಮಲಗಿರುವುದನ್ನು ನೋಡಬಹುದು. ಪುಟ್ಟ ಮಗುವನ್ನು ಮಲಗಿಸಿದಂತೆಯೇ ಲಾಲಿ ಹಾಡುತ್ತಾ ಕತ್ತೆಯನ್ನು ಮಲಗಿಸುತ್ತಿದ್ದಾನೆ. ಹಾಡು ಕೇಳಿಸಿಕೊಳ್ಳುತ್ತಾ ಕತ್ತೆ ಮಲಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ವಿಡಿಯೋವನ್ನು ಇಷ್ಟಪಟ್ಟಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗಿನಿಂದ ಸುಮಾರು 41,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದ್ಭುತ ವಿಡಿಯೋ ಎಂದು ಓರ್ವರು ಅಭಿಪ್ರಾಯ ತಿಳಿಸಿದ್ದಾರೆ. ಹಾಡನ್ನು ಕೇಳುತ್ತಿರುವ ಕತ್ತೆ ಆನಂದಿಸುತ್ತಿದೆ ಸುಂದರ ದೃಶ್ಯವಿದು ಎಂದು ಮತ್ತೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ

Viral Video: ನೀರು ಚೆಲ್ಲಿದ್ದ ನೆಲದ ಮೇಲೆ ವ್ಯಕ್ತಿಯ ಸ್ಟಂಟ್​; ಆಮೇಲೇನಾಯ್ತು? ವಿಡಿಯೋ ನೋಡಿ