ಮಾನವ ಜನ್ಮ ಅತ್ಯಂತ ಶ್ರೇಷ್ಠ ಜನ್ಮ ಎಂಬ ನಂಬಿಕೆಯಿದೆ. ಆದರೆ ಕೆಲವರು ಮಾತ್ರ ಮಾನವನ ರೂಪವನ್ನು ಇಷ್ಟಪಡುವುದಿಲ್ಲ. ಅದಕ್ಕೇ ಡಿಫರೆಂಟ್ ಆಗಿ ಕಾಣಬೇಕು ಎಂಬ ಆಸೆಯಲ್ಲಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಡಿಕೊಂಡಿರುವ ಟ್ಯಾಟೂ ಮತ್ತು ಶಸ್ತ್ರಚಿಕಿತ್ಸೆಗಳ ರೂಪಾಂತರಗಳನ್ನು ನೋಡಿದ್ರೆ ಭಯ ನಡುಕ ಶುರುವಾಗುತ್ತೆ. ಬಹುತೇಕ ಜನರು ಅಂತಹ ಲುಕ್ಗಳನ್ನು ಇಷ್ಟಪಡದಿದ್ದರೂ ತಮ್ಮಿಷ್ಟದಂತೆ ಬದುಕುವ ಇಂತಹ ಒಂದು ವರ್ಗವಿದೆ. ಈ ವರ್ಗಕ್ಕೆ ಸೇರಿದವರಲ್ಲಿ ಪೆಡ್ರೊ ಕೆನ್ಸೊ ಕೂಡ ಒಬ್ಬರು.
28 ವರ್ಷದ ಬ್ರೆಜಿಲ್ನ ಪೆಡ್ರೊ ಕೆನ್ಸೊ ತನ್ನ ಮಾನವ ರೂಪವನ್ನು ಕಿಂಚಿತ್ತು ಇಷ್ಟಪಡುತ್ತಿರಲಿಲ್ಲ. ಆತನಿಗೆ ತಾನು ರಾಕ್ಷಸನಂತೆ ಕಾಣಬೇಕೆಂಬ ಹಂಬಲವಿತ್ತು. ಅದರಂತೆ ಕೊನೆಗೂ ಪೆಡ್ರೊ ತನ್ನ ಲುಕ್ನ್ನೇ ಬದಲಿಸಿದ್ದಾನೆ. ಅದು ದೆವ್ವ ಅಥವಾ ರಾಕ್ಷಸ ಅವತಾರದಂತೆ ಎಂಬುದೇ ವಿಶೇಷ. ಆರಂಭದಿಂದಲೂ ಟ್ಯಾಟೂ ಮೇಲೆ ಕ್ರೇಜ್ ಹೊಂದಿದ್ದ ಪೆಡ್ರೊ ಅದರಿಂದ ಮಾತ್ರ ಸಂತುಷ್ಟನಾಗಿರಲಿಲ್ಲ. ಮುಖ ಮೇಲೆಲ್ಲ ಟ್ಯಾಟೂ ಹಾಕಿಸಿಕೊಂಡ ಪೆಡ್ರೊ ಆ ಬಳಿಕ ಕಣ್ಣಿನ ಬಿಳಿ ಭಾಗದಲ್ಲೂ ಹಚ್ಚೆ ಹಾಕಿಸಿಕೊಂಡಿದ್ದರು. ಅಲ್ಲಿಗೆ ಮುಗಿಯಿತು ಅಂದುಕೊಂಡರೆ ಇಲ್ಲ. ಇದಾದ ಬಳಿಕ ಕೂಡ ದೇಹದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲು ಪೆಡ್ರೊ ಬಯಸಿದ್ದ.
ಈ ವೇಳೆ ನೆನಪಾಗಿದ್ದೇ ರಾಕ್ಷಸನ ಕೊಂಬು. ಅಷ್ಟೇ ಸಾಕಾಯ್ತು ಪೆಡ್ರೊ ತನ್ನ ತಲೆಬುರುಡೆಯಲ್ಲಿ ಲೋಹದ ಕೊಂಬುಗಳನ್ನು ಕೂಡ ಫಿಕ್ಸ್ ಮಾಡಿದ್ದಾನೆ. ಇದೀಗ ಮನೆಯಿಂದ ಪೆಡ್ರೊ ಕೆನ್ಸೊ ಹೊರಬಂದರೆ ದೆವ್ವ ಬಂತು ಎಂದು ಮಕ್ಕಳು ಹೆದರಿ ಓಡುತ್ತಾರೆ. ಜನವರು ಡೆವಿಲ್ ಎಂದೇ ಕರೆಯುತ್ತಾರೆ. ಆದರೆ ಇದ್ಯಾವೂದು ಕೂಡ ಪೆಡ್ರೊಗೆ ಮುಖ್ಯವಲ್ಲ. ಇದೀಗ ಎಲ್ಲರಿಗಿಂತ ತಾನು ಭಿನ್ನ ಎಂಬ ಖುಷಿಯಲ್ಲಿ ಓಡುತ್ತಿದ್ದಾರೆ 28 ವರ್ಷದ ಈ ಯುವಕ.
ಮುಖದ ಮೇಲೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡಿರುವ ಪೆಡ್ರೊ ಕಣ್ಣುಗುಡ್ಡೆಗಳನ್ನು ಹಚ್ಚೆ ಹಾಕಿ, ಬಿಳಿ ಭಾಗವನ್ನು ಕಪ್ಪಾಗಿಸಿದ್ದಾರೆ. ಹಾಗೆಯೇ ಶಸ್ತ್ರಚಿಕಿತ್ಸೆಯ ಮೂಲಕ ನಾಲಿಗೆಯನ್ನು ಕತ್ತರಿಸಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ತನ್ನ ಕಿವಿಗಳನ್ನು ಅರ್ಧ ಕತ್ತರಿಸಿದ್ದಾನೆ. ಅಂತಹ ಹುಚ್ಚುತನವನ್ನು ಯಾರಾದರೂ ಮಾಡ್ತಾರ ಎಂದು ಕೇಳಿದ್ರೆ ಸದ್ಯ ಉತ್ತರ 28ರ ಹರೆಯದ ಪೆಡ್ರೊ ಇದನ್ನೆಲ್ಲ ಮಾಡಿದ್ದಾನೆ.
ಇಷ್ಟಕ್ಕೆ ಮುಗಿಯಿತು ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಸದ್ಯದ ಪೆಡ್ರೊನ ಗುರಿ ಇಡೀ ದೇಹಕ್ಕೆ ಹಚ್ಚೆಹಾಕಿಸುವುದು. ಅಂದರೆ ದೇಹದ ಎಲ್ಲಾ ಭಾಗದಲ್ಲೂ ಟ್ಯಾಟೂ ಇರಬೇಕೆಂದು ಪೆಡ್ರೊ ಕೆನ್ಸೊ ಬಯಸುತ್ತಿದ್ದಾನೆ. ಹೀಗಾಗಿ ಶೀಘ್ರದಲ್ಲೇ ಮತ್ತೊಂದು ಅವತಾರದಲ್ಲಿ ಪೆಡ್ರೊ ಕೆನ್ಸೊ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(man modifying his body as devil horn on his head tattood eyes and face)