
ಬದುಕು (life) ಎಂದರೇನೇ ಹಾಗೆ, ಕೆಲವರಿಗೆ ನಿತ್ಯ ನಿರಂತರ ಹೋರಾಟ. ಹೌದು ಮಧ್ಯಮವರ್ಗ ಅಥವಾ ಬಡವರ್ಗದ ಜನರು ನಿತ್ಯವು ದುಡಿದರೆ ಮಾತ್ರ ಹೊಟ್ಟೆ ತುಂಬಲು ಸಾಧ್ಯ. ಕೆಲವರು ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಇನ್ನು ಕೆಲವರಿಗೆ ಕೂತು ತಿಂದರೂ ಕರಗದ ಸಂಪತ್ತು (wealth) ಇರುತ್ತದೆ. ಆದರೆ ರಸ್ತೆ ಬದಿಯಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿ ಬದುಕುವ ಜನರನ್ನು ನೋಡಿದಾಗ ಇವರಿಗಿಂತ ನಮ್ಮ ಬದುಕೇ ಆಗಬಹುದು ಎಂದೆನಿಸುತ್ತದೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿ ಹಾಗೂ ಮಕ್ಕಳ ಜೊತೆಗೆ ಸೇರಿಕೊಂಡು ಒಂದೊತ್ತಿನ ಊಟಕ್ಕಾಗಿ ಹೋರಾಡುತ್ತಿರುವುದನ್ನು ನೋಡಬಹುದು.
ಹೊಸ ಪೀಳಿಗೆಯ ಮುಕ್ತ ಚಿಂತಕರು ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತನ್ನ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಹೆಗಲ ಮೇಲೆ ನಿಲ್ಲಿಸಿಕೊಂಡು ಬ್ಯಾಲೆನ್ಸ್ ಮಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಅಲ್ಲೇ ಇರುವ ಜನರು ಈ ವ್ಯಕ್ತಿ ಅಪಾಯಕಾರಿ ಸಾಹಸವನ್ನು ನೋಡುತ್ತಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಬೈಕ್ ನಲ್ಲಿ ಸ್ಟಂಟ್ ಮಾಡಲು ಹೋಗಿ ರಸ್ತೆಗೆ ಬಿದ್ದ ಯುವಕ; ವಿಡಿಯೋ ವೈರಲ್
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ಇದು ನಿಜಕ್ಕೂ ಅಪಾಯಕಾರಿಯಾಗಿದೆ. ದಯವಿಟ್ಟು ಅಪಾಯಕಾರಿ ಸಾಹಸವನ್ನು ಪ್ರಯತ್ನಿಸಬೇಡಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಹೊಟ್ಟೆ ತುಂಬಿಸಿಕೊಳ್ಳಲು ಇವರಿಗೆ ಬೇರೆ ಯಾವ ಕೆಲಸವಿದೆ ಹೇಳಿ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ನಿತ್ಯ ನಿರಂತರ ಹೋರಾಟದ ಬದುಕು ನೋಡಿದಾಗ ಕರುಳು ಚುರ್ ಎನ್ನುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ