
ಮನೆ, ಮಠ, ಮಕ್ಕಳು, ಸಂಸಾರ ಎಲ್ಲವನ್ನು ಬಿಟ್ಟು ಕೆಲಸವೊಂದೇ ನನ್ನ ಜಗತ್ತು ಎನ್ನುವ ಗಂಡಸರ ಮುಂದೆ, ಈ ವ್ಯಕ್ತಿ ವಿಭಿನ್ನವಾಗಿ ಕಾಣುತ್ತಾರೆ. . ಕೆಲಸ ದಿನದ 24 ಗಂಟೆ ದುಡ್ಡು ಮಾಡುವ ಬಗ್ಗೆ ಚಿಂತೆ. ಈ ಚಿಂತೆಯ ನಡುವೆ ನಮ್ಮನ್ನು ಪ್ರೀತಿಸುವ ಕುಟುಂಬವನ್ನು ದೂರು ಮಾಡಿಕೊಳ್ಳುತ್ತಾರೆ. ಹಣದಿಂದ ಎಲ್ಲಾ ನಡೆಯುತ್ತದೆ ಎಂಬುವವರು ಈ ಸ್ಟೋರಿ ಓದಲೇಬೇಕು ನೋಡಿ. ತನ್ನ ಗರ್ಭಿಣಿ ಪತ್ನಿಯನ್ನು (pregnant wife) ನೋಡಿಕೊಳ್ಳಲು 1.2 ಕೋಟಿ ರೂ. ಸಂಬಳ ಸಿಗುವ ಕೆಲಸವನ್ನು ತ್ಯಜಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರೆಡ್ಡಿಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ನನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1 ಕೋಟಿಕ್ಕಿಂತ ಹೆಚ್ಚು ಸಂಬಳ ಬರುವ ಕೆಲಸವನ್ನು ತ್ಯಜಿಸಿದೆ. ಅದು ತುಂಬಾ ಆರಾಮ ಹಾಗೂ ಮನೆಯಿಂದಲೇ ಮಾಡುವ ಕೆಲಸ ಆಗಿತ್ತು. ಮೊದಲು ನನ್ನ ಕೆಲಸವನ್ನು ಬಿಡಲು, ಪತ್ನಿ ಒತ್ತಾಯಿಸಿದರು, ಆದರೆ ನಾನೇ ಹೋಗುವೆ ಎಂದು ಹೇಳಿದ್ದೆ. ಆದರೆ ನನ್ನ ಪತ್ನಿಯ ಜವಾಬ್ದಾರಿ ನನ್ನದು, ನಾನು ಇದನ್ನು ನಿಭಾಯಿಸಲೇಬೇಕು. ಅದಕ್ಕಾಗಿ ನನ್ನ ಸಂಪೂರ್ಣ ಸಮಯವನ್ನು ಅವಳಿಗಾಗಿ ನೀಡಿಬೇಕು. ಅದಕ್ಕಾಗಿ ಈ ಕೆಲಸ ತ್ಯಜಿಸಿದೆ. ಒಂದು ವೇಳೆ ಮತ್ತೆ ಸೇರಿಕೊಳ್ಳಬೇಕು ಎಂದರೆ, ಆ ಅವಕಾಶ ಇದೆ. ಆದರೆ, ನನ್ನ ಕಾಲೇಜು ಮುಗಿದ 7 ವರ್ಷದ ನಂತರ ಈ ಕೆಲಸ ಸಿಕ್ಕಿದೆ. ಅಲ್ಲಿಂದ ಇಲ್ಲಿಯವರೆಗೆ ಸಂಬಳ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ, ಪತ್ನಿಗಾಗಿ ಮಿಡಿಯಿತು ಪತಿಯ ಹೃದಯ
ಈ ಪೋಸ್ಟ್ಗೆ ಬಳಕೆದಾರರಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದು, ಈ ರೀತಿ ಎಲ್ಲರೂ ಮಾಡಲು ಸಾಧ್ಯವಿಲ್ಲ. ನೀವು ಅದೃಷ್ಟವಂತರು ಮತ್ತು ನಿಮ್ಮ ಹೆಂಡತಿ ಕೂಡ ಅದೃಷ್ಟವಂತರು. ಅದಕ್ಕಾಗಿ ನೀವು ಸಂತೋಷವಾಗಿದ್ದೀರಾ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಇದು ಗಂಡನ ಜವಾಬ್ದಾರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದ್ಭುತ, ಜೀವನದ ಪ್ರಮುಖ ವ್ಯಕ್ತಿಗಳಿಗೆ ಆದ್ಯತೆ ನೀಡಿದ್ದೀರಿ, ಇದು ಅತ್ಯುತ್ತಮ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ