ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ವೈರಲ್ ಆಗಿರುವ ವಿಡಿಯೋ ಪ್ರಾಣಿ ಜತೆಗಿನ ನಂಟನ್ನು ವಿವರಿಸಿ ಹೇಳುವಂತಿದೆ. ಗಾಯಗೊಂಡ ಕೋತಿಯನ್ನು (Monkey) ಗಮನಿಸಿದ ವ್ಯಕ್ತಿಯೊಬ್ಬರು ಅದಕ್ಕೆ ತುರ್ತು ಚಿಕಿತ್ಸೆಯನ್ನು ನೀಡಲು ಮುಂದಾಗಿರುವ ವಿಡಿಯೋ ಇದಾಗಿದೆ. ರಸ್ತೆಯಲ್ಲಿ ಅಪಘಾತಕ್ಕೊಳಗಾದ ಮನುಷ್ಯರನ್ನೇ ತಿರುಗಿ ನೋಡದ ಈ ಕಾಲಘಟ್ಟದಲ್ಲಿ ಕೋತಿಯ ಜೀವ ರಕ್ಷಣೆಗಾಗಿ ಅದಕ್ಕೆ ಉಸಿರು ಕೊಡುತ್ತಿರುವ ವಿಡಿಯೋ ಎಲ್ಲರನ್ನು ಆಕರ್ಷಿಸಿದೆ. ವೈರಲ್ ಆದ ಈ ವಿಡಿಯೋವನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ.
ಡಿಸೆಂಬರ್ 10 ರಂದು ತಮಿಳುನಾಡಿನ ಪೆರಂಬಲೂರಿನಲ್ಲಿ ಈ ಘಟನೆ ನಡೆದಿದೆ. ಬೀದಿನಾಯಿಗಳ ದಾಳಿಗೆ ಗಾಯಗೊಂಡ ಕೋತಿಯನ್ನು ಪೆರಂಬಲೂರಿನ ಕುನ್ನಂ ತಾಲೂಕಿನ ಕಾರು ಚಾಲಕ ಎಂ. ಪ್ರಭು ರಕ್ಷಣೆ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಕೋತಿಯನ್ನು ಕಂಡ ಪ್ರಭು ಅದನ್ನು ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಆದರೆ ಕೋತಿಯ ನಾಡಿಮಿಡಿತ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ನಿಂತ ಸ್ಥಳದಲ್ಲಿಯೇ ಉಸಿರು ನೀಡಿ ಪ್ರಥಮ ಚಿಕಿತ್ಸೆಗೆ ಮುಂದಾಗಿದ್ದಾರೆ.
ಈ ವಿಡಿಯೋದಲ್ಲಿ ಪ್ರಭು ಎಂಬ ವ್ಯಕ್ತಿ ಕೋತಿಯ ಹೃದಯವನ್ನು ಪಂಪ್ ಮಾಡಲು ಪ್ರಾರಂಭಿಸಿದನ್ನು ಮತ್ತು ಕೋತಿಯ ಬಾಯಿಯ ಮೂಲಕ ಆಮ್ಲಜನಕವನ್ನು ಅಥವಾ ಉಸಿರು ನೀಡಿದ್ದನ್ನು ಗಮನಿಸಬಹುದು. ಮಂಗ ಮತ್ತೆ ಉಸಿರಾಡಲು ಪ್ರಾರಂಭಿಸಿದ್ದು, ಜೀವ ರಕ್ಷಣೆಯ ಪ್ರಯತ್ನ ಫಲ ನೀಡಿದೆ ಎಂದು ಜೋರಾಗಿ ಕೂಗಿ ಖುಷಿಪಟ್ಟಿದ್ದಾರೆ. ಬಳಿಕ ಹತ್ತಿರದ ಸರ್ಕಾರಿ ಪಶುವೈದ್ಯರ ಬಳಿಗೆ ಕರೆದೊಯ್ದು ಕೋತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
A 38-year-old man from #Perambalur tried to resuscitate a wounded monkey by breathing into its mouth. @NewIndianXpress @xpresstn #humanitywithheart pic.twitter.com/iRMTNkl8Pn
— Thiruselvam (@Thiruselvamts) December 12, 2021
ಟ್ವಿಟರ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹೃದಯಸ್ಪರ್ಶಿ ಈ ವಿಡಿಯೋ ಕಂಡ ನೆಟ್ಟಿಗರು ಕಮೆಂಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜನರು ದೇವರನ್ನು ಎಲ್ಲೆಲ್ಲಿ ಹುಡುಕುತ್ತಾರೆ. ನನಗೆ ಗೊತ್ತಿಲ್ಲ. ಅಲ್ಲಿ ನೋಡು ದೇವರು ನಿನ್ನ ಮುಂದೆ ಇದ್ದಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದು, ಮತ್ತೊಬ್ಬರು ನಿಮ್ಮ ಪೋಷಕರು ತುಂಬಾ ಅದೃಷ್ಟವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್
Viral Video: ಮ್ಯೂಸಿಕಲ್ ಚೇರ್ ಆಟದ ಕೊನೆಯಲ್ಲಿ ದೊಪ್ಪನೆ ಬಿದ್ದ ಯುವತಿ; ಕುರ್ಚಿ ಸತ್ತಿದೆ ಎಂದ ನೆಟ್ಟಿಗರು
Published On - 12:38 pm, Tue, 14 December 21