AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಾಂಡೋಮ್ ಮಾರಿ ಭರ್ಜರಿ ಲಾಭ ಗಳಿಸಿದ ಬ್ರದರ್ಸ್​​​​​

ಕಾಂಡೋಮ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಡ್ಯೂರೆಕ್ಸ್, ರೇಮಂಡ್ ಕನ್ಸ್ಯೂಮರ್ ಮತ್ತು ಸ್ಕೋರ್‌ನಂತಹ ಅನೇಕ ಕಂಪನಿಗಳಿವೆ. ಆದಾಗ್ಯೂ, ಈ ಎಲ್ಲದರ ನಡುವೆ,ಮ್ಯಾನ್‌ಫೋರ್ಸ್ ಕಂಪೆನಿ ಕಾಂಡೋಮ್‌ಗಳ ಮಾರಾಟದಲ್ಲಿ ಅತಿದೊಡ್ಡ ಪಾಲನ್ನು ಪಡೆದುಕೊಂಡಿದೆ.

Viral News: ಕಾಂಡೋಮ್ ಮಾರಿ ಭರ್ಜರಿ ಲಾಭ ಗಳಿಸಿದ ಬ್ರದರ್ಸ್​​​​​
Mankind
Follow us
ಅಕ್ಷತಾ ವರ್ಕಾಡಿ
|

Updated on:Mar 28, 2024 | 11:32 AM

ಸುರಕ್ಷಿತ ಲೈಂಗಿಕತೆ, ಲೈಂಗಿಕವಾಗಿ ಹರಡುವ ಸೋಂಕುಗಳ ಅಪಾಯ ಕಡಿಮೆ ಮಾಡಲು ಮತ್ತು ಜನನ ನಿಯಂತ್ರಣಕ್ಕಾಗಿ ಇಂದು ಬಹುತೇಕರು ಕಾಂಡೋಮ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ರಿಕೆಟ್ ಬೆಂಗ್ಕಿಸ್ಸರ್ (ಡ್ಯೂರೆಕ್ಸ್), ರೇಮಂಡ್ ಕನ್ಸ್ಯೂಮರ್ ಮತ್ತು ಸ್ಕೋರ್‌ನಂತಹ ಅನೇಕ ಕಾಂಡೋಮ್ ಮಾರಾಟ ಕಂಪನಿಗಳಿವೆ. ಆದಾಗ್ಯೂ, ಈ ಎಲ್ಲದರ ನಡುವೆ, ಕಾಂಡೋಮ್‌ಗಳ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿ ಮ್ಯಾನ್‌ಫೋರ್ಸ್, ಈ ಕಂಪೆನಿ ಮಾರುಕಟ್ಟೆಯಲ್ಲಿ ಶೇ 32ರಷ್ಟು ಪಾಲು ಪಡೆದುಕೊಂಡಿದೆ.

ರಮೇಶ್ ಜುನೇಜಾ ಮತ್ತು ರಾಜೇಶ್ ಜುನೇಜಾ 1995 ರಲ್ಲಿ ಮ್ಯಾನ್‌ಕೈಂಡ್ ಕಂಪೆನಿಯನ್ನು ಪ್ರಾರಂಭಿಸಿದರು. ಇಂದು ರಮೇಶ್ ಕಂಪನಿಯ ಅಧ್ಯಕ್ಷರಾಗಿದ್ದು, ರಾಜೇಶ್ ಎಂಡಿಯಾಗಿದ್ದಾರೆ. ಕಾಂಡೋಮ್‌ಗಳ ಹೊರತಾಗಿ, ಮ್ಯಾನ್‌ಕೈಂಡ್ ಅನೇಕ ರೀತಿಯ ಉತ್ಪನ್ನಗಳು ಮತ್ತು ಔಷಧಿಗಳನ್ನು ಸಹ ತಯಾರಿಸುತ್ತದೆ. ಇವುಗಳಲ್ಲಿ Prega News, Unwanted-72, Gas-O Fast ಮತ್ತು Acnestar Gel ನಂತಹ ಉತ್ಪನ್ನಗಳು ಸೇರಿವೆ.

ಇದನ್ನೂ ಓದಿ: ಕೋಳಿ, ಹಂದಿ ಇತ್ಯಾದಿ ಮಾಂಸಕ್ಕಿಂತ ಹೆಬ್ಬಾವಿನ ಮಾಂಸ ಬೆಸ್ಟ್; ಅಧ್ಯಯನ 

8749 ಕೋಟಿ ರೂ ಆದಾಯ:

ಮ್ಯಾನ್‌ಕೈಂಡ್ ಕಂಪೆನಿ ಭಾರತವನ್ನು ಹೊರತುಪಡಿಸಿ 34 ದೇಶಗಳಲ್ಲಿ ತನ್ನ ಉತ್ಪನ್ನಗಳ ವ್ಯಾಪಾರವನ್ನು ಮಾಡುತ್ತಿದೆ. 2023 ರ ಹಣಕಾಸು ವರ್ಷದಲ್ಲಿ, ಮ್ಯಾನ್‌ಕೈಂಡ್‌ನ ಆದಾಯವು 8749 ಕೋಟಿ ರೂಪಾಯಿಗಳಾಗಿದ್ದರೆ, ಕಂಪನಿಯು 1310 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ.

ಮ್ಯಾನ್‌ಫೋರ್ಸ್ ಕಾಂಡೋಮ್‌ಗಳು ವಿಭಿನ್ನ ಗಾತ್ರಗಳು ಮತ್ತು ಫ್ಲೇವರ್​​ಗಳಲ್ಲಿ ಲಭ್ಯವಿದೆ. ಇದರಲ್ಲಿ ಕಾಂಡೋಮ್ ಬೆಲೆ 8 ರಿಂದ 30 ರೂಗಳ ವರೆಗೆ ಇದೆ. ಇದು ತನ್ನ ಉತ್ತಮ ಗುಣಮಟ್ಟದಿಂದಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಮ್ಯಾನ್‌ಕೈಂಡ್ ದೇಶದಲ್ಲಿ 25 ಕಾರ್ಖಾನೆಗಳು ಮತ್ತು 6 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:29 am, Thu, 28 March 24

ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು