Video: ಸಿನಿಮಾ ಶೈಲಿಯಲ್ಲಿ ಕಳ್ಳನನ್ನು ಬೆನ್ನಟ್ಟಿ ಸೆರೆಹಿಡಿದ ಮಂಗಳೂರು ಪೊಲೀಸರು
ಮಲಗಿದ್ದ ವ್ಯಕ್ತಿಯ ಮೊಬೈಲ್, ಹಣವನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಸೆರೆ ಹಿಡಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು ಕಳ್ಳನನ್ನು ನೆಲಕ್ಕೆ ಕೆಡವಿ ಸೆರೆಹಿಡಿದ್ದಾರೆ.
ಮಲಗಿದ್ದ ವ್ಯಕ್ತಿಯ ಮೊಬೈಲ್, ಹಣವನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಸೆರೆ ಹಿಡಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು ಕಳ್ಳನನ್ನು ನೆಲಕ್ಕೆ ಕೆಡವಿ ಸೆರೆಹಿಡಿದ್ದಾರೆ. ನಗರದ ನೆಹರು ಮೈದಾನದ ಬಳಿ ಇಬ್ಬರು ವ್ಯಕ್ತಿಗಳು ಕೂಗುತ್ತಿರುವುದನ್ನು ನೋಡಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದ ಸಿಬ್ಬಂದಿ ಗಮನಿಸಿದ್ದಾರೆ. ನಂತರ ವಿಷಯ ತಿಳಿದು ಕಳ್ಳನನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಒಬ್ಬ ಆರೋಪಿ ಸೆರೆಯಾಗಿದ್ದನು. ಆತನ ಸಹಾಯದಿಂದ ಇನ್ನೊಬ್ಬ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ಜ. 12 ರಂದು ನಡೆದಿದೆ. ಬಿಹಾರ ಮೂಲದ ಇಬ್ಬರ ಮೊಬೈಲ್ ಹಾಗು ಇತರ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿಯೇ ಓರ್ವ ಆರೋಪಿಯನ್ನು ಹಿಡಿದಿದ್ದ ಪೊಲೀಸರು ಪ್ರಮುಖ ಆರೋಪಿಯನ್ನು ಬೆನ್ನಟ್ಟಿದ್ದರು. ಮಂಗಳೂರು ರೈಲು ನಿಲ್ದಾಣದ ಬಳಿ ಅರೋಪಿಯೊಬ್ಬನನ್ನು ಸೆರೆಹಿಡಿದಿದ್ದಾರೆ. ಸದ್ಯ ಸೆರೆಯಾದ ಆರೋಪಿಗಳನ್ನು ಶಮಂತ್ (20), ಹರೀಶ್ ಪೂಜಾರಿ(32) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕದ್ದಿರುವ ವಸ್ತುಗಳಾದ ಸ್ಯಾಮಸಂಗ್ ಮೊಬೈಲ್ ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರು ಸಹಾಯ ಮಾಡಿದ್ದು, ಪೊಲೀಸರ ಚೇಸಿಂಗ್ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇದನೂ ಓದಿ:
ಆರು ಸಿಂಹಿಣಿಗಳ ಜತೆ ಕಾಡಿನಲ್ಲಿ ರಾಜಾರೋಷವಾಗಿ ನಡೆದ ಮಹಿಳೆ: ವಿಡಿಯೋ ವೈರಲ್
Published On - 5:10 pm, Thu, 13 January 22