Viral Video: ಅಪರೂಪದಲ್ಲಿ ಅಪರೂಪವೆನ್ನಿಸಿದ ಕಪ್ಪು ಹುಲಿ ಒಡಿಶಾದ ರಾಷ್ಟ್ರೀಯ ಉದ್ಯಾನದಲ್ಲಿ ಪತ್ತೆಯಾಗಿದೆ. ಸಿಮಿಲಿಪಲ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿರುವ ಕ್ಯಾಮೆರಾದಲ್ಲಿ ಕಪ್ಪುಹುಲಿ (melanistic tigers) ಓಡಾಡುತ್ತಿರುವುದು ಮತ್ತು ಮರವನ್ನೇರಲು ಪ್ರಯತ್ನಿಸುತ್ತಿದ್ದ ದೃಶ್ಯ ಸೆರೆಯಾಗಿದೆ. ಇಂಡಿಯನ್ ಫಾರೆಸ್ಟ್ ಸರ್ವೀಸ್ ಆಫೀಸರ್ ಸುಸಾಂಟಾ ನಂದಾ, ಅಂತಾರಾಷ್ಟ್ರೀಯ ಹುಲಿದಿನದ ಪ್ರಯುಕ್ತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಮತ್ತು ಕಿತ್ತಳೆ ಪಟ್ಟೆಗಳನ್ನು ಹೊಂದಿದ ಹುಲಿ ಅತ್ಯಂತ ಆಕರ್ಷಕವಾಗಿದೆ.
ಈ ವಿಡಿಯೋ ಹಂಚಿಕೊಂಡ ಸುಸಾಂಟಾ, ‘ಹುಲಿಗಳು ಭಾರತದ ಅರಣ್ಯಗಳ ಸ್ಥಿರತೆಯನ್ನು ಸಾಂಕೇತಿಸುತ್ತವೆ. ಅಪರೂಪದ, ವಿಶಿಷ್ಟವಾದ ಹುಲಿ ತಳಿ ಇದಾಗಿದೆ, ಇವುಗಳ ಸಂತತಿ ಹೆಚ್ಚಬೇಕು’ ಎಂದಿದ್ದಾರೆ. ಪರ್ವಿನ್ ಕಸ್ವಾನ್ ಅವರು ಕೂಡ ಟ್ವಿಟರ್ನಲ್ಲಿ ಕಪ್ಪುಹುಲಿಯ ವಿಡಿಯೋವನ್ನು ಹಂಚಿಕೊಂಡಿದ್ದು, 2007ರಲ್ಲಿ ಅಧಿಕೃತವಾಗಿ ಸತ್ಪುರಾ ಹುಲಿ ಸಂರಕ್ಷಣಾ ಪ್ರದೇಶದಲ್ಲಿ (STR) ಕಪ್ಪುಹುಲಿಯನ್ನು ಪತ್ತೆ ಹಚ್ಚಲಾಯಿತು. ಈ ಬಗ್ಗೆ ದಾಖಲಿಸಿದ್ದೇವೆ. ಆನುವಂಶಿಕ ರೂಪಾಂತರದಿಂದಾಗಿ ಕಂಡುಬರುವ ಈ ಹುಲಿಗಳ ಸಂಖ್ಯೆ ಅತ್ಯಂತ ಕಡಿಮೆ’ ಎಂದಿದ್ಧಾರೆ.
Tigers are symbol of sustainability of India’s forests…
Sharing an interesting clip of a rare melanistic tiger marking its territory on international Tigers day.
From a Tiger Reserve poised for recovery of an isolated source population with a very unique gene pool. Kudos?? pic.twitter.com/FiCIuO8Qj4— Susanta Nanda IFS (@susantananda3) July 29, 2022
ಬಂಗಾರ ಮತ್ತು ಚಿನ್ನದ ವರ್ಣದ ಪಟ್ಟೆಗಳನ್ನು ಹೊಂದಿದ ಈ ಹುಲಿಗಳು ಮೊದಲ ಸಲ ಸಿಮಿಲಿಪಲ್ ರಾಷ್ಟ್ರೀಯ ಉದ್ಯಾನದಲ್ಲಿ ಪತ್ತೆಯಾಗಿದ್ದು ವಿಶೇಷ. ಈ ಹುಲಿಗಳ ವೈಶಿಷ್ಟ್ಯತೆಗೆ ತಳಿಗಳಲ್ಲಿ ರೂಪಾಂತರಗೊಂಡಿರುವುದೇ ಕಾರಣ.
Published On - 12:20 pm, Tue, 2 August 22