Viral Video: ನೈಟ್​ಕ್ಲಬ್​ನಲ್ಲಿ ಮರಿಕೋತಿಗೆ ಹಿಂಸೆ; ಕ್ಲಬ್​ ವಿರುದ್ದ ಪ್ರಕರಣ ದಾಖಲು

|

Updated on: Jun 28, 2023 | 5:10 PM

Baby Monkey Rescued : ಕೊಲ್ಕತ್ತೆಯ ನೈಟ್‌ಕ್ಲಬ್‌ನಲ್ಲಿ 'ಸರ್ಕಸ್-ಥೀಮ್ ಪಾರ್ಟಿ' ಆಯೋಜಿಸಲಾಗಿತ್ತು. ಕೊರಳಲ್ಲಿ ಸರಪಳಿ ಬಿಗಿದ ಮರಿಕೋತಿಯನ್ನು ಮನರಂಜನೆಗಾಗಿ ತರಲಾಗಿತ್ತು. ಇದೀಗ ವನ್ಯಜೀವಿ ಸಂರಕ್ಷಕರ ಆರೈಕೆಯಲ್ಲಿ ಮರಿ ಕ್ಷೇಮವಾಗಿದೆ.

Viral Video: ನೈಟ್​ಕ್ಲಬ್​ನಲ್ಲಿ ಮರಿಕೋತಿಗೆ ಹಿಂಸೆ; ಕ್ಲಬ್​ ವಿರುದ್ದ ಪ್ರಕರಣ ದಾಖಲು
ಸಾಂದರ್ಭಿ ಚಿತ್ರ. ಸೌಜನ್ಯ: ಅಂತರ್ಜಾಲ
Follow us on

Kolkata: ಪ್ರಾಣಿಗಳನ್ನು ಮನೋರಂಜನೆಗಾಗಿ ಹಿಂಸಿಸುವುದು ಅಪರಾಧ. ಆದರೂ ಅನೇಕರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಾಣಿಗಳನ್ನು ಒಂದಿಲ್ಲಾ ಒಂದು ರೀತಿಯಲ್ಲಿ ಹಿಂಸೆ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೊಲ್ಕತ್ತಾದ ನೈಟ್​ ಕ್ಲಬ್​ವೊಂದರಲ್ಲಿ ‘ಸರ್ಕಸ್-ಥೀಮ್ ಪಾರ್ಟಿ’ ಆಯೋಜಿಸಲಾಗಿತ್ತು. ಅಲ್ಲಿ ಮರಿಕೋತಿಯನ್ನು (Rhesus Makak) ಸರಪಳಿಯಿಂದ ಕಟ್ಟಿಹಾಕಲಾಗಿತ್ತು. ಅಲ್ಲಿಗೆ ಬಂದ ಅತಿಥಿಗಳ ಮನರಂಜನೆಯ ಕೇಂದ್ರಬಿಂದು ಅದಾಗಿತ್ತು. ಅಲ್ಲದೆ ಅದಕ್ಕೆ ನರ್ತಿಸುವಂತೆ  ಕೆಲವರು ಒತ್ತಾಯಿಸಿದರೆ, ಇನ್ನೂ ಕೆಲವರು ಅದಕ್ಕೆ ಮುದ್ದಿಸುತ್ತಿದ್ದರು. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಆ ನೈಟ್​ ಕ್ಲಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಮರಿಕೋತಿ ವನ್ಯಜೀವಿ ಸಂರಕ್ಷಕರ ಪಾಲನೆಯಲ್ಲಿ ಕ್ಷೇಮವಾಗಿದೆ. ನೈಟ್​ ಕ್ಲಬ್​ನಲ್ಲಿ ಹಿಂಸೆಗೊಳಗಾಗುತ್ತಿದ್ದ ಅದರ ವಿಡಿಯೋ ಈ ಕೆಳಗಿದೆ.

ಇದನ್ನೂ ಓದಿ : Viral Video: ಇದು ಇವರ ಖಾಸಗೀ ವಿಮಾನವಾಗಿದ್ದು ಹೇಗೆ? ಈ ವಿಡಿಯೋ ನೋಡಿ

ತಾಯಿಯಿಂದ ಮರಿಯನ್ನು ಬೇರ್ಪಡಿಸಿದ್ದಲ್ಲದೆ ಮನರಂಜನೆಗಾಗಿ ಹೀಗೆ ಶೋಷಿಸುತ್ತಿರುವುದು ಅಪರಾಧ. ಇದರ ಪರಿಣಾಮವಾಗಿ ಮರಿಯು ದೀರ್ಘಕಾಲದ ಮಾನಸಿಕ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಆಗ ಪ್ರಾಣಿಹಿಂಸೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಸುತ್ತಮುತ್ತ ಇಂಥ ಸಂಗತಿಗಳು ಕಂಡುಬಂದಲ್ಲಿ ದಯವಿಟ್ಟು ವನ್ಯಜೀವಿ ಎಸ್​ಒಎಸ್ ಗೆ ಫೋನಾಯಿಸಿ.

ಇದನ್ನೂ ಓದಿ : Viral Video: 5 ಗಂಟೆ ಓಡಿಸಿದರೂ ಕೇವಲ ರೂ. 40 ಸಂಪಾದನೆ; ಕಣ್ಣೀರಿಟ್ಟ ಆಟೋ ಚಾಲಕ

ವನ್ಯಜೀವಿ SOS ದೆಹಲಿ-NCR (9871963535), ಆಗ್ರಾ (9917109666), ವಡೋದರಾ (9825011117), ಮತ್ತು ಜಮ್ಮು ಕಾಶ್ಮೀರ ಪ್ರದೇಶದಲ್ಲಿ 24/7 ಸಹಾಯವಾಣಿ ಲಭ್ಯ. 7006692300, 9419778280) ಸಂಪರ್ಕಿಸಬಹುದಾಗಿದೆ. ವನ್ಯಜೀವಿಗಳ ರಕ್ಷಣೆಯೊಂದಿಗೆ ಪುನರ್ವಸತಿಯನ್ನು ಈ ಮೂಲಕ ಕಲ್ಪಿಸಲಾಗುತ್ತದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:55 pm, Wed, 28 June 23