ಪ್ರೀತಿಗೆ ಬೇಧಬಾವವಿಲ್ಲ. ಅದು ಪ್ರಾಣಿಗಳಲ್ಲಿರಬಹುದು ಅಥವಾ ಮನುಷ್ಯರಲ್ಲೇ ಇರಬಹುದು. ಕೆಲವೊಮ್ಮೆ ಮಾನವ ಮತ್ತು ಪ್ರಾಣಿಗಳ ನಡುವೆ ಇರುವ ಪ್ರೀತಿ, ಬಾಂಧವ್ಯ ಎಲ್ಲದಕ್ಕಿಂತ ಮಿಗಿಲಾಗಿರುತ್ತದೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಕ್ಟಾಕ್ (Tik Tok) ನಲ್ಲಿ ಕೋತಿ(Monkey) ಹಾಗೂ ಪ್ರವಾಸಿಗನೊಬ್ಬನ ಜೊತೆಗಿನ ವಿಡಿಯೋ ವೈರಲ್ ಆಗಿದೆ. ಮೆಕ್ಸಿಕೋ (Mexico) ದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗನೊಬ್ಬನನ್ನು ಕೋತಿಯೊಂದು ಪ್ರೀತಿಯಿಂದ ಅಪ್ಪಿಕೊಂಡ ವಿಡಿಯೋ ವೈರಲ್ (Viral Video) ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಇದರ ವಿಡಿಯೋವನ್ನು ಗುಡ್ ನ್ಯೂಸ್ ಮೂಮೆಂಟ್ ಹಂಚಿಕೊಂಡಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಸಖತ್ ವೈರಲ್ ಆಗಿದೆ. Love is universal ಎಂದು ಕ್ಯಾಪ್ಷನ್ ನೀಡುವ ಮೂಲಕ ಗುಡ್ ನ್ಯೂಸ್ ಮೂಮೆಂಟ್ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಬಾಲ್ಕನಿಯಲ್ಲಿ ಕುಳಿತ ವ್ಯಕ್ತಿಯನ್ನು ಕೋತಿಯೊಂದು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ. ಹೃದಯಸ್ಪರ್ಶಿ ವಿಡಿಯೋ ನೋಡಿ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುವಂತೆ ಕಾಮೆಂಟ್ ಮಾಡಿದ್ದಾರೆ.
30 ಸೆಕೆಂಡ್ಗಳ ವಿಡಿಯೋದಲ್ಲಿ ಪ್ರವಾಸಿಗನ್ನೂ ಕೂಡ ಅಷ್ಟೇ ಪ್ರೀತಿಯಿಂದ ಕೋತಿಯನ್ನು ಅಪ್ಪಿಕೊಂಡು ಮುದ್ದಿಸುತ್ತಿರುವುದನ್ನು ಕಾಣಬಹುದು. ವಿಡಿಯೋದ ಮೇಲೆ ರಜಾ ದಿನಗಳನ್ನು ಎಂಂಜಾಯ್ ಮಾಡಲು ತೆರಳಿದ ಔಏಳೆ ಕೋತಿ ನಿಮ್ಮ ಸಂಗಾತಿಯಾದರೆ ಎಂದು ಕ್ಯಾಪ್ಷನ್ ಕಾಣಬಹದು.
ಇದನ್ನೂ ಓದಿ:
Viral Video; ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್ ಅಧಿಕಾರಿ
ಕ್ಷೀರಪಥದಲ್ಲಿ ಕಂಡುಬಂತು ಇದುವರೆಗೆ ಕಂಡೇ ಇರದ ವಸ್ತು; ಏನಿದು? ಇಲ್ಲಿದೆ ಕುತೂಹಲಕರ ಹೊಸ ಸಮಾಚಾರ!
Published On - 11:14 am, Fri, 28 January 22