Viral Video : ಮೆಟ್ರೋ ಸ್ಟೇಷನ್ ಪ್ರವೇಶಿಬೇಕೆಂದರೆ ಪ್ರತಿಯೊಬ್ಬರೂ ಪ್ರತೀ ಸಲವೂ ಎಂಥ ಕಟ್ಟುನಿಟ್ಟಾದ ಪರೀಕ್ಷೆಗೆ ಒಳಗಾಗಬೇಕು. ಭದ್ರತಾ ಸಿಬ್ಬಂದಿಯು ನಿಮ್ಮನ್ನು ಸ್ವತಃ ಪರೀಕ್ಷಿಸುತ್ತದೆ. ಜೊತೆಗೆ ನಿಮ್ಮ ಸರಕು ಸರಂಜಾಮುಗಳನ್ನು ಯಂತ್ರವೂ ಪರೀಕ್ಷಿಸುತ್ತದೆ. ಹಾಗಾಗಿ ಯಾರೊಬ್ಬರೂ ಅಲ್ಲಿ ಮನಬಂದಂತೆ ಒಳಹೋಗಲು ಸಾಧ್ಯವಿಲ್ಲ. ಆದರೆ ಬಾಲವಂತರೊಬ್ಬರಿಗೆ ಮಾತ್ರ ಇದ್ಯಾವುದಕ್ಕೂ ಒಳಪಡದೆ ಪ್ರವೇಶಿಸುವುದು ಸಾಧ್ಯವಾಗಿದೆ. ಹೇಗೆ ಅಂತೀರಾ? ವಿಡಿಯೋ ನೋಡಿ.
ಈ ಕೋತಿಯು ಹೀಗೆ ಎಕ್ಸಿಟ್ಗೇಟ್ ದಾಟಿಕೊಂಡು ಹೋಗುವುದನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. 22 ತಾಸುಗಳ ಹಿಂದೆ ಅಪ್ಲೋಡ್ ಮಾಡಲಾದ ಈ ವಿಡಿಯೋ ಅನ್ನು 2 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ಈ ದೃಶ್ಯ ನೋಡಿ ತಮಾಷೆ ಮಾಡಿದ್ದಾರೆ. ಅರೆ ಟೋಕನ್ ತಗೊಳ್ಳೋ ಮಾರಾಯಾ ಎಂದಿದ್ದಾರೆ ಒಬ್ಬರು. ಮೆಟ್ರೋ ಕಾರ್ಡ್ ಇಲ್ಲದೆ ಸ್ಟೇಷನ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ ಇನ್ನೊಬ್ಬರು. ಓಹೋ ಹೊಸ ಪ್ರಯಾಣಿಕರು! ಎಂದಿದ್ದಾರೆ ಮಗದೊಬ್ಬರು. ಇವರು ಮೆಟ್ರೋ ಪ್ರಯಾಣ ಬಯಸಿ ಬಂದಹಾಗಿದೆ ಎಂದಿದ್ದಾರೆ ಮತ್ತೊಬ್ಬರು.
ಹೀಗೆ ಒಬ್ಬರನ್ನು ಒಬ್ಬರು ನೋಡಿ ಉಳಿದ ಬಾಲವಂತರೂ ಆಗಾಗ ಹೀಗೆ ಇಲ್ಲಿಗೆ ಬಂದರೆ ಏನು ಕತೆ? ಮೆಟ್ರೋ ಸಿಬ್ಬಂದಿ ಈ ಬಗ್ಗೆ ಯೋಚಿಸಬೇಕಲ್ಲವೆ…
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ