AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಹಿಳಾ ಡ್ರೈವರ್ ಸೀಟಿನ ಪಕ್ಕದಲ್ಲಿ ಆಕೆಯ ಮಗು ಮಲಗಿತ್ತು

Uber Woman Driver : ‘ನನ್ನ ಉಳಿತಾಯದ ಹಣದಿಂದ ಫುಡ್​ ಟ್ರಕ್​ ಆರಂಭಿಸಿದ್ದೆ. ಆದರೆ ಕೊವಿಡ್​ನಿಂದಾಗಿ ನಷ್ಟವನ್ನು ಅನುಭವಿಸಿದೆ. ಈಗ ಆ ಹಣವನ್ನು ಮರುಸಂದಾಯ ಮಾಡಿಕೊಳ್ಳಲು ಈ ಕೆಲಸ ಮಾಡುತ್ತಿದ್ದೇನೆ.’ ನಂದಿನಿ, ಉಬರ್​ ಡ್ರೈವರ್.

ಈ ಮಹಿಳಾ ಡ್ರೈವರ್ ಸೀಟಿನ ಪಕ್ಕದಲ್ಲಿ ಆಕೆಯ ಮಗು ಮಲಗಿತ್ತು
Meet Nandini a woman Uber driver from Bengaluru
TV9 Web
| Updated By: ಶ್ರೀದೇವಿ ಕಳಸದ|

Updated on:Nov 02, 2022 | 11:33 AM

Share

Viral : ದೃಢಚಿತ್ತ ಮತ್ತು ಆತ್ಮವಿಶ್ವಾಸ ಹೊಂದಿದ ಮಹಿಳೆಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಆಗಾಗ ಅವರ ಜೀವನಗಾಥೆಯನ್ನು ಓದುತ್ತಿರುತ್ತೀರಿ. ಇದೀಗ ಬೆಂಗಳೂರಿನ ಮಹಿಳಾ ಉಬರ್ ಡ್ರೈವರೊಬ್ಬರ  ಕಥೆಯನ್ನು ನೀವು ಓದಬಹುದು. ಕ್ಲೌಡ್‌ಸೆಕ್ ಕಂಪನಿಯ ಸಹಸಂಸ್ಥಾಪಕ ರಾಹುಲ್ ಸಾಸಿ ಎನ್ನುವವರು ಲಿಂಕಡಿನ್​ನಲ್ಲಿ ಈ ಕಥೆ ಹಂಚಿಕೊಂಡಿದ್ದಾರೆ. ರಾಹುಲ್​ ಅವರ ಸ್ನೇಹಿತರು ಅವರಿಗಾಗಿ ಕ್ಯಾಬ್​ ಬುಕ್ ಮಾಡಿದ್ದರು. ಸ್ವಲ್ಪ ಹೊತ್ತಿನ ಮೇಲೆ ಅವರನ್ನು ಪಿಕ್ ಮಾಡಲು ಮಹಿಳಾ ಡ್ರೈವರ್ ಬಂದರು. ಮುಂದೇನಾಯಿತು ಎನ್ನುವುದನ್ನು ಓದಿ.

ನಿನ್ನೆ ನನ್ನ ಸ್ನೇಹಿತ ನನಗಾಗಿ ಉಬರ್ ಕ್ಯಾಬ್​ ಬುಕ್ ಮಾಡಿದ್ದರು. ಆಗ ಮಹಿಳಾ ಡ್ರೈವರ್ ಪಿಕ್​ ಮಾಡಿದರು. ಸ್ವಲ್ಪ ದೂರ ಪ್ರಯಾಣ ಸಾಗುತ್ತಿದ್ದಂತೆ ಡ್ರೈವರ್ ಸೀಟಿನ ಪಕ್ಕ ಮಗುವೊಂದು ಮಲಗಿರುವುದು ಕಂಡಿತು. ಮೇಡಮ್ ಇದು ನಿಮ್ಮ ಮಗಳೇ ಎಂದು ಕೇಳಿದೆ. ಅದಕ್ಕೆ ಆಕೆ, ಹೌದು ಸರ್ ನನ್ನ ಮಗಳೇ. ಈಗವಳ ಶಾಲೆಗೆ ರಜೆ. ಹಾಗಾಗಿ ನಾನೇ ಅವಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದರು.

ನಂತರ ನಂದಿನಿ ತಮ್ಮ ಕಥೆಯನ್ನು ಹೇಳತೊಡಗಿದರು. ಅವರೊಬ್ಬ ಉದ್ಯಮಿಯಾಗಬೇಕು ಎಂದು ಕನಸು ಕಂಡಿದ್ದರು. ತಮ್ಮ ಉಳಿತಾಯದ ಹಣದಿಂದ ಒಂದು ಫುಡ್​ ಟ್ರಕ್​ ಶುರುಮಾಡಿದರು. ಆದರೆ ಕೊವಿಡ್​ ಪರಿಣಾಮದಿಂದ ಅವರು ನಷ್ಟವನ್ನು ಅನುಭವಿಸಿದರು. ನಂತರ ಉಬರ್ ಡ್ರೈವರ್​ ಕೆಲಸಕ್ಕೆ ಸೇರಿದರು. ದಿನಕ್ಕೆ 12 ಗಂಟೆಗಳ ಕೆಲಸ. ಆನಂತರ ಕೆಲಸ ಮಾಡುವ ಶಕ್ತಿ ಮನಸ್ಸು ಉಳಿಯುವುದಿಲ್ಲ. ಆದರೆ ಕಳೆದುಕೊಂಡ ಹಣವನ್ನು ಮರುಹೊಂದಿಸುವುದು ಅನಿವಾರ್ಯ ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದರು. ಉಬರ್ ಇಂಡಿಯಾ ಮುಖ್ಯಸ್ಥ ಪ್ರಭಜಿತ್​ ಸಿಂಗ್​ ಅವರು ನಂದಿನಿಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

2,27,700 ಜನರು ಈ ಪೋಸ್ಟ್​ ಇಷ್ಟಪಟ್ಟಿದ್ದಾರೆ. ಈ ಮಹಿಳೆಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:02 am, Wed, 2 November 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!