Viral : ಸೌತ್‌ವೆಸ್ಟ್ ಏರ್‌ಲೈನ್‌ನಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ತಾಯಿ ಹಾಲಿ ಪೆಟಿಟ್ ಮತ್ತು ಅವರ ಮಗಳಾದ ಫರ್ಸ್ಟ್ ಆಫೀಸರ್ ಕೀಲಿ ಪೆಟಿಟ್ ಫೋಟೋ ಈಗ ನೆಟ್ಟಿಗರ ಹೃದಯವನ್ನು ಸ್ಪರ್ಶಿಸಿದೆ. ನಮ್ಮ ಏರ್ಲೈನ್ಸ್ನ ಮೊದಲ ತಾಯಿ-ಮಗಳು ಪೈಲಟ್ ಜೋಡಿ ಹಾಲಿ ಮತ್ತು ಕೀಲಿ, ಜುಲೈ 23ರಂದು ಡೆನ್ವರ್ನಿಂದ ಸೇಂಟ್ ಲೂಯಿಸ್ಗೆ 3658 ಫ್ಲೈಟ್‌ನಲ್ಲಿ ಒಟ್ಟಿಗೆ ಹಾರಿದರು! ಎಂದು ಸಂಸ್ಥೆಯು ತಿಳಿಸಿದೆ. ಕ್ಯಾಪ್ಟನ್ ಹಾಲಿ ತನ್ನ ಮಗಳನ್ನು ವಿಮಾನದಲ್ಲಿ ಪ್ರಯಾಣಿಕರಿಗೆ ಪರಿಚಯಿಸಿದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ‘ಗುಡ್ಮಾರ್ನಿಂಗ್ ಅಮೆರಿಕಾ’ದಲ್ಲಿ ಈ ವರದಿ ಪ್ರಸಾರವಾಗಿದೆ. ತಾಯಿಮಗಳ ಹಳೆಯ ಫೋಟೋದೊಂದಿಗೆ ವಿಡಿಯೋ ಶುರುವಾಗಿ ವಿಮಾನದಲ್ಲಿ ಪೈಲಟ್ ಆಸನಗಳಲ್ಲಿ ಕುಳಿತುಕೊಳ್ಳುವಲ್ಲಿಗೆ ಅಂತ್ಯವಾಗುತ್ತದೆ.
ಕೆಲ್ಲಿ 14 ವರ್ಷದವಳಿದ್ದಾಗಲೇ ತನ್ನ ತಾಯಿಯಂತೆ ಆಕಾಶದಲ್ಲಿ ಹಾರುವ ಕನಸಿಗೆ ಬಿದ್ದವಳು. ಹಾಗೆಯೇ ತನ್ನ ತಾಯಿಯ ಹೆಜ್ಜೆಯನ್ನೇ ಅನುಸರಿಸುತ್ತ 2017ರಲ್ಲಿ ಸೌತ್‌ವೆಸ್ಟ್ ಏರ್ಲೈನ್ಸ್ನಲ್ಲಿ ಇಂಟರ್ನ್ಶಿಪ್ ಪಡೆದು ಉದ್ಯೋಗಕ್ಕೆ ಸೇರಿದಳು. ಇದೀಗ ತಾಯಿಯಂತೆ ತಾನೂ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ, ತಾಯಿ ಮತ್ತು ಮಗಳು ಇಬ್ಬರೂ ತಮ್ಮ ಸಾಮಾನುಗಳೊಂದಿಗೆ ಒಂದೇ ತೆರನಾದ ಪೈಲಟ್ ಸಮವಸ್ತ್ರ ಧರಿಸಿ ಬರುತ್ತಿರುವುದನ್ನು ನೋಡಿದಾಗ ಹೆಮ್ಮೆ ಎನ್ನಿಸುತ್ತದೆ. ಒಟ್ಟಿಗೆ, ಅವರು ಕಾಕ್‌ಪಿಟ್‌ನಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿದ ಯಾರಿಗೂ ಸಂತಸ ಉಕ್ಕದೇ ಇರದು. ಈ ವಿಡಿಯೋ ಈತನಕ 24,850 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
Published On - 2:51 pm, Thu, 4 August 22