
ಸಾಮಾಜಿಕ ಜಾಲತಾಣದಲ್ಲಿ ಭ್ರಮೆ ಮೂಡಿಸುವ ಸಾಕಷ್ಟು ವಿಡಿಯೋ, ಚಿತ್ರಗಳು ಈ ಹಿಂದೆ ವೈರಲ್ ಆಗಿವೆ. ಮನರಂಜನೆ ಮತ್ತು ಬುದ್ದಿಗೆ ಗುದ್ದು ನೀಡುವ ಆಪ್ಟಿಕಲ್ ಇಲ್ಯೂಶನ್ಗಳು ಸದಾ ನೆಟ್ಟಿಗರನ್ನು ಆಕರ್ಷಿಸುತ್ತವೆ. ಇದೀಗ ಬಣ್ಣದ ವೃತ್ತಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 2 ಕಲರ್ಫುಲ್ ವೃತ್ತಗಳು ತಿರುಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವೃತ್ತಗಳು ಯಾವ ಮುಖದಲ್ಲಿ ತಿರುಗುತ್ತಿವೆ ಎನ್ನುವುದನ್ನು ತಿಳಿಯಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.
ಟ್ವಿಟರ್ ಮತ್ತು ರೆಡ್ಡಿಟ್ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜಪಾನ್ನ ಜಾಗರಿಕಿನ್ ಎನ್ನುವವರು ಇದನ್ನು ತಯಾರಿಸಿ ಹಂಚಿಕೊಂಡಿದ್ದಾರೆ. ಆಪ್ಟಿಕಲ್ ಇಲ್ಯುಶನ್ನ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಬಳಕೆದಾರರೊಬ್ಬರು ಸಮ್ಮೋಹನಕ್ಕೋಳಗಾಗುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ವಿಡಿಯೋದಲ್ಲಿ ಏನಾಗುತ್ತಿದೆ ಎನ್ನುವುದುನ್ನು ತಿಳಿಯಲು ಯತ್ನಿಸಿದ್ದು, ಅರ್ಥವಾಗದೆ ಗೊಂದಲಕ್ಕೊಳಗಾಗಿದ್ದಾರೆ.
ವೃತ್ತದ ಒಳಗೆ ಮಾರ್ಕ್ಗಳನ್ನು ಮಾಡಲಾಗಿದ್ದು, ಅದೇ ರೀತಿ ವೃತ್ತ ಸುತ್ತುವಂತೆ ಕಾಣುತ್ತದೆ. ಅದರೆ ಅದು ಹಾಗೆಯೇ ಇದೆಯೇ ಎನ್ನುವುದನ್ನು ನೀವು ವಿಡಿಯೋ ನೋಡಿಯೇ ಕಂಡುಹಿಡಿಯಬೇಕು. ಸದ್ಯ ವೈರಲ್ ಆದ ವಿಡಿಯೋ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, 57 ಸಾವಿರಕ್ಕೂ ಅಧಿಕ ರಿಟ್ವೀಟ್ಗಳನ್ನು ಗಳಿಸಿದೆ. ನೀವೂ ವಿಡಿಯೋ ನೋಡಿ ವೃತ್ತ ಯಾವ ಕಡೆ ಚಲಿಸುತ್ತಿದೆ ಎನ್ನುವುದನ್ನು ಪತ್ತೆಮಾಡಿ.
ಇದನ್ನೂ ಓದಿ:
Viral Video: ಅಭಯಾರಣ್ಯದಲ್ಲಿ ಕರಡಿಗೆ ಮುಖಾಮುಖಿಯಾದ ಹುಲಿ: ಮುಂದೇನಾಯ್ತು?
Published On - 9:43 am, Fri, 11 March 22