
ಮುಂಬೈ, ಜೂನ್. 15: ವಿಶೇಷವಾಗಿ ಮಹಿಳೆಯರು ಹೊರಗಡೆ ಓಡಾಡುವ ಸಂದರ್ಭದಲ್ಲಿ ಕೆಲ ಪುಂಡರು ಅವರೊಂದಿಗೆ ಅಸಭ್ಯ ವರ್ತನೆಯನ್ನು ತೋರುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಮುಂಬೈನಲ್ಲೂ ಕೂಡಾ ಇಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪುಂಡನೊಬ್ಬ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಎದುರಲ್ಲಿ ನಿಂತು ಪ್ಯಾಂಟ್ ಜಿಪ್ ತೆರೆದಿದ್ದಾನೆ. ಹೌದು ಲೋಕಲ್ ಟ್ರೈನ್‌ನ (Mumbai Local train) ಮಹಿಳಾ ಕೋಚ್‌ನಲ್ಲಿ ಪ್ರಯಾಣಿಸುತ್ತಾ ಆತ ಪ್ಯಾಂಟ್ ಜಿಪ್ (man unzips pant) ತೆರೆಯಲು ಯತ್ನಿಸಿದ್ದು, ಈತನ ಅಸಭ್ಯ ವರ್ತನೆಯನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಘಟನೆ ಜೂನ್ 14 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮುಂಬೈನ ಲೋಕಲ್ ಟ್ರೈನ್ ಒಂದರಲ್ಲಿ ನಡೆದಿದ್ದು, ಯುವಕನೊಬ್ಬ ಮಹಿಳಾ ಕೋಚ್‌ನಲ್ಲಿ ನಿಂತು ಪ್ಯಾಂಟ್ ಜಿಪ್ ತೆರೆಯಲು ಯತ್ನಿಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಈತ ಮಹಿಳಾ ಕೋಚ್‌ಗೆ ಬಂದು ಅಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಪ್ಯಾಂಟ್ ಜಿಪ್ ತೆರೆಯಲು ಯತ್ನಿಸಿದ್ದಾನೆ. ಈ ಬಗ್ಗೆ ಮಹಿಳೆಯೊಬ್ಬರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಆತನಿಗೆ ಗದರಿ ರೈಲಿನಿಂದ ಕೆಳಗಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Another similar incident, another intoxicated man climbed up the women’s coach at around 8 AM at Chunabhatti station and was thrown out at GTB. He tried to remove his pants. Tried calling railway helpline number; no response and no police on platform. @MumbaiPolice @MinistryWCD https://t.co/zhrtpJ0Joi pic.twitter.com/i8ncXumIGx
— Manasi (@Manasisplaining) June 14, 2025
ಈ ವಿಡಿಯೋವನ್ನು ಮಾನಸಿ (Manasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ನಿಂತ ಕುಡುಕ ಯುವಕನೊಬ್ಬ ಪ್ಯಾಂಟ್ ಜಿಪ್ ತೆರೆದು ಬಳಿಕ ಪ್ಯಾಂಟ್ ಬಿಚ್ಚಲು ಯತ್ನಿಸಿದ್ದಾನೆ. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು ಈತನ ಅಸಭ್ಯ ವರ್ತನೆಯನ್ನು ತಾಳಲಾರದೆ ಗದರಿ ಆತನನ್ನು ರೈಲಿನಿಂದ ಹೊರಗಿಳಿಯುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಂತಹ ಅಸಭ್ಯ ವರ್ತನೆಗಳು ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿದ್ದು, ಈ ಘಟನೆಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ