Video: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಭಾರತೀಯರು ವಿಶಾಲ ಮನಸ್ಸಿನವರು. ಯಾರೇ ಬಂದರೂ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಸತ್ಕರಿಸುವ ಗುಣ ಭಾರತೀಯರದ್ದು. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ದೃಶ್ಯ. ಮೈಸೂರಿನ ಬೀದಿಯಲ್ಲಿ ಸ್ಥಳೀಯರು ವಿದೇಶಿಯರೊಬ್ಬರಿಗೆ ಉಚಿತ ಬಿರಿಯಾನಿ ಬಡಿಸಿದ್ದಾರೆ. ಇಲ್ಲಿನವರ ಅತಿಥಿ ಸತ್ಕಾರಕ್ಕೆ ವಿದೇಶಿ ಪ್ರಜೆ ಮನಸೋತಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ
ವೈರಲ್ ವಿಡಿಯೋ
Image Credit source: Instagram

Updated on: Mar 01, 2026 | 6:43 PM

ಮೈಸೂರು, ಮಾರ್ಚ್ 01: ಭಾರತಕ್ಕೆ ಬರುವ ವಿದೇಶಿಗರು (Foreigners) ಇಲ್ಲಿನ ಪ್ರವಾಸಿ ತಾಣಗಳು, ವಿವಿಧ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಆಚಾರ ವಿಚಾರವನ್ನು ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗ್ತಾರೆ.  ಅಷ್ಟೇ ಅಲ್ಲದೇ ಭಾರತೀಯರ ಒಳ್ಳೆಯ ಮನಸ್ಸಿಗೆ ಹಾಗೂ ಅತಿಥಿ ಸತ್ಕಾರಕ್ಕೆ ಮನಸೋಲುವುದಿದೆ. ಇದೀಗ ಭಾರತಕ್ಕೆ ಭೇಟಿ ನೀಡಿದ ವಿದೇಶಿಗರೊಬ್ಬರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವವು ಎಲ್ಲರ ಗಮನ ಸೆಳೆದಿದೆ. ಮೈಸೂರಿನ (Mysore) ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ವಿದೇಶಿಗರೊಬ್ಬರು ಅನಿರೀಕ್ಷಿತ ಕ್ಷಣವನ್ನು ಸೆರೆ ಹಿಡಿದ್ದಾರೆ. ಉಚಿತವಾಗಿ ಬಿರಿಯಾನಿ ನೀಡಿದ್ದು, ಭಾರತೀಯರ ಆತಿಥ್ಯಕ್ಕೆ ಮನಸೋತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

lepanimusicc ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಈ ವಿಡಿಯೋ ವಿದೇಶಿಗರೊಬ್ಬರು ಮೈಸೂರಿನ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಥಳೀಯರೊಬ್ಬ ಉಚಿತವಾಗಿ ವಿದೇಶಿಗರೊಬ್ಬರಿಗೆ ಊಟ ಬಡಿಸುವುದನ್ನು ನೋಡಬಹುದು. ಈ ಕ್ಲಿಪ್‌ನ ಶೀರ್ಷಿಕೆಯಲ್ಲಿ ಭಾರತವು ಅದ್ಭುತವಾದ ಸ್ಥಳ. ನಾವು ಮೈಸೂರಿನ ಜನನಿಬಿಡ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸುವಾಸನೆ ನನ್ನ ಮೂಗಿಗೆ ಬಡಿಯಿತು. ನಾವು ರಸ್ತೆಯ ಆಚೆ ನೋಡಿದೆವು. ಒಂದು ದೊಡ್ಡ ಪಾತ್ರೆಯ ಹಿಂದೆ ಇದ್ದ ಆ ವ್ಯಕ್ತಿ ನಗುವಿನೊಂದಿಗೆ, ಜನರಿಗೆ ಪ್ಲೇಟ್‌ ಬಿರಿಯಾನಿಯನ್ನು ಹಾಕುತ್ತಿದ್ದವ ನಮ್ಮತ್ತ ಕೈ ಬೀಸುತ್ತಿದ್ದ.

ವೈರಲ್ ವಿಡಿಯೋ ಇಲ್ಲಿದೆ

ಮೊದಲಿಗೆ ನಾನು ಹಿಂಜರಿದಿದ್ದೆ, ಆ ಬಳಿಕ ನಾವು ಹೋದೆವು. ನಾನು ಅವನ ಬಳಿ ಒಂದು ಪ್ಲೇಟ್‌ಗೆ ಎಷ್ಟು ಎಂದು ಕೇಳಿದೆ. ಅವನು ‘ಚಿಂತಿಸಬೇಡಿ, ತಿನ್ನಿರಿ’ ಎಂದು ಹೇಳಿದನು. ನನಗೆ ಒಂದು ಪ್ಲೇಟ್‌ ಬಿರಿಯಾನಿ ಬಡಿಸಿದ. ಅವನ ಸ್ನೇಹಿತ ನನಗೆ ಮೇಲೆ ಸ್ವಲ್ಪ ಚಿಕನ್ ಕರಿ ಬಡಿಸಿದನು. ನಾನು ಬೀದಿ ಬದಿಯಲ್ಲಿ ಕೆಲವು ಸ್ಥಳೀಯರ ಪಕ್ಕದಲ್ಲಿ ನಿಂತು ನನ್ನ ಜೀವನದಲ್ಲಿ ಹೊಟ್ಟೆ ತುಂಬುವ ರುಚಿಕರ ಬಿರಿಯಾನಿ ತಿಂದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಮಗೆ ತಿಳಿದಿರುವ ಭಾರತ, ಅಲ್ಲಿ ಅತಿಥಿಗಳನ್ನು ಕುಟುಂಬದವರಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ವಿದೇಶಿಗರು ಭಾರತವನ್ನು ಇಷ್ಟ ಪಡಲು ಇದುವೇ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಶುದ್ಧ ಮಾನವೀಯತೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:42 pm, Sun, 1 March 26

Follow Us