Viral: ನನಗೆ ವರ್ಕ್ ಲೈಫ್ ಬ್ಯಾಲೆನ್ಸ್ ಅಲ್ಲಿ ನಂಬಿಕೆ ಇಲ್ಲ, ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲೇಬೇಕು ಎಂದ ನಾರಾಯಣ ಮೂರ್ತಿ
ಸಾಮಾನ್ಯವಾಗಿ ಐಟಿ ಕಂಪೆನಿಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕೆಲಸ ಇರುತ್ತದೆ. ಇನ್ನುಳಿದ 2 ದಿನ ಕಂಪೆನಿಯ ಉದ್ಯೋಗಿಗಳಿಗೆ ರಜೆ ಇರುತ್ತದೆ. ಈ 5 ದಿನಗಳ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಆಧಾರ ಆದ್ದರಿಂದ ಯುವಕರು ವಾರಕ್ಕೆ 70 ತಾಸು ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಪ್ರಸ್ತುತ ಬಹುತೇಕ ಹೆಚ್ಚಿನ ಐಟಿ ಬಿಟಿ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ವಾರಕ್ಕೆ ಐದು ದಿನ ಕೆಲಸ, 2 ದಿನ ರಜೆ ಎಂಬ ನೀತಿಯನ್ನು ಅನುಸರಿಸುತ್ತಿವೆ. ಇದರನ್ವಯ ಕಂಪೆನಿಗಳಲ್ಲಿ ವಾರಕ್ಕೆ ಐದು ದಿವಸ ಕೆಲಸ ಇದ್ದರೆ, ಇನ್ನುಳಿದ 2 ದಿನ ಉದ್ಯೋಗಿಗಳಿಗೆ ರಜೆ ಇರುತ್ತದೆ. ಈ 5 ದಿನಗಳ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಆಧಾರ ಆದ್ದರಿಂದ ಯುವಕರು ವಾರಕ್ಕೆ 70 ತಾಸು ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಸಿಎನ್‌ಬಿಸಿ ಗ್ಲೋಬಲ್ ಸಮಿತ್ ಪ್ರೋಗ್ರಾಮ್‌ನಲ್ಲಿ ಭಾಗಿಯಾಗಿ ಮಾತನಾಡಿದ ನಾರಾಯಣ ಮೂರ್ತಿಯವರು ಪ್ರಧಾನಿ ಮೋದಿಯವರ ವಾರದಲ್ಲಿ 100 ಗಂಟೆಗಳ ಕೆಲಸವನ್ನು ಉದಾಹರಣೆಯಾಗಿ ಉಲ್ಲೇಖಿಸಿ ದೇಶದ ಅಭಿವೃದ್ಧಿಗೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂದು ಹೇಳಿದ್ದಾರೆ.
Infosys’ Narayana Murthy doubles down on his infamous ’70-hour work-week’ comment, adds he’s disappointed that the 5-day work week is now the norm! #Watch#worklifebalance #workweek #infosys #narayanamurthy #cnbctv18digital @ShereenBhan pic.twitter.com/OWqRgHzqCD
— CNBC-TV18 (@CNBCTV18News) November 14, 2024
ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ನಾರಾಯಣ ಮೂರ್ತಿಯವರ ಬಳಿ ಪ್ರಶ್ನೆಯನ್ನು ಕೇಳಿದಾಗ “ನನಗೆ ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಯಾವುದೇ ನಂಬಿಕೆ ಇಲ್ಲ ಅಂದು ಐಟಿ ಮತ್ತು ಇತರೆ ವಲಯದಲ್ಲಿ ವಾರದ ಆರು ದಿನಗಳ ಬದಲು ಐದು ದಿನ ಕೆಲಸ ಮಾಡಿದರೆ ಸಾಕು ಎಂಬ ನೀತಿಯನ್ನು ತರಲಾಯಿತು. ಈ ನೀತಿಯಿಂದ ನನಗೆ ತುಂಬಾನೇ ಬೇಜಾರಾಯಿತು. ದಯವಿಟ್ಟು ಕ್ಷಮಿಸಿ ಕೆಲಸದ ಅವಧಿಯ ವಿಚಾರವಾಗಿ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಆಧಾರ ಆದ್ದರಿಂದ ಯುವಕರು ವಾರಕ್ಕೆ 5 ದಿನ ಅಲ್ಲ 70 ತಾಸು ಕೆಲಸ ಮಾಡಬೇಕು” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಎರಡನೇ ಮಹಾಯುದ್ಧದ ನಂತರ ಜರ್ಮನ್ ಮತ್ತು ಜಪಾನ್ ಕಠಿಣ ಪರಿಶ್ರಮದಿಂದ ಸಾಧಿಸಿದ ಪ್ರಗತಿಯ ಬಗ್ಗೆಯೂ ಉಲ್ಲೇಖಿಸಿದ ಅವರು ದೇಶದ ಪ್ರಗತಿಗೆ ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ರೀಲ್ಸ್ ಮಾಡಿದ ಯುವತಿ; ವಿಡಿಯೋ ವೈರಲ್
ನಾರಾಯಣ ಮೂರ್ತಿಯರವರು ನೀಡಿದಂತಹ ಈ ಸ್ಟೇಟ್‌ಮೆಂಟ್ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವರು ಕೆಲಸಕ್ಕೆ ತಕ್ಕಂದೆ ಮೊದಲು ಉತ್ತಮ ವೇತನವನ್ನು ಕೂಡಾ ನೀಡಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ