ಭಾರೀ ಮಳೆ ತಂದಿರುವ ಅವಾಂತರ ಒಂದಲ್ಲ.. ಎರಡಲ್ಲ. ಅದೆಷ್ಟೋ ಜನ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೆಷ್ಟೋ ಜನ ಕಾಣೆಯಾಗಿದ್ದಾರೆ. ಬೆಳೆದ ಬೆಳೆಗಳೆಲ್ಲ ನಾಶವಾಗಿದೆ ಎಂದು ಜನರು ಬೇಸರಗೊಂಡಿದ್ದಾರೆ. ಈ ಎಲ್ಲದರ ನಡುವೆ ಮೂಕ ಪ್ರಾಣಿಗಳ ಒದ್ದಾಟ ನೋಡಲೇ ಸಾಧ್ಯವಿಲ್ಲ. ಪ್ರವಾಹಕ್ಕೆ ಸಿಲುಕಿ ಅದೆಷ್ಟೋ ಮುಗ್ಧ ಪ್ರಾಣಿಗಳು ಬಲಿಯಾದವು. ಈ ನಡುವೆ ಪ್ರಾಣ ಉಳಿಸುವ ಸಲುವಾಗಿ ರಕ್ಷಾಣಾ ಸಿಬ್ಬಂದಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಘಟನೆಯೂ ಅಂಥದ್ದೇ. ಪ್ರವಾಹಕ್ಕೆ ಹೆದರಿ ಹೋಟೆಲ್ ಮೇಲ್ಛಾವಣಿಯ ಮೇಲೆ ನಡುಗುತ್ತ ಕುಳಿತ ಶ್ವಾನವನ್ನು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ(NDRF) ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ವಿಪರೀತ ಮಳೆಯಿಂದಾಗಿ ಕೊಲ್ಹಾಪುರದ ಶಿರೋಲಿಯ ಹೋಟೆಲ್ ಒಳಗೆಲ್ಲಾ ನೀರು ತುಂಬಿದೆ. ನಾಯಿಯೊಂದು ಹೋಟೆಲ್ ಮೇಲ್ಛಾವಣಿಯ ಮೇಲೆ ಹತ್ತಿ ನಡುಗುತ್ತಾ ಕುಳಿತಿತ್ತು. ಇದನ್ನು ಗಮನಿಸಿದ ರಕ್ಷಣಾ ಪಡೆ ದೋಣಿಯ ಮೂಲಕ ಸಾಗಿ ನಾಯಿಯ ರಕ್ಷಣೆಗೆ ಮುಂದಾಗಿದೆ.
ಹೋಟೆಲ್ ಮೇಲ್ಛಾವಣಿಯ ಮೇಲೆ ಹತ್ತಿ ಕುಳಿತ ನಾಯಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸುವ ದೃಶ್ಯವನ್ನು ವಿಡಿಯೋ ತೋರಿಸುತ್ತದೆ. ಉಳಿದವರು ದೋಣಿಯಲ್ಲೊಯೇ ಕುಳಿತಿದ್ದು ಓರ್ವ ಸಿಬ್ಬಂದಿ ಹೋಟೆಲ್ ಮೇಲಕ್ಕೆ ಹತ್ತಿ ನಾಯಿಯನ್ನು ಹಿಡಿದು ತಂದಿದ್ದಾರೆ. ಸುರಕ್ಷಿತವಾಗಿ ದಡ ತಲುಪಿದ್ದಾರೆ.
#WATCH | National Disaster Response Force (NDRF) personnel rescue a dog from the rooftop of a hotel in Shiroli area of flood-hit Kolhapur district in Maharashtra pic.twitter.com/NlxD9KTCeD
— ANI (@ANI) July 26, 2021
ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯ ಪರಿಣಾಮ ಸಾವಿಗೀಡಾದವರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. ರಾಯಗಢ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ, 11 ಜನ ಕಾಣೆಯಾಗಿದ್ದಾರೆ. ಕಳೆದ ವಾರ ಭಾರೀ ಮಳೆಯಿಂದಾಗಿ ಪಶ್ಚಿಮ ಮಹಾರಾಷ್ಟ್ರ ಭಾಗದಲ್ಲಿ ಪ್ರವಾಹ ಹಾಗೂ ಭೂಕುಸಿಯತ ಉಂಟಾಗಿದೆ.
ಇಂಥಹ ಕಷ್ಟದ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಹೆಣಗಾಡುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್
Viral Video: ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್ ಹಾಕಿದ ಶ್ವಾನ! ಕ್ಯೂಟ್ ವಿಡಿಯೋ ನೀವೂ ನೋಡಿ
Published On - 10:42 am, Wed, 28 July 21