Viral: ಭಾರತೀಯ ಪೌರತ್ವ ತೊರೆದು, ಖುಷಿ ಖುಷಿಯಾಗಿ ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ ಯುವಕ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 8:26 AM

ಮನೆ ಬಿಟ್ಟು ಅಥವಾ ತಾಯ್ನಾಡು ಬಿಟ್ಟು ಬೇರೆಡೆ ಹೋಗುತ್ತಿದ್ದೇವೆ ಎಂದ್ರೆ ಹೆಚ್ಚಿನವರು ಬಹಳ ದುಃಖ ಪಡ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಖುಷಿಯಲ್ಲಿ ಕುಣಿದಾಡುತ್ತಾ ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ್ದಾನೆ. ವೇದಿಕೆಯ ಮೇಲೆ ಭಾರತದ ಜೆರ್ಸಿ ಬಿಚ್ಚಿ ಕುಣಿದಾಡುತ್ತಾ ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕೆಲವರು ಈತನ ಈ ನಿಲುವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈತನದ್ದು ಇದು ತಪ್ಪು ನಿರ್ಧಾರ ಎಂದು ಕಿಡಿ ಕಾರಿದ್ದಾರೆ.

Viral: ಭಾರತೀಯ ಪೌರತ್ವ ತೊರೆದು, ಖುಷಿ ಖುಷಿಯಾಗಿ ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ ಯುವಕ; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us on

ಬದುಕು ಕಟ್ಟಿಕೊಳ್ಳುವ ಸಲುವಾಗಿ ಮನೆ ಬಿಟ್ಟು ಬೇರೆ ಊರುಗಳಿಗೆ, ತಾಯ್ನಾಡು (motherland) ಬಿಟ್ಟು ಬೇರೆ ದೇಶಕ್ಕೆ ಹೋದವರು, ಹೋಗುವವರು ಹಲವರಿದ್ದಾರೆ. ಹೀಗೆ ಮನೆ ಬಿಟ್ಟು ಎಲ್ಲೋ ದೂರದೂರಿಗೆ ಹೋಗುವಾಗ ನನ್ನವರು, ನನ್ನ ಊರನ್ನು ಬಿಟ್ಟು ಹೋಗ್ಬೇಕಲ್ವೇ ಎಂದು ಹಲವರು ದುಃಖ ಪಡ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ನ್ಯೂಜಿಲೆಂಡ್‌ (New Zealand) ಪೌರತ್ವ (citizenship) ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ವೇದಿಕೆಯ ಮೇಲೆ ಭಾರತದ (India) ಜೆರ್ಸಿ ಬಿಚ್ಚಿ ಬಹಳ ಸಂತೋಷದಿಂದ ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಕೆಲವರು ಈತನ ಈ ನಿಲುವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈತನದ್ದು ಇದು ತಪ್ಪು ನಿರ್ಧಾರ ಎಂದು ಕಿಡಿ ಕಾರಿದ್ದಾರೆ.

ವ್ಯಕ್ತಿಯೊಬ್ಬ ಭಾರತದ ಜೆರ್ಸಿ ಬಿಚ್ಚಿ ಸಂತೋಷದಲ್ಲಿ ಕುಣಿದಾಡಿ, ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವವನ್ನು ಸ್ವೀಕರಿಸಿದ್ದಾನೆ. ಆ ವ್ಯಕ್ತಿ ಬಹಳ ಹೆಮ್ಮೆಯಿಂದ, ಸಂತೋಷದಿಂದ ಡ್ಯಾನ್ಸ್‌ ಮಾಡುತ್ತಾ ನ್ಯೂಜಿಲೆಂಡ್‌ ಪೌರತ್ವವನ್ನು ಸ್ವೀಕರಿಸಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು meribillimenumeow2 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಖುಷಿಯಲ್ಲಿ ಕುಣಿದಾಡುತ್ತಾ ಸ್ಟೇಜ್‌ ಮೇಲೆ ಹೋಗಿ ಅಲ್ಲಿ ತಾನು ಧರಿಸಿದ್ದ ಭಾರತದ ಜೆರ್ಸಿ ಬಿಚ್ಚಿ, ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿ ನೆರೆದಿದ್ದ ಜನ ಸಮೂಹ ಕೂಡಾ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಆತನನ್ನು ಪ್ರೋತ್ಸಾಹಿಸಿದ್ದಾರೆ.

ಇದನ್ನೂ ಓದಿ: ತೋಳದ ರೂಪದ ನಾಯಿ! 49 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಧರ್ಮ ರಾಜಕೀಯದಿಂದ ಮುಕ್ತಿ ಪಡೆದ ನಿಮಗ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರು ʼನಾನು ಕೂಡಾ ಭಾರತೀಯ ಪೌರತ್ವವನ್ನು ತೊರೆದು ಸಂತೋಷದಿಂದ ಬೇರೆ ದೇಶದಲ್ಲಿ ನೆಲೆಸಲು ಬಯಸುತ್ತೇನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಷ್ಟು ಸುಲಭವಾಗಿ ಪೌರತ್ವ ತೊರೆಯಬಾರದಿತ್ತುʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ