
ಕೆಲವರಿಗೆ ಏನು ಇಲ್ಲ ಅಂದ್ರೂ ಕಾಫಿ ಟೀ ಮಾತ್ರ ಟೈಮ್ ಟೈಮ್ ಗೆ ಕುಡಿಯುತ್ತಿರಬೇಕು. ಕೆಲ್ಸದ ನಡುವೆ ಕಾಫಿ ಟೀಗೆ ಅಡಿಕ್ಟ್ ಆಗಿರ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ (employee) ಬಾಸ್ ಮಾತ್ರ ಇದೇ ವಿಚಾರವಾಗಿ ರೂಲ್ಸ್ ಮಾಡಿದ್ದಾರೆ. ಡ್ಯೂಟಿ ಟೈಮ್ನಲ್ಲಿ ಕಾಫಿ ಕುಡಿಬಾರದು. ಕುಡಿಯಲೇಬೇಕು ಅಂತಿದ್ರೆ ಒಂದು ಗಂಟೆ ತಡವಾಗಿ ಆಫೀಸಿಗೆ ಬರುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಕಾಫಿ ವಿಚಾರವಾಗಿ ಬಾಸ್ ಹಾಕಿದ ವಿಚಿತ್ರ ರೂಲ್ಸ್ ಉದ್ಯೋಗಿಗೆ ತಲೆ ನೋವಾಗಿದೆ. ಈ ಬಗ್ಗೆ ರೆಡ್ಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಂಟಿವರ್ಕ್ (r/antiwork) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ನ ಶೀರ್ಷಿಕೆಯಲ್ಲಿ, ಕೆಲಸದ ಸಮಯದಲ್ಲಿ ನಾನು ಕಾಫಿ ಕುಡಿಯುವುದನ್ನು ಬಾಸ್ ಬಯಸದ ಕಾರಣ, ನಾನು ಒಂದು ಗಂಟೆ ತಡವಾಗಿ ಕೆಲಸ ಪ್ರಾರಂಭಿಸಬೇಕೆಂದು ಬಯಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಕಾಫಿ ಕುಡಿಯಲು ಅವಕಾಶವಿಲ್ಲ. ಥರ್ಮಸ್ನಲ್ಲಿ ಕಾಫಿ ತಂದು ಕುಡಿಯುವುದಕ್ಕೂ ಪರ್ಮಿಷನ್ ಇಲ್ಲ. ಇನ್ನು ಕಾಫಿ ತಯಾರಿಸುವ ಯಂತ್ರ ಕೇವಲ 20 ಸೆಕೆಂಡುಗಳ ದೂರದಲ್ಲಿದೆ. ಮೆಷಿನ್ ಹತ್ರ ಹೋಗಿ ಕಾಫಿ ಕುಡಿಯುವುದಕ್ಕೂ ನೋ ಪರ್ಮಿಷನ್. ಕಾಫಿ ಕುಡಿದ್ರೆ ಸಮಯ ವ್ಯರ್ಥ ಜತೆಗೆ ಕೆಲಸವೂ ಹಾಳಾಗುತ್ತದೆ ಎಂದು ಬಾಸ್ ಹೇಳ್ತಾರೆ. ಇಂತಹ ಅನುಭವ ಹಿಂದೆಂದಿಗೂ ಆಗಿರಲಿಲ್ಲ. ಆದರೆ ಕಾಫಿ ಕುಡಿಯದೇ ಇರಲು ಆಗಲ್ಲ. ಹೀಗಾಗಿ ಸಹೋದ್ಯೋಗಿ ಮಿತ್ರರು ನನ್ನ ಕಾಫಿ ತಯಾರಿಸುವ ಯಂತ್ರ ಬಳಿ ಕಳಿಸ್ತಾರೆ. ಕಳೆದ 4 ವರ್ಷಗಳಿಂದ ಅವರಿಗೆ ಯಾರೂ ಸಿಕ್ಕಿಲ್ಲ ಎಂದು ಬಾಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Boss wants me to start an hour later because he doesn’t want me to get a coffee during worktime
by
u/thaithaipoppetje17 in
antiwork
ಬೇಸರದ ಸಂಗತಿಯೆಂದರೆ ನಾನು ಈ ಕೆಲಸಕ್ಕೆ ಹೊಸಬನಾಗಿದ್ದೇನೆ. ಇಲ್ಲಿನ ಅಡುಗೆಯವರಲ್ಲಿ ಒಬ್ಬರು ನನ್ನ ಆಪ್ತ ಸ್ನೇಹಿತರಾಗಿದ್ದಾರೆ. ಆದರೆ, ನಮ್ಮ ಈ ಹೊಸ ಬಾಸ್ ಪ್ರತಿಯೊಂದು ಸಣ್ಣ ವಿಷಯದಲ್ಲೂ ಅನಗತ್ಯವಾಗಿ ಮೂಗು ತೂರಿಸುವ ಸ್ವಭಾವದವರಾಗಿದ್ದಾರೆ. ಬಾಸ್ ವರ್ತನೆ ತೀರಾ ಕೆಟ್ಟದಾಗಿದೆ. ಅವರು ಹೇಳುವ ಕೆಲ ಮಾತುಗಳು ಸುಳ್ಳು ಎಂಬುದು ನನಗೆ ಗೊತ್ತಾಗಿದೆ. ನನ್ನ ಬಾಸ್ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಅದು ಸುಳ್ಳು, ವಾಸ್ತವವಾಗಿ 2 ವರ್ಷಗಳಷ್ಟೇ ಆಗಿದೆ. ಹೀಗೆ ಇನ್ನೂ ಅನೇಕ ವಿಷಯಗಳಿವೆ ಆದರೆ ಅವೆಲ್ಲವನ್ನೂ ಇಲ್ಲಿ ವಿವರಿಸಲು ಹೋಗುವುದಿಲ್ಲ. ಈ ಬಾಸ್ ಕಾರಣದಿಂದಾಗಿ ಅನೇಕ ಉದ್ಯೋಗಿಗಳು ಕೆಲಸ ತ್ಯಜಿಸಿದ್ದಾರೆ. ಕೆಲಸದ ಸ್ಥಳದ ವಾತಾವರಣವು ತುಂಬಾ ಹದಗೆಟ್ಟಿದೆ ಎಂದು ಬಾಸ್ ನಡವಳಿಕೆ ಬಗ್ಗೆ ವಿವರಿಸಿದ್ದಾರೆ.
ಕಾಫಿಯ ವಿಷಯವಂತೂ ಸಣ್ಣದು ಬಿಡಿ, ಪ್ರಾರಂಭದಿಂದಲೂ ಬಾಸ್ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಹತ್ತು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿಗಳು ಸಣ್ಣ ವಿಷ್ಯಕ್ಕೂ ಮೂಗು ತೂರಿಸುವ ಹಾಗೂ ಸುಳ್ಳು ಹೇಳುವ ಈ ವ್ಯಕ್ತಿಗೆ ಹೆದರಿಕೊಂಡು ಬದುಕುತ್ತಿರುವುದನ್ನು ನೋಡುವುದು ತುಂಬಾ ಬೇಸರದ ಸಂಗತಿ. ಕೆಲವರು ಪ್ರತಿದಿನವೂ ಓವರ್ ಟೈಮ್ ಕೆಲಸ ಮಾಡಲು ಒಗ್ಗಿಕೊಂಡಿದ್ದಾರೆ. ನನಗೆ ಕೆಲಸ ಕಳೆದುಕೊಳ್ಳುವ ಭಯವಿಲ್ಲ; ನನಗೆ ಬೇರೆ ಅವಕಾಶಗಳು ಇವೆ. ನಾನು ಕೆಲಸ ಬಿಡುವುದಿಲ್ಲ, ಆದರೆ ನಂಬಲು ಸಾಧ್ಯವಾಗದ ಬಾಸ್ ನೊಂದಿಗೆ ಕೆಲಸ ಮಾಡಬೇಕಾದ ಈ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ವಿಚಿತ್ರ ಕಾರಣಕ್ಕೆ ಬಾಸ್ ಗಡಿಯಾರದ ಸಮಯವನ್ನು ಮೂರು ನಿಮಿಷ ಮುಂದಕ್ಕೆ ಇಟ್ಟಿದ್ದಾನೆ. ಎಲ್ಲರೂ ಅದನ್ನು ಸರಿಪಡಿಸಿದರೂ, ಆತ ಮತ್ತೆ ಅದನ್ನು ಬದಲಾಯಿಸುತ್ತಲೇ ಇರುತ್ತಾನೆ ಎಂದು ಬಾಸ್ ನ ಮನಸ್ಥಿತಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ, ನೀವೊಬ್ಬರೇ ಅವರ ವಿರುದ್ಧ ಧ್ವನಿ ಎತ್ತಿದರೆ ಸಾಲದು, ಸಹೋದ್ಯೋಗಿಗಳು ನಿಮ್ಮ ಜತೆಗೆ ಜತೆಯಾಗಲಿ ಎಂದಿದ್ದಾರೆ. ಮತ್ತೊಬ್ಬರು, ಬಾಸ್ ನ ವಿಚಿತ್ರ ರೂಲ್ಸ್ ಮಾಡುವುದರ ಹಿಂದಿನ ಉದ್ದೇಶ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಪೋಸ್ಟ್ ನಲ್ಲಿ ಎಲ್ಲಾ ವಿಷ್ಯಗಳು ಇವೆ. ನಿಮ್ಮ ಸಮಸ್ಯೆಯೇನು ಎಂಬುದು ತಿಳಿಯುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sun, 18 October 26