ಒಂದು ಕೆಲಸಕ್ಕೆ ಸೇರಿಕೊಳ್ಳಬೇಕಾದರೆ ಅಲ್ಲಿನ ಸಮಯ ಹಾಗೂ ಸಂಬಳ ಬಗ್ಗೆ ಕೇಳುವುದು ಅಭ್ಯರ್ಥಿಯ ಕರ್ತವ್ಯ, ಆ ಆಧಾರ ಮೇಲೆಯೇ ಮುಂದೆ ಕೆಲಸ ಮಾಡಬೇಕು. ಈಗ ಎಲ್ಲ ಕಡೆಗಳಲ್ಲಿ ಸಂಬಳ ಹಾಗೂ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ, ಹೀಗೆ ಕೇಳುತ್ತಾರೆ. ಮತ್ತು ಅದು ಅನಿವಾರ್ಯ ಕೂಡ ಹೌದು. ಇಲ್ಲೊಂದು ಇದೇ ವಿಚಾರಕ್ಕೆ ಸಂಬಂಧಪಟ್ಟ ಪೋಸ್ಟ್ ಭಾರೀ ಸದ್ದು ಮಾಡುತ್ತಿದ್ದು, ಕೆಲಸ ಪಡೆಯುವವನು, ಈ ಪ್ರಶ್ನೆಯನ್ನು ಕೇಳುವ ಹಕ್ಕು ಕೂಡ ಇಲ್ಲವೇ ಎಂದು ಅನೇಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲೊಬ್ಬ ಸಿಎ ವಿದ್ಯಾರ್ಥಿ ಸಿಎ ಆರ್ಟಿಕಲ್ಶಿಪ್ಗೆ ಅರ್ಜಿ ಹಾಕಿದ್ದಾನೆ. ಈ ವೇಳೆ CA ಸಂಸ್ಥೆ ಸಂದರ್ಶನದ ವೇಳೆ, ಈ ಸಿಎ ವಿದ್ಯಾರ್ಥಿ ಕೆಲಸದ ಸಮಯ ಮತ್ತು ಸ್ಟೈಫಂಡ್ (ಸಂಬಳದ) ಬಗ್ಗೆ, ಸಂದರ್ಶನದ ಬಗ್ಗೆ ಮೊದಲೇ ಕೇಳಿದ್ದಾನೆ. ಇದಕ್ಕೆ ಸಿಟ್ಟುಗೊಂಡ ಸಂಸ್ಥೆ ಆತನಿಗೆ ಮುಜುಗರ ಆಗುವ ರೀತಿಯಲ್ಲಿ ಉತ್ತರ ನೀಡಿದೆ. ಈ ಪೋಸ್ಟನ್ನು ಅಭ್ಯರ್ಥಿ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾನೆ. ಕಂಪನಿಯ ಈ ವರ್ತನೆಗೆ ಅನೇಕರು ಇದನ್ನು ವೃತ್ತಿಪರವಲ್ಲದ ಮತ್ತು ಶೋಷಣೆಯ ಕೆಲಸ ಎಂದು ಕರೆದಿದ್ದಾರೆ.
ಸಿಎ ವಿದ್ಯಾರ್ಥಿ ರೆಡ್ಡಿಟ್ನ್ಲಿ ಹೇಳಿರುವ ಪ್ರಕಾರ, ನಾನು ಒಂದು ಸಂಸ್ಥೆಯಲ್ಲಿ ಸಿಎ ಆರ್ಟಿಕಲ್ಶಿಪ್ಗೆ ಅರ್ಜಿ ಹಾಕಿದ್ದೇ, ಅಲ್ಲಿನ ಸಂದರ್ಶನದ ವೇಳೆ ಸಮಯ ಮತ್ತು ನಿರೀಕ್ಷಿತ ಸ್ಟೈಫಂಡ್ ಕೇಳಿದೆ. ಅದಕ್ಕೆ ಅವರು ಅತಿ ಬುದ್ಧಿವಂತನಾಗುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಅವರು ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ? ನನ್ನ ಸಮಯವನ್ನು ಸರಿಹೊಂದಿಸಲು ಸಾಧ್ಯವಾಗದಿದ್ದರೆ, ಈ ಸಂಸ್ಥೆಗಳಲ್ಲಿ ಸಂದರ್ಶನಗಳಿಗೆ ನಾನು ಏಕೆ ಸಮಯ ವ್ಯರ್ಥ ಮಾಡುತ್ತೇನೆ? ಬದಲಾಗಿ, ನನ್ನ ಸಮಯವನ್ನು ಸರಿಹೊಂದಿಸಬಹುದಾದ ಸಂಸ್ಥೆಗಳಿಗೆ ನಾನು ಹೋಗಬಹುದು. ನಾನು ಕೇಳಿದ ಪ್ರಶ್ನೆಯಿಂದ ಕಂಪನಿಗೂ ಸಮಯ ಉಳಿಯುತ್ತದೆ. ಆದರೆ ಈ ರೀತಿಯ ನಡವಳಿಕೆಯು ಸಂಸ್ಥೆಯ ಇಮೇಜ್‌ಗೆ ಧಕ್ಕೆ ತರುತ್ತದೆ ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ: ಜೆಪ್ಟೋ ಅಪ್ಲಿಕೇಶನ್ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಜೋಕೆ, ಕರಾಳ ವಿಚಾರ ಬಿಚ್ಚಿಟ್ಟ ಮಾಜಿ ಉದ್ಯೋಗಿ
CA Student can’t be oversmart
byu/ManglamIsLive inCharteredAccountants
ಇನ್ನು ತಾನು ಹಂಚಿಕೊಂಡಿರುವ ಪೋಸ್ಟ್ನಲ್ಲಿ ವಾಟ್ಸಾಪ್ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿದ್ದಾನೆ. ಎಷ್ಟು ಸಮಯ ಮತ್ತು ಸ್ಟೈಫಂಡ್ ಬಗ್ಗೆ ಕೇಳುತ್ತಿರುವುದನ್ನು ಈ ಸ್ಕ್ರೀನ್‌ಶಾಟ್ ನೋಡಬಹುದು. ಇದಕ್ಕೆ ಸಂಸ್ಥೆಯೂ ಅಭ್ಯರ್ಥಿಗೆ ನಾಚಿಗೆ ಆಗುವಂತೆ ಉತ್ತರಿಸುತ್ತದೆ. ಹಾಗೂ ನಮ್ಮ ಸಂಸ್ಥೆಗೆ ಬರಬೇಡ ಎಂದು ಹೇಳುವ ಸಂದೇಶವನ್ನು ಇಲ್ಲಿ ಕಾಣಬಹುದು. ಈ ಪೋಸ್ಟ್ ನೋಡಿ ರೆಡ್ಡಿಟ್ ಬಳಕೆದಾರರೂ ತರಹೇವಾರಿ ಕಮೆಂಟ್ ಮಾಡಿದ್ದಾರೆ. ಈ ಬಳಕೆದಾರರಲ್ಲಿ ಒಬ್ಬರು , ಇದು ಒಬ್ಬ ವ್ಯಕ್ತಿ “ಕೆಟ್ಟ ಕೆಲಸದ ಸಂಸ್ಕೃತಿಯ ಆರಂಭಿಕ ವರ್ತನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಭಾರತೀಯ ಶಬ್ದಕೋಶದಲ್ಲಿ ಅತಿ ಬುದ್ಧಿವಂತಿಕೆ ಅತ್ಯಂತ ಹಿಂದುಳಿದ ಪದವಾಗಿದೆ. ಕೆಲವು ಕಾನೂನುಬದ್ಧ ಪ್ರಶ್ನೆಗಳಿಗೆ ಉತ್ತರಿಸಲು ತುಂಬಾ ಹೆದರುವ ಭ್ರಷ್ಟ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಸಮಯದ ಬಗ್ಗೆ ಕೇಳಿರುವುದು ತಪ್ಪಲ್ಲ, ಆದರೆ ಸಂಬಳದ ಬಗ್ಗೆ ಕೊನೆಯಲ್ಲಿ ಕೇಳಬೇಕಿತ್ತು. ಈ ಆಧಾರದ ಮೇಲೆ ಈ ಕಂಪನಿಗೆ ನೀವು ಸೇರಬೇಕಾ-ಬೇಡವೇ ಎಂಬುದನ್ನು ನಿರ್ಧಾರಿಸಬೇಕು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ