
ಅನೇಕ ಜೋಡಿಗಳು ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸುತ್ತಾರೆ. ವ್ಯಾಲೆಂಟೈನ್ಸ್ ಡೇ ಅನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪ್ರೇಮಿಗಳಿಗೊಂದು ಸವಾಲ್ ನೀಡುವಂತಹ ಒಗಟಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರೀತಿಯ ದೇವತೆಯೆಂದೇ ಕರೆಯುವ ಕ್ಯುಪಿಡ್ ದೇವತೆಗಳು ಬಿಲ್ಲು ಬಾಣವನ್ನು ಹಿಡಿದು ನಿಂತಿರುವ ಈ ಒಗಟಿನ ಚಿತ್ರದಲ್ಲಿ ಕೆಂಪು ಬಣ್ಣದ ಪುಟ್ಟ ಹೃದಯವೊಂದು ಅಡಗಿದೆ. ಈ ಹೃದಯವನ್ನು ಹುಡುಕಲು ಪ್ರೇಮಿಗಳಿಗೆ ಸವಾಲು ನೀಡಲಾಗಿದೆ. ನಿಮ್ಮ ಏಕಾಗ್ರತೆಯನ್ನು ಮತ್ತು ಗ್ರಹಿಕಾ ಶಕ್ತಿಯನ್ನು ಪರೀಕ್ಷಿಸಲು ನೀವು ಬಯಸುವಿರಾ? ಹಾಗಿದ್ದರೆ ಈ ಚಟುವಟಿಕೆಯನ್ನು ನೀವು ಕೂಡಾ ಪ್ರಯತ್ನಿಸಿ.
ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಪ್ರೇಮ ಪಕ್ಷಿಗಳು ಪ್ರೇಮಿಗಳ ದಿನವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಇದೀಗ ಈ ವಿಶೇಷ ದಿನವನ್ನು ಗಮನದಲ್ಲಿಟ್ಟುಕೊಂಡು, ಇಂದು ನಾವು ನಿಮಗಾಗಿ ಪ್ರೀತಿಗೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ಬ್ರೈನ್ ಟೀಸರ್ ಅನ್ನು ಹೊತ್ತು ತಂದಿದ್ದೇವೆ. ಈ ತೀಕ್ಷ್ಣ ದೃಷ್ಟಿ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗುತ್ತೀರೇ ಎಂಬುದನ್ನು ನೋಡೋಣ. ಹಾಗಿದ್ದರೆ ನೀವು ಕೇವಲ 7 ಸೆಕೆಂಡುಗಳ ಒಳಗೆ ಈ ಒಗಟಿನ ಚಿತ್ರದಲ್ಲಿರುವ ಪುಟ್ಟ ಹೃದಯವನ್ನು ಕಂಡು ಹಿಡಿಯಬೇಕು.
ಮೇಲೆ ಕೊಟ್ಟಿರುವಂತಹ ಒಗಟಿನ ಚಿತ್ರದಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಮೂರು ಕ್ಯುಪಿಡ್ ದೇವತೆಗಳು ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನ ಚಿತ್ರವನ್ನು ಕಾಣಬಹುದು. ಈ ಗುಲಾಬಿ ಹೂವುಗಳ ನಡುವೆ ಪುಟ್ಟ ಹೃದಯವೊಂದು ಅಡಗಿದೆ. ಆ ಹೃದಯವನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?
ಅಯ್ಯೋ ಏನು ಮಾಡೋದು! ಎಷ್ಟು ಹುಡುಕಿದರೂ ಗುಲಾಬಿ ಹೂವುಗಳು ಹಾಗೂ ಕ್ಯುಪಿಡ್ ದೇವತೆಗಳ ಮಧ್ಯೆ ಅಡಗಿರುವಂತಹ ಹೃದಯದವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಅಂತ ಯೋಚ್ನೆ ಮಾಡುತ್ತಿದ್ದೀರಾ? ಚಿಂತಿಸಬೇಡಿ, ನಾವು ನಿಮಗೆ ಉತ್ತರವನ್ನು ನೀಡಲಿದ್ದೇವೆ. ಒಂದು ಚಿತ್ರವನ್ನು ಕೆಳಗೆ ನೀಡಲಾಗಿದೆ, ಈ ಚಿತ್ರದ ಎಡ ಬದಿಯಲ್ಲಿ ನೀಲಿ ಬಣ್ಣದಲ್ಲಿ ರೌಂಡ್ ಮಾರ್ಕ್ ಮಾಡಿರುವ ಜಾಗದಲ್ಲಿ ನೀವು ಪುಟ್ಟ ಹೃದಯವನ್ನು ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ