
ಆಪ್ಟಿಕಲ್ ಇಲ್ಯೂಷನ್ (optical illusion) ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ನಮ್ಮ ಮೆದುಳು ಹಾಗೂ ಕಣ್ಣಿಗೆ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುತ್ತವೆ. ಆದರೆ ಇಂತಹ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ, ಕೆಲವರು ಕ್ಷಣಾರ್ಧದಲ್ಲಿ ಇದಕ್ಕೆ ಉತ್ತರ ಕಂಡುಕೊಳ್ಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಅಡಗಿರುವ ಐದು ಪುಸ್ತಕಗಳನ್ನು ಕೇವಲ ಒಂಬತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಹದ್ದಿನ ಕಣ್ಣುಳ್ಳವರಾಗಿದ್ದರೆ ಹಾಗೂ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದ್ರೆ ಸುಲಭವಾಗಿ ಈ ಒಗಟನ್ನು ಬಿಡಿಸಲು ಸಾಧ್ಯ.
ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?
maria-sayo-8591 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಅಡಗಿರುವ ಪುಸ್ತಕಗಳನ್ನು ಕಂಡುಹಿಡಿಯಬೇಕು. ಈ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಒಟ್ಟು ಐದು ಪುಸ್ತಕಗಳಿವೆ. ಈ ಪುಸ್ತಕಗಳನ್ನು ಕೇವಲ ಒಂಬತ್ತು ಸೆಕೆಂಡುಗಳಲ್ಲಿ ಗುರುತಿಸಬೇಕು. ಆದರೆ ಈ ಚಿತ್ರದಲ್ಲಿರುವ ಎಲ್ಲಾ ಪುಸ್ತಕಗಳನ್ನು ಪತ್ತೆ ಮಾಡುವುದು ನಿಮಗೆ ಕಷ್ಟವಾಗಿದ್ದರೆ ನಾವು ಕೆಲವು ಸುಳಿವುಗಳನ್ನು ನೀಡುತ್ತೇವೆ. ಐದು ಪುಸ್ತಕಗಳು ವಿವಿಧ ಸ್ಥಳಗಳಲ್ಲಿ ಅಡಗಿವೆ. ಅವುಗಳಲ್ಲಿ ಕೆಲವನ್ನು ಸುಲಭವಾಗಿ ಕಾಣಿಸುತ್ತದೆಯಾದರೂ, ಇನ್ನು ಎರಡು ಪುಸ್ತಕವನ್ನು ಸಂಪೂರ್ಣವಾಗಿ ಮರೆಮಾಡಲಾಗಿದೆ. ಏಕಾಗ್ರತೆಯಿಂದ ಗಮನಹರಿಸಿದ್ರೆ ಮಾತ್ರ ಉತ್ತರ ಕಂಡು ಕೊಳ್ಳಲು ಸಾಧ್ಯ.
ಉತ್ತರ ಇಲ್ಲಿದೆ
ಈ ಚಿತ್ರದಲ್ಲಿ ಅಡಗಿರುವ ಐದು ಪುಸ್ತಕಗಳನ್ನು ಕಂಡುಹಿಡಿಯಲು ಸಾಧ್ಯವಾದವರೆ ನೀವು ಖಂಡಿತವಾಗಿಯೂ ತೀಕ್ಷ್ಣವಾದ ದೃಷ್ಟಿ ಮತ್ತು ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಿ ಎಂದರ್ಥ. ಒಂದು ವೇಳೆ ಒಂದೆರಡು ಪುಸ್ತಕಗಳು ನಿಮ್ಮ ಕಣ್ಣಿಗೆ ಬಿದ್ದು ಉಳಿದ ಪುಸ್ತಕಗಳು ಎಲ್ಲಿದೆ ಎಂದು ಹುಡುಕುತ್ತೀರಿ. ನಿರ್ದಿಷ್ಟ ಸಮಯದೊಳಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ರೆ ಈ ಐದು ಪುಸ್ತಕಗಳು ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಬಲ್ಲಿರಾ?
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ