AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳು, ಪರ್ಸನಾಲಿಟಿ ಟೆಸ್ಟ್‌ಗಳು ಇತ್ತೀಚಿಗೆ ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವುದರ ನೀವು ಬುದ್ಧಿವಂತರೇ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ. ಈ ಚಿತ್ರದಲ್ಲಿ ಪಕ್ಷಿ ಎಲ್ಲಿದೆ ಎಂದು ಗುರುತಿಸಬೇಕು. ಈ ಒಗಟು ಬಿಡಿಸಲು ಸಾಧ್ಯವೇ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Centrum.cz
ಸಾಯಿನಂದಾ
|

Updated on:Apr 21, 2026 | 11:09 AM

Share

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (Optical Illusion) ಫೋಟೋಗಳು ವೈರಲ್​ ಆಗುತ್ತಿರುತ್ತವೆ. ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸಲು ಸಹಕಾರಿಯಾಗಿದೆ. ಆದರೆ ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ದುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಪಕ್ಷಿಯನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಗೊಂದಲಕ್ಕೀಡು ಮಾಡುವುದು ಸಹಜ. ಮೊದಲಿಗೆ, ಈ ಒಗಟು ಭೇದಿಸುವುದು ಸುಲಭ ಎಂದು ನಿಮಗೆ ಅನಿಸಬಹುದು. ಆದರೆ ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಎಲೆಗಳ ನಡುವೆ ಇರುವ ಬೆಕ್ಕು. ಇಲ್ಲಿ ಹೂವು ಹಾಗೂ ಹಚ್ಚ ಹಸಿರಿನ ಎಲೆಗಳು ಹಾಗೂ ಹಲ್ಲು ಇದೆ. ಇದೆಲ್ಲದರ ನಡುವೆ ಪಕ್ಷಿಯೂ ಅಡಗಿದೆ. ಇಲ್ಲಿರುವ ಸವಾಲು ಪಕ್ಷಿ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 15 ಸೆಕೆಂಡುಗಳಲ್ಲಿ ಪಕ್ಷಿಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ. ನೀವು ಈ ಒಗಟು ಸಿದ್ದವಿದ್ದೀರಾ ಅಂತಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಇದನ್ನೂ ಓದಿ: ನಿಮ್ಮ ಕಣ್ಣು ಶಾರ್ಪ್ ಇದ್ರೆ ಈ ಚಿತ್ರದಲ್ಲಿರುವ ಹುಡುಗಿ ಮುಖವನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಪಕ್ಷಿ ಕಂಡಿತೇ?

ಈ ಒಗಟನ್ನು ಬಿಡಿಸುವುದು ನಿಮಗೆ ಕಷ್ಟವಾಗಿರಬಹುದು. ಆದರೆ ನೀವು ಏಕಾಗ್ರತೆಯಿಂದ ಈ ಚಿತ್ರ ನೋಡಿದರೆ ಮಾತ್ರ ಇಲ್ಲಿರುವ ಪಕ್ಷಿ ಕಂಡು ಹಿಡಿಯಲು ಸಾಧ್ಯ. ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಈ ಕೆಳಗಿನ ಚಿತ್ರ ನೋಡಿ ಪಕ್ಷಿ ಎಲ್ಲಿದೆ ಎಂದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Tue, 14 April 26

Follow Us