Optical Illusion: ಈ ಚಿತ್ರದಲ್ಲಿ 26ರ ನಡುವೆ ಅಡಗಿರುವ 62 ಸಂಖ್ಯೆಯನ್ನು ಕಂಡುಹಿಡಿಯಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿ ಇರುವ ಖುಷಿಯೇ ಬೇರೆ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುವಂತೆ ಇರುತ್ತದೆ. ಭ್ರಮೆಗೆ ಒಳಪಡಿಸುವ ಈ ಚಿತ್ರಗಳನ್ನು ಬಿಡಿಸುವುದು ಸ್ವಲ್ಪ ಕಷ್ಟದ ಕೆಲಸ. ಇದೀಗ ಇಲ್ಲೊಂದು ಅಂತಹ ಚಿತ್ರವೊಂದು ವೈರಲ್ ಆಗಿದ್ದು ಇದರಲ್ಲಿ 26 ಸಂಖ್ಯೆಗಳನ್ನು ಸಾಲಾಗಿ ಬರೆಯಲಾಗಿದೆ. ಆದರೆ, ಇದರ ನಡುವೆ ಅಡಗಿರುವ 62 ಸಂಖ್ಯೆಯನ್ನು ಪತ್ತೆ ಹಚ್ಚುವ ಸವಾಲನ್ನು ನೀಡಲಾಗಿದೆ.

Optical Illusion: ಈ ಚಿತ್ರದಲ್ಲಿ 26ರ ನಡುವೆ ಅಡಗಿರುವ 62 ಸಂಖ್ಯೆಯನ್ನು ಕಂಡುಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Twitter

Updated on: Jul 11, 2025 | 10:56 AM

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅದನ್ನು ಬಿಡಿಸುವುದು ಸ್ವಲ್ಪ ಕಷ್ಟಕರ. ಕೆಲವರು ಕೆಲವು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಿ ಸೈ ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ 26 ಸಂಖ್ಯೆಗಳ ನಡುವೆ 62 ಸಂಖ್ಯೆಯೂ ಅಡಗಿದೆ. ನೀವು ಕೇವಲ ಏಳು ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ಕಂಡುಹಿಡಿಯಬೇಕು, ಈ ಸವಾಲನ್ನು ಸ್ವೀಕರಿಸಿದ್ದೀರಾ?.

@OMGPhilipa ಹೆಸರಿನ ಎಕ್ಸ್ ಖಾತೆಯಲ್ಲಿ ಆಪ್ಟಿಕಲ್ ಭ್ರಮೆಯ ಚಿತ್ರವನ್ನು ಹಂಚಿಕೊಂಡು 7 ಸೆಕೆಂಡುಗಳಲ್ಲಿ 26 ರಲ್ಲಿ 62 ನೇ ಸಂಖ್ಯೆಯನ್ನು ಗುರುತಿಸಿ” ಎಂದು ಬರೆದುಕೊಂಡಿದ್ದಾರೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ 26 ಸಂಖ್ಯೆಗಳನ್ನು ಸಾಲಾಗಿ ಬರೆಯಲಾಗಿದೆ. ಈ ಸಂಖ್ಯೆಗಳ ನಡುವೆ 62 ಸಂಖ್ಯೆಯೊಂದು ಅಡಗಿದೆ. ಅದನ್ನು ನಿಮಗೆ ನೀಡಿರುವ ಇಂತಿಷ್ಟು ಸಮಯದೊಳಗೆ ಪತ್ತೆ ಹಚ್ಚಬೇಕು ಎನ್ನುವ ಸವಾಲು ಇಲ್ಲಿದೆ.

ಇದನ್ನೂ ಓದಿ
45 ಸಂಖ್ಯೆಗಳ ನಡುವೆ ಅಡಗಿರುವ 54, 55 ಸಂಖ್ಯೆಯನ್ನು ಹುಡುಕಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು ಹುಡುಕಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳು, ಮಾನವನ ಮುಖವನ್ನು ಪತ್ತೆ ಹಚ್ಚಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಹುಡುಕಿ ಹೇಳಿ

ಪೋಸ್ಟ್ ಇಲ್ಲಿದೆ ನೋಡಿ

ಉತ್ತರ ಇಲ್ಲಿದೆ

ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು ನಿಮಗೆ ಕೊಟ್ಟಿರುವ ಸಮಯವಕಾಶ ಏಳು ಸೆಕೆಂಡುಗಳು ಮಾತ್ರ. ಈ ನಿರ್ದಿಷ್ಟ ಸಮಯದೊಳಗೆ 62 ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವೇ? ಹೆಚ್ಚು ಚಿಂತಿಸಬೇಡಿ. 26 ಸಂಖ್ಯೆಗಳ ನಡುವೆ 62 ಸಂಖ್ಯೆ ಎಲ್ಲಿದೆ ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಸರಿಯಾಗಿ ಗಮನಿಸಿ, ಹತ್ತನೇ ಸಾಲಿನಲ್ಲಿ 62 ಸಂಖ್ಯೆ ಇರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ 45 ಸಂಖ್ಯೆಗಳ ನಡುವೆ ಅಡಗಿರುವ 54, 55 ಸಂಖ್ಯೆಯನ್ನು 5 ಸೆಕೆಂಡುಗಳಲ್ಲಿ ಹುಡುಕಿ

ಜುಲೈ 4 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹತ್ತನೇ ಸಾಲಿನಲ್ಲಿ 62 ಸಂಖ್ಯೆ ಇದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಮತ್ತೊಬ್ಬರು , ಇಂತಹ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿದೆ ನಿಜವಾದ ಖುಷಿ, ಉತ್ತರ ಇಲ್ಲಿದೆ ಎಂದು ಮಾರ್ಕ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ತೀಕ್ಷ್ಣ ದೃಷ್ಟಿ ಗ್ರಹಿಕೆ ಇದ್ದವರಿಗೆ ಮಾತ್ರ ಉತ್ತರ ಕಂಡುಕೊಳ್ಳಲು ಸಾಧ್ಯ. ನನಗೆ ಈ ಒಗಟು ಬಿಡಿಸಲು ಸಾಧ್ಯವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:56 am, Fri, 11 July 25