
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸುತ್ತಿದೆ. ಇಂತಹ ಚಿತ್ರಗಳು ಮೊದಲ ನೋಟಕ್ಕೆ ನಿಮ್ಮನ್ನು ಭ್ರಮೆಗೆ ಸಿಲುಕಿಸಬಹುದು, ಇಲ್ಲದಿದ್ದರೆ ಕಣ್ಣನ್ನು ಮೋಸಗೊಳಿಸಲು ಬಹುದು. ಆದರೆ ಇದು ಟ್ರಿಕ್ಕಿ ಒಗಟಿನ ಚಿತ್ರಗಳಾಗಿರುತ್ತದೆ. ಹೀಗಾಗಿ ಈ ಒಗಟನ್ನು ಬಿಡಿಸುವುದೇ ಬಹುದೊಡ್ಡ ಚಾಲೆಂಜ್ ಇರುತ್ತದೆ. ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಹಾರಲಾಗದ ಪಕ್ಷಿಯನ್ನು ಕಂಡು ಹಿಡಿಯಬೇಕು. ಆದರೆ ಈ ಒಗಟನ್ನು ಬಿಡಿಸಲು ಕಾಲದ ಮಿತಿ ಇಲ್ಲ. ನಿಮ್ಗೆ ಇಂತಹ ಒಗಟನ್ನು ಬಿಡಿಸುವ ಕ್ರೇಜ್ ಇದ್ಯಾ, ಇದೀಗ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಒಟ್ಟಿಗೆ ಕುಳಿತಿರುವ ಪ್ರಕಾಶಮಾನವಾದ ಆಕರ್ಷಕ ಪಕ್ಷಿಗಳನ್ನು ಕಾಣಬಹುದು. ರೆಕ್ಕೆಗಳನ್ನು ಅಗಲವಾಗಿ ಹೊಂದಿರುವ ಗಿಳಿ, ಪಾರಿವಾಳ, ನವಿಲು ಹೀಗೆ ತರತರಹದ ಹಾರಾಡುವ ಹಕ್ಕಿಗಳು ಇವೆ. ಆದರೆ ಈ ಹಕ್ಕಿಗಳ ಗುಂಪಿನಲ್ಲಿ ಒಂದು ಹಾರಲಾಗದ ಪಕ್ಷಿಯೊಂದಿದೆ. ಆ ಪಕ್ಷಿ ಯಾವುದೆಂದು ಪತ್ತೆ ಹಚ್ಚುವ ಸವಾಲನ್ನು ನೀಡಲಾಗಿದೆ.
ಹಾರಲು ಸಾಧ್ಯವಾಗದ ಹಕ್ಕಿಯನ್ನು ಹುಡುಕಿ
ಈ ಚಿತ್ರದಲ್ಲಿರುವ ಬಹುತೇಕ ಪಕ್ಷಿಗಳು ರೆಕ್ಕೆಗಳನ್ನು ಹೊಂದಿದ್ದು, ಹಾರಬಲ್ಲವು. ಆದರೆ ಒಂದು ಪಕ್ಷಿಗೆ ಹಾರಲು ಆಗುವುದಿಲ್ಲ. ನೀವು ಆ ಹಕ್ಕಿ ಯಾವುದೆಂದು ಎಷ್ಟು ಹುಡುಕಲು ಪ್ರಯತ್ನ ಪಟ್ಟರೂ, ಎಲ್ಲಾ ಹಕ್ಕಿಗಳು ಒಂದೇ ಆಗಿರುವಂತೆ ಕಾಣುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ಆ ಹಾರಲು ಸಾಧ್ಯವಾಗದ ಹಕ್ಕಿ ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯ.
ಇದನ್ನೂ ಓದಿ: Optical Illusion: ಈ ಕಪ್ಪು ಬಿಳುಪಿನ ವೃತ್ತಾಕಾರದ ಚಿತ್ರದಲ್ಲಿ ಅಡಗಿರುವ ಸಂಖ್ಯೆ ಯಾವುದೆಂದು ಹೇಳಬಲ್ಲಿರಾ?
ಉತ್ತರ ಇಲ್ಲಿದೆ
ಈ ಒಗಟಿನ ಚಿತ್ರದಲ್ಲಿ ಹಾರಲು ಸಾಧ್ಯವಾಗದೇ ಇರುವ ಹಕ್ಕಿಯೇ ಡೋಡೋ. ನೀವು ಈ ಡೋಡೋವನ್ನು ತಕ್ಷಣ ಗುರುತಿಸಿ, ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನೀವು ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿದ್ದೀರಿ ಎನ್ನುವುದು ಖಚಿತವಾಗುತ್ತದೆ. ಒಂದು ವೇಳೆ ಹಾರಲಾಗದ ಹಕ್ಕಿಯನ್ನು ಗುರುತಿಸಲು ಸಾಧ್ಯವಾಗದೇ ಹೋದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಕೊನೆಯ ಸಾಲಿನಲ್ಲಿ ಎಡದಿಂದ ಮೊದಲ ಹಕ್ಕಿಯೇ ಈ ಡೋಡೋ. ಉದ್ದನೆಯ ಕೊಕ್ಕು ಮತ್ತು ದುಂಡಗಿನ ದೇಹವನ್ನು ಹೊಂದಿದ್ದು, ಹಾರಲು ಸಾಧ್ಯ ವಾಗದ ಈ ಹಕ್ಕಿಯನ್ನು ನೀವು ನೋಡಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 1 September 25