AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಕಳ್ಳಿ ಸಸ್ಯಗಳ ನಡುವೆ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಬಲ್ಲಿರಾ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಒಗಟುಗಳನ್ನು ಬಿಡಿಸುವುದು ಹೇಳಿದಷ್ಟು ಸುಲಭವಲ್ಲ. ಇದೀಗ ಇಲ್ಲೊಂದು ಕಷ್ಟಕರವಾದ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಕಳ್ಳಿ ಸಸ್ಯಗಳ ನಡುವೆ ಜಿಂಕೆಯೊಂದು ಅಡಗಿ ಕುಳಿತಿದೆ. ನೀವು ಈ ಪ್ರಾಣಿಯನ್ನು ಗುರುತಿಸಲು ಸಾಧ್ಯವೇ.

Optical Illusion: ಕಳ್ಳಿ ಸಸ್ಯಗಳ ನಡುವೆ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media
ಸಾಯಿನಂದಾ
|

Updated on: Apr 10, 2026 | 3:34 PM

Share

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಸವಾಲಿನ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ನಿಮ್ಮ ಕಣ್ಣಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕಳ್ಳಿ ಸಸ್ಯಗಳ ನಡುವೆ ಜಿಂಕೆಯೊಂದು ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹದಿನೈದು ಸೆಕೆಂಡುಗಳ ಒಳಗೆ ಗುರುತಿಸಬೇಕು. ಜಿಂಕೆಯನ್ನು ಪತ್ತೆ ಹಚ್ಚಿ ಈ ಒಗಟು ಬಿಡಿಸಿದರೆ ನೀವು ಜಾಣರು ಎಂದರ್ಥ.

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?

ಇಲ್ಯೂಷನ್ ಚಿತ್ರಗಳೇ ಹಾಗೆ, ಹೇಳಿದ್ದಷ್ಟು ಸುಲಭವಲ್ಲ. ಕಣ್ಣಿನ ಸೂಕ್ಷ್ಮತೆ ಮತ್ತು ಏಕಾಗ್ರತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗಿರುವ ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ. ಪ್ರಕೃತಿ ಸೌಂದರ್ಯ. ಬೆಟ್ಟದ ಮೇಲೆ ಯಥವತ್ತಾಗಿ ಬೆಳೆದು ನಿಂತ ಕಳ್ಳಿ ಸಸ್ಯಗಳು ಕಂಡುಬರುತ್ತವೆ. ಈ ಸಸ್ಯಗಳ ನಡುವೆ ಜಿಂಕೆ ಕೂಡ ಇದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಈ ಪ್ರಾಣಿ ನಿಮ್ಮ ಕಣ್ಣಿಗೆ ಬೀಳುತ್ತದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಕೇವಲ ಹದಿನೈದು ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ಜಸ್ಟ್ 35 ಸೆಕೆಂಡುಗಳಲ್ಲಿ ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ

ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ?

ಬೆಟ್ಟದ ಮೇಲೆ ಇರುವ ಕಳ್ಳಿ ಸಸ್ಯಗಳ ನಡುವೆ ಇರುವ ಜಿಂಕೆಯನ್ನು ಪತ್ತೆ ಹಚ್ಚುವುದು ಹೇಳಿದ್ದಷ್ಟು ಸುಲಭವಲ್ಲ. ಜಿಂಕೆಯ ಮೈ ಬಣ್ಣವು ಕಳ್ಳಿ ಸಸ್ಯಗಳ ಬಣ್ಣದೊಂದಿಗೆ ಬೆರೆತು ಹೋಗಿದೆ. ಹೀಗಾಗಿ ನೀವು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ.. ನಾವೇ ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿ, ನೀವು ತಲೆಕಕೆಡಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದೇವೆ.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us