Viral Video : ಡ್ರೋಣ್ ಆರ್ಡರ್ ಮಾಡಿದವರಿಗೆ ಆಲೂಗಡ್ಡೆ ಸಿಕ್ಕಿದ್ದು, ಮೊಬೈಲ್ ಆರ್ಡರ್ ಮಾಡಿದವರಿಗೆ ಸೋಪ್ ಸಿಕ್ಕಿದ್ದು ಹೀಗೆ ಅನೇಕ ವಿಡಿಯೋಗಳನ್ನು ನೋಡಿದ ನೆನಪು ನಿಮಗಿರಬಹುದು. ಇದೀಗ ಮಹಿಳೆಯೊಬ್ಬರು ಆನ್ಲೈನ್ನಲ್ಲಿ ಜೀನ್ಸ್ ಪ್ಯಾಂಟ್ ಆರ್ಡರ್ ಮಾಡಿದ್ದಾರೆ. ಆದರೆ ಇವರಿಗೆ ಸಿಕ್ಕಿದ್ದು ಈರುಳ್ಳಿ! ನೆಟ್ಟಿಗರು ಆನ್ಲೈನ್ ಶಾಪಿಂಗ್ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆನ್ಲೈನ್ನಲ್ಲಿ ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಷನ್ ಸೈಟ್ ಡೆಪಾಪ್ನಲ್ಲಿ ಜೀನ್ಸ್ ಆರ್ಡರ್ ಮಾಡಿದ್ದಾಳೆ. ಜೀನ್ಸ್ನ ಕನಸು ಕಾಣುತ್ತ ಕುಳಿತವಳಿಗೆ ಕೈಗೆ ಬಂದು ತಲುಪಿದ್ದು ಈರುಳ್ಳಿ. ಹೀಗಾದಾಗ ಆಕೆ ವಿಚಲಿತಗೊಂಡು ಕಸ್ಟಮರ್ ಕೇರ್ಗೆ ಸಂಪರ್ಕಿಸಿದ್ದಾಳೆ. ಆದರೆ ಅತ್ತಕಡೆಯಿಂದ ವ್ಯಕ್ತಿ ಕೂಡ ಈಕೆಯಂತೆಯೇ ಗೊಂದಲವನ್ನು ಅನುಭವಿಸಿದ್ಧಾರೆ. ಇದು ಹೀಗಾಗಲು ಹೇಗೆ ಸಾಧ್ಯ ಎಂದು ಮಹಿಳೆ, ನನಗೂ ಅದೇ ಅರ್ಥವಾಗುತ್ತಿಲ್ಲ ಎಂದು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ತಿಳಿಸಿದ್ದಾರೆ. ಈ ಚಾಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಈ ವೆಬ್ಸೈಟ್ ಮಹಿಳೆಗೆ ಕ್ಷಮೆ ಕೇಳಿದೆ.
ಸ್ತ್ರೀರೋಗ ತಜ್ಞೆಯ ಸೋಗಿನಲ್ಲಿ 38 ಮಹಿಳೆಯರನ್ನು ಫೇಸ್ಬುಕ್ ಮೂಲಕ ವಂಚಿಸಿದ ಪುರುಷಪುಂಗವ
ಈ ಪೋಸ್ಟ್ 23,000 ಜನರನ್ನು ಸೆಳೆದಿದೆ. ಬಹಳ ಜನರು, ತಮಾಷೆಯಾಗಿದೆ ಇದೆಲ್ಲ. ಯಾಕೆ ಜನರು ಇಂಥದೆಲ್ಲದಕ್ಕೆ ಆಸೆ ಪಡುತ್ತಾರೋ ಎಂದಿದ್ದಾರೆ. ಈರುಳ್ಳಿ! ಬಹಳ ಸಮಯೋಚಿತವಾಗಿದೆ ಆರ್ಥಿಕತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಂದಿದ್ದಾರೆ ಹಲವರು.
ಆನ್ಲೈನ್ ಶಾಪಿಂಗ್ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ನಿಜ. ಆದರೆ ಎಲ್ಲ ಸಮಯದಲ್ಲಿಯೂ ಇದು ಗ್ರಾಹಕಸ್ನೇಹಿಯಾಗಿ ವರ್ತಿಸುತ್ತದೆ ಎಂದು ಹೇಳಲಾಗದು. ಆಗಾಗ ಇಂಥ ಘಟನೆಗಳೇ ಇದಕ್ಕೆ ಸಾಕ್ಷಿ. ಇದು ಒತ್ತಡವನ್ನುಂಟು ಮಾಡುವುದಲ್ಲದೆ ಮತ್ತೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಮಯವನ್ನೂ ಬೇಡುತ್ತದೆ.
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:26 pm, Fri, 18 November 22