ವೈದ್ಯರನ್ನು ಜೀವ ಉಳಿಸುವ ದೇವರೆಂದು ಹೇಳುತ್ತೇವೆ. ಆದ್ರೆ ಕೆಲವೊಮ್ಮೆ ಕೆಲ ವೈದ್ಯರುಗಳು ಮೈ ಮರೆತು ವರ್ತಿಸುವಂತಹ, ಯಡವಟ್ಟುಗಳನ್ನು ಮಾಡುವಂತಹ ಘಟನೆಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವೈದ್ಯನೊಬ್ಬ ತನ್ನ ಕರ್ತವ್ಯವನ್ನೇ ಮರೆತು ಮಹಿಳಾ ರೋಗಿಗಳೊಂದಿಗೆ ಅಸಭ್ಯ ವರ್ತನೆಯನ್ನು ತೋರಿದ್ದಾನೆ. ಹೌದು ತಪಾಸಣೆಯ ನೆಪದಲ್ಲಿ ಮಹಿಳಾ ರೋಗಿಗಳ ಖಾಸಗಿ ಅಂಗ ಸ್ಪರ್ಶಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ವೈದ್ಯನ ಈ ಹೇಯ ಕೃತ್ಯದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈದ್ಯನೊಬ್ಬ ತಪಾಸಣೆಯ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶಿಸಿ ಮಹಿಳಾ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ. ಈ ಕುರಿತ ವಿಡಿಯೋವೊಂದನ್ನು ThreadMSG ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
पंजाब, लाहौर #पाकिस्तान ..!! 😳 #पुरुष डॉक्टर विशेष तरीके से एक महिला मरीज का पूरा चेक-अप कर रहा है..!! 👇 #FOLLOW – @ThreadMSG pic.twitter.com/f6Y1lUxJqG
— THREAD MSG (@ThreadMSG) January 2, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೈದ್ಯನೊಬ್ಬ ತಪಾಸಣೆ ನಡೆಸುವ ನೆಪದಲ್ಲಿ ಮಹಿಳಾ ರೋಗಿಗಳ ಖಾಸಗಿ ಅಂಗವನ್ನು ಸ್ಪರ್ಶಿಸಿ ಅಸಭ್ಯ ವರ್ತನೆಯನ್ನು ತೋರುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಡುರಸ್ತೆಯಲ್ಲಿ ಶಾಲಾ ಬಾಲಕಿಯರ ಕಿತ್ತಾಟ; ಫೈಟ್ ನೋಡಿ ಕುಣಿದು ಕುಪ್ಪಳಿಸಿದ ಹುಡುಗರು
ಜನವರಿ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂತಾ ಅಸಹ್ಯʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಗಿನ ಕಾಲದಲ್ಲಿ ಇಂತಹ ಘಟನೆಗಳು ಎಲ್ಲೆಡೆ ನಡೆಯುತ್ತಿವೆʼ ಎಂದು ಹೇಳಿದ್ದಾನೆ. ಇನ್ನೂ ಅನೇಕರು ವೈದ್ಯನ ಹೇಯ ಕೃತ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ