
ಪಾಕಿಸ್ತಾನದಲ್ಲಿ (Pakistan) ಮಹಿಳೆಯರನ್ನು ದಿನನಿತ್ಯವೂ ಹಿಂಸೆ ಮಾಡುವ ಪ್ರವೃತ್ತಿಗಳು ನಡೆಯುತ್ತಲೇ ಇದೆ. ಇದೀಗ ಅಂತಹದ್ದೇ ಘಟನೆಗೆ ಸಂಬಂಧಿಸಿದ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಹಿರಿಯ ಪತ್ರಕರ್ತೆ (Pakistani journalist) ಮತ್ತು ದೂರದರ್ಶನ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಆಕೆಯ ಪತಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದ ವಿಚಾರವಾಗಿ ನಿರೂಪಕಿ ಜಾಸ್ಮೀನ್ ಮಂಜೂರ್ ಮೇಲೆ ಈ ಹಲ್ಲೆ ನಡೆಸಿದ್ದು, ತನ್ನ ಪತಿ ಹಲ್ಲೆ ಮಾಡಿರುವ ಬಗ್ಗೆ ಫೋಟೋವೊಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಆ ಫೋಟೋದಲ್ಲಿ ನಿರೂಪಕಿಯ ಕಣ್ಣು ಊದಿಕೊಂಡಿರುವುದನ್ನು ಕಾಣಬಹುದು.
ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಸುರಕ್ಷಿತವಾಗಿರುವ ಮನೆಯಲ್ಲಿಯೂ ಯಾರೂ ಸುರಕ್ಷಿತವಾಗಿಲ್ಲ. ನೀವು ಕುರುಡಾಗಿ ನಂಬುವವರೇ ಅತ್ಯಂತ ಅಪಾಯಕಾರಿ ಜನರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡು, ಈ ಕುರಿತ ಪೋಸ್ಟನ್ನು ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮತ್ತೊಂದು ಪೋಸ್ಟ್ನ್ನು ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ನಿಮಗೆ ಒಬ್ಬ ಮಹಿಳೆ ಸಿಕ್ಕಾಗ, ನೀವು ನಿಮ್ಮ ನಿಜವಾದ ಬಣ್ಣಗಳನ್ನು ತೋರಿಸುತ್ತೀರಿ, ಈ ರೀತಿ ದಬ್ಬಾಳಿಕೆ ಮಾಡುವುದು ಹೇಡಿತನ, ದ್ವೇಷಿಗಳು ಯಾವಾಗಲೂ ಇರುತ್ತಾರೆ ಅವರನ್ನು ದೂಷಿಸಬೇಡಿ. ಜೀವನದಲ್ಲಿ ಅವರ ವೈಫಲ್ಯವೇ ಅವರನ್ನು ಈ ಸ್ಥಾನದಲ್ಲಿ ಇರಿಸಿದೆ, ನನ್ನ ಬಳಿ ಇನ್ನೂ 50 ಚಿತ್ರಗಳಿವೆ ಎಂದು ಬರೆದುಕೊಂಡಿದ್ದಾರೆ.
This can happen to anyone no one is safe even in the safety your house the most dangerous people are the ones you trust blindly pic.twitter.com/wjY765FWz9
— Jasmeen Manzoor (@jasmeenmanzoor) July 15, 2025
ನಿರೂಪಕಿ ಜಾಸ್ಮೀನ್ ತನ್ನ ಜೀವನದ ಕಷ್ಟಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದು ನಾನು. ಹೌದು, ಇದು ನನ್ನ ಕಥೆ – ನನ್ನ ಜೀವನವು ಹಿಂಸಾತ್ಮಕ ವ್ಯಕ್ತಿಯಿಂದ ನಾಶವಾಯಿತು. ನನ್ನ ನ್ಯಾಯವನ್ನು ನನ್ನ ಅಲ್ಲಾಹನಿಗೆ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಸ್ಥಿತಿ ನನ್ನ ಮಾಜಿ ಪತಿಯಿಂದ ಉಡುಗೊರೆಯಾಗಿ ಬಂದಿದ್ದು, ಈ ಬಗ್ಗೆ ಸಾವರ್ಜನಿಕವಾಗಿ ಮಾತನಾಡಬೇಕು ಬೇಡವೇ ಎಂಬ ಗೊಂದಲದಲ್ಲಿ ಈ ಪೋಸ್ಟ್ ಮಾಡಿದ್ದೇನೆ. ಆದರೆ ಈ ರೀತಿಯ ನಡವಳಿಕೆಯ ವಿರುದ್ಧ ನಾವೆಲ್ಲರೂ ಒಂದಾಗಬೇಕು. ಜೊತೆಗೆ ಇದರ ವಿರುದ್ಧ ಧೈರ್ಯವಾಗಿ ಪ್ರತಿಭಟಿಸಲು ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಯಿಯ ದೀರ್ಘಾಯುಷ್ಯಕ್ಕಾಗಿ ಶವಪೆಟ್ಟಿಗೆ ತಂದ ಮಗ, ಇದು ಇಲ್ಲಿನ ಆಚರಣೆ
ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್ 17 ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ಕಾಮೆಂಟ್ ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಕೌಟುಂಬಿಕ ಹಿಂಸೆ ನಮ್ಮ ಸಮಾಜದ ಮೇಲೆ ಒಂದು ಕಳಂಕ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಪಾಕಿಸ್ತಾನದಲ್ಲಿರುವ ತನಕ , ನೀವು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ