Viral News: ಹೆಣ್ಣು ಮಗು ಹುಟ್ಟಿದ ಸಂತೋಷಕ್ಕೆ 40,000 ರೂ. ಖರ್ಚು ಮಾಡಿ ಉಚಿತವಾಗಿ ಊರಿಗೆಲ್ಲಾ ಪಾನಿ ಪುರಿ ಹಂಚಿದ ವ್ಯಾಪಾರಿ!

| Updated By: shruti hegde

Updated on: Sep 14, 2021 | 9:55 AM

ಹೆಣ್ಣು ಮಗುವನ್ನು ಪಡೆಯುವುದು ನನ್ನ ಕನಸಾಗಿತ್ತು. ನಾನು ಮದುವೆ ಆದಾಗಿನಿಂದ ಹೆಣ್ಣುವನ್ನು ಪಡೆಯಬೇಕೆಂಬ ಆಸೆ ಹೊಂದಿದ್ದೆ. ನನಗೆ ದೇವರು ಮೊದಲಿಗೆ ಗಂಡು ಮಗುವನ್ನು ಆಶೀರ್ವಾದವಾಗಿ ನೀಡಿದ. ಇದೀಗ ಎರಡನೇಯ ಮಗು ಹೆಣ್ಣು ಮಗು ಎಂದು ವ್ಯಾಪಾರಸ್ಥ ಸಂತೋಷವನ್ನು ಹಂಚಿಕೊಂಡಿದ್ದಾರೆ.

Viral News: ಹೆಣ್ಣು ಮಗು ಹುಟ್ಟಿದ ಸಂತೋಷಕ್ಕೆ 40,000 ರೂ. ಖರ್ಚು ಮಾಡಿ ಉಚಿತವಾಗಿ ಊರಿಗೆಲ್ಲಾ ಪಾನಿ ಪುರಿ ಹಂಚಿದ ವ್ಯಾಪಾರಿ!
ಸಾಂದರ್ಭಿಕ ಚಿತ್ರ
Follow us on

ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದ ಪಾನಿ ಪುರಿ ವ್ಯಾಪಾರಸ್ಥ ಊರಿಗೆಲ್ಲಾ ಪಾನಿ ಪುರಿ ಹಂಚಿ ಸಂತೋಷವನ್ನು ಹೊರಹಾಕಿದ್ದಾರೆ. ಬರೋಬ್ಬರಿ 35,000 ದಿಂದ 40,000 ರೂಪಾಯಿ ಖರ್ಚು ಮಾಡಿ ಆತನ ವ್ಯಾಪರ ಜಾಗದ ಸುತ್ತ ಇರುವ ಜನರಿಗೆಲ್ಲಾ ಉಚಿತವಾಗಿ ಪಾನಿ ಪುರಿ ನೀಡಿದ್ದಾರೆ. ನಗರದ ಜನರು ಆತನ ಸಂತೋಷದ ಪ್ರಯುಕ್ತ ಸಿಕ್ಕ ಪಾನಿ ಪುರಿಯನ್ನು ಸಂತೋಷದಿಂದ ಸವಿದಿದ್ದಾರೆ.

ಆಗಸ್ಟ್​ 17ರಂದು ವ್ಯಾಪಾರಸ್ಥನ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಂಚಲ್ ಗುಪ್ತ ಎಂಬ ಹೆಸರಿನ ಪಾನಿ ಪುರಿ ವ್ಯಾಪಾರಸ್ಥ ಈ ಖುಷಿಗೆ ಊರಿನ ಜನರಿಗೆಲ್ಲಾ ಪಾನಿ ಪುರಿಯನ್ನು ಉಚಿತವಾಗಿ ಹಂಚುವ ಆಸೆ ಹೊಂದಿದ್ದರು. ಮಧ್ಯ ಪ್ರದೇಶದ ಕೋಲಾರ್ ಎಂಬ ನಗರದಲ್ಲಿ ಅಂಚಲ್ ಗುಪ್ತಾ ಅಂಗಡಿ ಹೊಂದಿದ್ದರು. ಕಳೆದ ಭಾನುವಾರ ಉಚಿತವಾಗಿ ಗ್ರಾಹಕರಿಗೆ ಪಾನಿ ಪುರಿಯನ್ನು ಸವಿಯಲು ಕೊಟ್ಟಿದ್ದಾರೆ.

ಹೆಣ್ಣು ಮಗುವನ್ನು ಪಡೆಯುವುದು ನನ್ನ ಕನಸಾಗಿತ್ತು. ನಾನು ಮದುವೆ ಆದಾಗಿನಿಂದ ಹೆಣ್ಣುವನ್ನು ಪಡೆಯಬೇಕೆಂಬ ಆಸೆ ಹೊಂದಿದ್ದೆ. ನನಗೆ ದೇವರು ಮೊದಲಿಗೆ ಗಂಡು ಮಗುವನ್ನು ಆಶೀರ್ವಾದವಾಗಿ ನೀಡಿದ. ಇದೀಗ ಎರಡನೇಯ ಮಗು ಹೆಣ್ಣು ಮಗು ಎಂದು 30 ವರ್ಷದ ವ್ಯಾಪಾರಸ್ಥ ಪಿಟಿಐ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ವರ್ಷ ಆಗಸ್ಟ್ 17ರಂದು ಹೆಣ್ಣು ಮಗುವನ್ನು ದೇವರು ಕರುಣಿಸಿದ್ದಾನೆ. ಭಾನುವಾರ ನನ್ನ ಮೊದಲ ಮಗನ ಎರಡನೇ ಹುಟ್ಟು ಹಬ್ಬ ಮತ್ತು ದೇವರು ನನಗೆ ಹೆಣ್ಣು ಮಗುವನ್ನು ಕರುಣಿಸಿದ್ದರಿಂದ ಭೋಪಾಲ್ ಜನರಿಗೆ ಉಚಿತ ಪಾನಿ ಪುರಿ ನೀಡುವ ಮೂಲಕ ನನ್ನ ಸಂತೋಷವನ್ನು ಆಚರಿಸಿಕೊಂಡೆ. ಭವಿಷ್ಯವು ಹೆಣ್ಣು ಮಕ್ಕಳಿಂದ ಸಾಧ್ಯ ಎಂದು ವ್ಯಾಪಾರಸ್ಥ ಮಾತನಾಡಿದ್ದಾರೆ.

ನಾನು ಭಾನುವಾರ 35,000 ದಿಂದ 40,000 ಮೌಲ್ಯದ ಪಾನಿ ಪುರಿಯನ್ನು ಉಚಿತವಾಗಿ ನೀಡಿದ್ದೇನೆ. ಮಗಳಿದ್ದ ಸಂತೋಷವು ಎಲ್ಲಕ್ಕಿಂತಲೂ ಮಿಗಿಲಾದದ್ದು ಎಂದು ಅವರು ಹೇಳಿದ್ದಾರೆ. ಭಾನುವಾರ ವ್ಯಾಪಾತಸ್ಥರ ಅಂಗಡಿಯಲ್ಲಿ ಗ್ರಾಹಕರು ಉಚಿತವಾಗಿ ಪಾನಿ ಪುರಿ ಸವಿದಿದ್ದಾರೆ. ಹಲವರು ಆತನ ಮಗಳ ಜನನಕ್ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ:

Viral News: ‘ಉಡುಗೊರೆ ಮೌಲ್ಯಕ್ಕೆ ತಕ್ಕಂತೆ ಮದುವೆ ಊಟ’ ಮೆನು ಕಾರ್ಡ್​ ಫೋಟೋ ವೈರಲ್

Viral News: ವಿಷಕಾರಿ ಪ್ರಾಣಿಗಳಿರುವ ಕಾಡಿನಲ್ಲಿ ಕಳೆದಹೋದ 72 ವರ್ಷದ ವೃದ್ಧ ಮರಳಿ ಮನೆಗೆ ಬಂದ ಇಂಟ್ರೆಸ್ಟಿಂಗ್​​ ಸ್ಟೋರಿ ಇಲ್ಲಿದೆ

(Pani puri sellers celebrates daughter’s birthday spend 40,000 rs for celebration)

Published On - 9:55 am, Tue, 14 September 21