ಆರಾಮದಾಯಕ ಹಾಗೂ ಖರ್ಚು ಕಡಿಮೆ ಎನ್ನುವ ಕಾರಣಕ್ಕೆ ಈ ರೈಲು ಸಾರಿಗೆ (railway transp0rt) ಬೆಸ್ಟ್ ಎನ್ನಬಹುದು. ಹೀಗಾಗಿ ದೆಹಲಿ, ಮುಂಬೈಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನರು ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಹಾಗೂ ಓಡಾಟಕ್ಕೆ ರೈಲನ್ನು ಅವಲಂಬಿಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಪ್ರಯಾಣಿಕರಿಂದ ರೈಲ್ವೆ ಸಿಬ್ಬಂದಿಗಳು ಹೆಚ್ಚುವರಿ ಹಣ ವಸೂಲಿ ಮಾಡುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ನಲ್ಲಿ ಅಡುಗೆ ಸಿಬ್ಬಂದಿ (pantry staff) ಯೊಬ್ಬರು ಮೊಬೈಲ್‌ನಲ್ಲಿ ಬಾರ್‌ಕೋಡ್ ತೋರಿಸಿ ಹಣ ವಸೂಲಿ ಮಾಡುತ್ತಿದ್ದು, ಇದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
@Pritamtayde0 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ಶೇರ್ ಮಾಡಿಕೊಂಡಿದ್ದು, ನಾನು ಕೆಆರ್ ಎಸ್ ಬೆಂಗಳೂರಿನಿಂದ ನಾಗ್ಪುರ ಜಂಕ್ಷನ್‌ಗೆ ರೈಲು ಸಂಖ್ಯೆ 22691, ಕೋಚ್ B 2 ನಲ್ಲಿ ಪ್ರಯಾಣಿಸುವುದಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ, ಅಡುಗೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಟಿಪ್ ನೀಡುವಂತೆ ಕೇಳಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಡುಗೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಟಿಪ್ ಕೇಳುವುದನ್ನು ನೋಡಬಹುದು. ಸಿಬ್ಬಂದಿಯೂ ನೇರವಾಗಿ ಹಣ ಕೇಳದೆ, ಹವಾನಿಯಂತ್ರಿತ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಮೊಬೈಲ್ ನಲ್ಲಿ ಬಾರ್‌ಕೋಡ್‌ನ್ನು ತೋರಿಸಿ ಟಿಪ್ ಪಡೆಯುತ್ತಿರುವುದನ್ನು ಕಾಣಬಹುದು. ಪ್ರಯಾಣಿಕರೊಬ್ಬರು ನಾನು ಕೊಟ್ಟೆ ಎನ್ನುತ್ತಿದ್ದಂತೆ. ಸರಿ ಯಾವುದೇ ಸಮಸ್ಯೆ ಇಲ್ಲ ಎಂದು ನಿಧಾನ ಧ್ವನಿಯಲ್ಲಿ ಈ ಸಿಬ್ಬಂದಿ ಹೇಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ :Video : ಸೈಕಲ್ ಸವಾರನನ್ನು ಕಂಡು ಭಯಬಿದ್ದ ಕರಡಿ
Rajdhani express – 22691
PNR – 4418815475
I was in B2 Coach , having good time and suddenly i saw these catering guys asking “Kharcha Pani ” to everyone in the coach .
😄😄 Lol
They said Upar tak Pesa jata hai .
Sabme bat-ta hai .@IRCTCofficial @eCateringIRCTC @BJP4India pic.twitter.com/ZMPcwRRepL— Pritam #Octavia (@Pritam_Tayde0) May 9, 2025
ಮೇ 9 ರಂದು ಶೇರ್ ಮಾಡಲಾದ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪೋಸ್ಟ್‌ಗೆ ಅಧಿಕೃತ ಐಆರ್ ಸಿಟಿಸಿ ಖಾತೆ ಪ್ರತಿಕ್ರಿಯಿಸಿದ್ದು, ಸರ್, ದಯವಿಟ್ಟು ಮೊಬೈಲ್ ಸಂಖ್ಯೆಯನ್ನು ನೇರವಾಗಿ ಹಂಚಿಕೊಳ್ಳಿ ಎಂದು ತಿಳಿಸಿದೆ. ಬಳಕೆದಾರರೊಬ್ಬರು, ರೈಲ್ವೆ ಅಧಿಕಾರಿಗಳೇ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಮತ್ತೊಬ್ಬರು, ಈ ಸಿಬ್ಬಂದಿ ಒಳ್ಳೆಯ ಸೇವೆಯನ್ನು ನೀಡಿದರೆ ನಿಮ್ಮಿಂದ ಟಿಪ್ ನಿರೀಕ್ಷಿಸಬಹುದು, ಆದರೆ ಒತ್ತಾಯಿಸುವಂತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊರ್ವ ಬಳಕೆದಾರರು, ಈ ಅನುಭವವು ನನಗೂ ಆಗಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ