ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್​ ಮ್ಯಾಚ್​ ಸ್ಕೋರ್ ​ಬರೆದುಕೊಟ್ಟ ಪೈಲಟ್

| Updated By: ಶ್ರೀದೇವಿ ಕಳಸದ

Updated on: Oct 31, 2022 | 6:17 PM

Cricket Match’s Score : ಕ್ರಿಕೆಟ್​ ಸ್ಕೋರ್​ ಅಪ್​ಡೇಟ್ ಪ್ಲೀಸ್​ ಅಂತ ಪೈಲಟ್​ಗೆ ಕೇಳಿದ್ದಾರೆ ಈ ಪ್ರಯಾಣಿಕರು. ಇಂಡಿಗೋ ನ್ಯಾಪ್​ಕಿನ್​ ಮೇಲೆ ಕೈಯಿಂದ ಬರೆದು ಕೊಟ್ಟಿದ್ದಾರೆ ಪೈಲಟ್. ನೆಟ್ಟಿಗರು ಫುಲ್​ ಖುಷ್!

ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್​ ಮ್ಯಾಚ್​ ಸ್ಕೋರ್ ​ಬರೆದುಕೊಟ್ಟ ಪೈಲಟ್
Passenger receives handwritten note from IndiGo pilot after requesting cricket match’s score.
Follow us on

Viral : ಕ್ರಿಕೆಟ್​ನ ಹುಚ್ಚುಪ್ರೇಮ, ಇದೊಂಥರಾ ನಶಾ ಇದ್ದಹಾಗೆ. ಆಗಾಗ ಕೊನೇಪಕ್ಷ ಸ್ಕೋರ್​ ಅನ್ನಾದರೂ ತಿಳಿದುಕೊಂಡರೆ ಚೂರುಪಾರು ಉಸಿರುಬರುತ್ತಿರುತ್ತದೆ ಕ್ರಿಕೆಟ್​ ಪ್ರೇಮಿಗಳಿಗೆ. ಇಲ್ಲದೇ ಹೋದಲ್ಲಿ ಪೂರ್ತಿ ಹುಚ್ಚೇ! ಅಲ್ಲೆಲ್ಲೋ ಮ್ಯಾಚ್ ನಡೆಯುತ್ತಿದ್ದು ಈ ಪ್ರೇಮಿಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರಂತೂ ಕಥೆ ಅಷ್ಟೇ ಎಂದು ನಾವೆಲ್ಲಾ ಅಂದುಕೊಳ್ಳಬಹುದು. ಆದರೆ ಈಗ ಕಾಲ ಬದಲಾಗಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕರ ನಿರೀಕ್ಷೆಯನ್ನು ಪೂರೈಸುವಲ್ಲಿ ಹೆಚ್ಚು ಶ್ರಮಿಸುತ್ತಿದೆ ಎನ್ನುವುದಕ್ಕೆ ಈ ಟ್ವೀಟ್​ ಉದಾಹರಣೆ. ವಿಮಾನ ಪ್ರಯಾಣದ ಮಧ್ಯೆಯೇ ಕ್ರಿಕೆಟ್​ ಪ್ರೇಮಿಯೊಬ್ಬರು ಇಂಡಿಗೋ ಪೈಲಟ್​ಗೆ ವಿನಂತಿಸಿಕೊಂಡು ಕ್ರಿಕೆಟ್​ ಸ್ಕೋರ್ ಅನ್ನು ಕೇಳಿದ್ದಾರೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇದು ಸ್ವಲ್ಪ ಜಾಸ್ತಿಯೇ ಆಯಿತಲ್ಲವಾ ಹುಚ್ಚು? ನಿನ್ನೆ ಆಸ್ಟ್ರೇಲಿಯಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ (ICC T20) ಮ್ಯಾಚ್​ ನಡೆದಿತ್ತು. ಆಗ ವಿಕ್ರಮ ಗರ್ಗ ಎಂಬ ಪ್ರಯಾಣಿಕರು ಪೈಲಟ್​ಗೆ ಸ್ಕೋರ್ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಪೈಲಟ್​ ವಿಮಾನ ಚಾಲನೆ ಮಾಡುತ್ತಲೇ ಕ್ರಿಕೆಟ್​ ಸ್ಕೋರ್​ ಅನ್ನು ತಮ್ಮ ಕೈಬರಹದಲ್ಲಿ ಅವರಿಗೆ ತಲುಪಿಸಿದ್ಧಾರೆ. ಪ್ರಯಾಣ ಮುಗಿದ ನಂತರ ವಿಕ್ರಮ ಗರ್ಗ, ‘ಮ್ಯಾಚ್​ನಲ್ಲಿ ಇಂಡಿಯಾ ಸೋತಿತು ನಿಜ. ಆದರೆ @IndiGo6E ನನ್ನ ಹೃದಯ ಗೆದ್ದಿದೆ.’ ಎಂದು ಪೈಲಟ್​ಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ಧಾರೆ.

ಸಾಕಷ್ಟು ಜನರು ರೀಟ್ವೀಟ್ ಮಾಡಿದ್ದಾರೆ ಈ ಪೋಸ್ಟ್​ ಅನ್ನು. ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ ಪೈಲಟ್​ನ ಸಹಕಾರಕ್ಕೆ. ಹಾಗೆಯೇ ಇಂಡಿಗೋ ಸಂಸ್ಥೆಯು, ಆದಷ್ಟು ಬೇಗ ಇಂಡಿಗೋ ವಿಮಾನದಲ್ಲಿ ನಿಮ್ಮನ್ನು ಮತ್ತೆ ನೋಡಲು ಇಚ್ಛಿಸುತ್ತೇವೆ ಎಂದು ಪ್ರತಿಕ್ರಿಯಿಸಿದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:14 pm, Mon, 31 October 22