
ಸಾವು ಯಾವಾಗ ಹೇಗೆ ಯಾವಾಗ ಬದುಕುತ್ತದೆ ಎಂದು ಊಹಿಸಲು ಸಾಧ್ಯ. ಆಯಸ್ಸು ಗಟ್ಟಿಯಿದ್ದರೆ ಪ್ರಪಾತಕ್ಕೆ ಬಿದ್ದರೂ ಸಾವಿನಿಂದ ಜಯಿಸಿ ಬರಬಹುದು ಎನ್ನುವುದಕ್ಕೆ ವಿಶ್ವಾಸ್ ಕುಮಾರ್ ರಮೇಶ್ ಎನ್ನುವವರೇ ಉದಾಹರಣೆಯಾಗಿದ್ದಾರೆ. ಹೌದು, ಗುಜರಾತ್‌ನ ಅಹಮದಾಬಾದ್ (Ahmedabad of Gujarat) ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ, ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್. ಅಹಮದಾಬಾದ್ ವಿಮಾನ ದುರಂತದಲ್ಲಿ ’11ಎ’ ಸೀಟಿನಲ್ಲಿದ್ದ ಪ್ರಯಾಣಿಕ ವಿಶ್ವಾಸ್ ಕುಮಾರ್ (Vishwas Kumar) ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯೇ ಗೊತ್ತೇ ಇದೆ. ಹೌದು ಇದೀಗ ಈ ವ್ಯಕ್ತಿಯ ಲಕ್ಕಿ ನಂಬರ್ 11 ಎನ್ನಲಾಗುತ್ತಿದೆ. ಈ ನಂಬರ್‌ಗೆ ಸಂಬಂಧ ಪಟ್ಟಂತೆ ಸೋಶಿಯಲ್ ಮೀಡಿಯಾ (social media) ದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ 11 ನಂಬರ್ ಲಕ್ಕಿ ಎನ್ನುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವ್ಯಕ್ತಿಯ ಹಾಸ್ಪಿಟಲ್ ಬೆಡ್ ನಂಬರ್ 11 ದೇ ಆಗಿರುವುದು ಅಚ್ಚರಿಯ ವಿಷಯಗಳಲ್ಲಿ ಒಂದಾಗಿದೆ.
chillpill291 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಈ ವಿಮಾನ ದುರಂತದಲ್ಲಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ವಿಶ್ವಾಸ್ ಕುಮಾರ್ ಅವರ ಬೆಡ್ ನಂಬರ್ ಕೂಡ 11 ನೇ ಆಗಿರುವುದನ್ನು ನೀವಿಲ್ಲಿ ಗಮನಿಸಬಹುದು. ಅವರ ಲಕ್ಕಿ ನಂಬರ್ 11 ಎನ್ನುವುದನ್ನು ಇದುವೇ ಹೇಳುತ್ತದೆ.
ಇದನ್ನೂ ಓದಿ :ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕು, ಯಾಕೆ ಗೊತ್ತಾ?
ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ಈಗಾಗಲೇ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಫ್ಲೈಟ್ ನಂಬರ್ 11, ಹಾಸ್ಪಿಟಲ್ ಬೆಡ್ ನಂಬರ್ 11, ಅದೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಸಂಖ್ಯಾಶಾಸ್ತ್ರ ನಿಜಕ್ಕೂ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 11 ನಂಬರ್ ಲಕ್ಕಿ ನಂಬರ್, ಈ ವ್ಯಕ್ತಿ ನಿಜಕ್ಕೂ ಅದೃಷ್ಟವಂತ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ