Video: ಬಟ್ಟೆ ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿದ ಯುವಕ, ನನ್ನ ಹೆಂಡ್ತಿ ಮುಂದೇನೇ ಶೋಕಿ ಮಾಡ್ತೀಯಾ ಎಂದು ಜಾಡಿಸಿದ ವ್ಯಕ್ತಿ
ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಈ ಸ್ಟ್ರೀಟ್ ಪ್ರಾಂಕ್ ಕಾನ್ಸೆಪ್ಟ್‌ಗಳು ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಬ್ಬ ಯುವಕ ನಗರದ ಬೀದಿಗಳಲ್ಲಿ ಬಟ್ಟೆ ಬಿಚ್ಚಿ ಸಿಕ್ಸ್ ಪ್ಯಾಕ್ಸ್ ತೋರಿಸುವಂತಹ ತಮಾಷೆಯ ವಿಡಿಯೋ ಮಾಡಲು ಹೋಗಿ ತಾನೇ ಹಳ್ಳಕ್ಕೆ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಂಗಾಟ ಆಡುವವರಿಗೆ ಇದೇ ರೀತಿ ಬುದ್ಧಿ ಕಲಿಸಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ಈಗಂತೂ ಪ್ರಾಂಕ್ ಮಾಡುವವರಿಗೇನು ಕೊರತೆಯಿಲ್ಲ. ವಿಡಿಯೋ ಶೂಟ್ ಮಾಡುತ್ತಾ ಜನರನ್ನು ಬಕ್ರಾ ಮಾಡಿ ಆ ತಮಾಷೆಯ ವಿಡಿಯೋವನ್ನು ಯೂಟ್ಯೂಬ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಈಗ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಕೆಲವೊಂದು ಪ್ರಾಂಕ್ ವಿಡಿಯೋಗಳು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರೆ, ಕೆಲವೊಂದು ಪ್ರಾಂಕ್‌ಗಳು ತುಂಬಾ ಅತಿರೇಕವೆನಿಸುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ತಮಾಷೆಯ ನೆಪದಲ್ಲಿ ಅತಿರೇಕದ ವರ್ತನೆಯನ್ನು ತೋರಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ನಗರದ ಬೀದಿಗಳಲ್ಲಿ ಜನರ ಮುಂದೆ ಬಟ್ಟೆ ಬಿಚ್ಚಿ ತನ್ನ ಸಿಕ್ಸ್ ಪ್ಯಾಕ್ಸ್ ತೋರಿಸುವಂತಹ ತಮಾಷೆಯ ವಿಡಿಯೋವನ್ನು ಮಾಡುತ್ತಿರುತ್ತಾನೆ. ಹೀಗೆ ವಿಡಿಯೋ ಮಾಡುತ್ತಿರುವಾಗ ದಂಪತಿಗಳಿಬ್ಬರು ಬರುವುದನ್ನು ಕಂಡ ಆ ಯುವಕ ಬಟ್ಟೆ ಬಿಚ್ಚಿ ಅವರ ಮುಂದೆ ಸಿಕ್ಸ್ ಪ್ಯಾಕ್ಸ್ ತೋರಿಸಲು ಹೋಗುತ್ತಾನೆ. ಇದರಿಂದ ಸಿಟ್ಟಿಗೆದ್ದ ವಿವಾಹಿತ ಪುರುಷ, ನನ್ನ ಹೆಂಡ್ತಿ ಮುಂದೇನೇ ಬಟ್ಟೆ ಬಿಚ್ಚಿ ಶೋಕಿ ಮಾಡ್ತೀಯಾ ಎಂದು ಆ ಯುವಕನ ಕುತ್ತಿಗೆ ಹಿಡಿದು ಒಂದು ಏಟು ಬಾರಿಸುತ್ತಾನೆ. ಕೊನೆಗೆ ಭಯಭೀತನಾದ ಯುವಕ ಈ ಜನ್ಮದಲ್ಲಿ ಇಂತಹ ಪ್ರಾಂಕ್ ಮಾಡಲಾರೆ ಎನ್ನುತ್ತಾ ಸಪ್ಪೆ ಮೋರೆ ಹಾಕಿ ವಾಪಾಸ್ ಹೋಗುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕಸ ಎಸೆದಿಲ್ಲ ಏಕೆ? ಕೆಲಸದಿಂದ ಮನೆಗೆ ಬರುತ್ತಿದ್ದಂತೆ ಪತಿರಾಯನಿಗೆ ಜಾಡಿಸಿ ಒದ್ದ ಪತ್ನಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
@belagavi media ಎಂಬ ಫೇಸ್‌ಬುಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೀಗೆ ಮಂಗಾಟ ಆಡುವವರಿಗೆ ಇದೇ ರೀತಿ ಬುದ್ಧಿ ಕಲಿಸಬೇಕು ಎಂದು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Thu, 23 May 24