ಇತ್ತೀಚಿಗೆ ದೇಶದಲ್ಲಿ ಬೀದಿ ನಾಯಿಗಳ ಹಾವಳಿ ತೀರಾ ಹೆಚ್ಚಾಗಿದ್ದು, ಇವುಗಳು ಮನುಷ್ಯರು ಹಾಗೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವಂತಹ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಅದರಲ್ಲೂ ಇತ್ತೀಚಿಗಂತೂ ಬೀದಿ ನಾಯಿಗಳು ಜನರ ಮೇಲೆ ರಣ ರಕ್ಕಸ ದಾಳಿ ಮಾಡಿ ಅವಾಂತರವನ್ನೇ ಸೃಷ್ಟಿಸುತ್ತಿವೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ದಾರಿಲೀ ಹೋಗ್ತಿದ್ದ ಪುಟಾಣಿ ಮಗುವಿನ ಮೇಲೆ ಬೀದಿನಾಯಿಗಳ ಹಿಂಡೊಂದು ಏಕಾಏಕಿ ದಾಳಿ ಮಾಡಿವೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಆಘಾತಕಾರಿ ಘಟನೆ ಪುಣೆ ಸಮೀಪದ ಕಡಚಿವಾಡಿಯ ಯಶ್ ಪಾರ್ಕ್ ಪ್ರದೇಶದಲ್ಲಿ ನಡೆದಿದ್ದು, ಆಟವಾಡುತ್ತಾ ದಾರಿಲೀ ನಡೆದುಕೊಂಡು ಹೋಗ್ತಿದ್ದ ಸಂದರ್ಭದಲ್ಲಿ ಬೀದಿನಾಯಿಗಳ ಹಿಂಡು 5ವರ್ಷದ ಪುಟಾಣಿ ಮಗುವಿನ ಮೇಲೆ ಏಕಾಏಕಿ ದಾಳಿಯನ್ನು ನಡೆಸಿದೆ. ನಾಯಿಗಳ ಹಿಂಡು ಮಗುವನ್ನು ಕಚ್ಚಿ ಎಳೆದಾಡಿದ್ದು, ಮಗುವಿನ ಚೀರಾಟ ಕೇಳಿ ಓಡಿ ಬಂದ ಸ್ಥಳೀಯರು ನಾಯಿಗಳನ್ನು ಓಡಿಸಿ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ. ಸೆಪ್ಟೆಂಬರ್ 8 ರಂದು ಬೆಳಗ್ಗೆ 10:15 ಕ್ಕೆ ಈ ಘಟನೆ ನಡೆದಿದ್ದು, ನಾಯಿಗಳ ದಾಳಿಗೆ ತುತ್ತಾತ ಮಗುವಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: 10 ಲಕ್ಷ ರೂ. ಡೆಪಾಸಿಟ್ ಕಟ್ಬೇಕು ಅಷ್ಟೆ, ಮರ ಕಡಿದ ವ್ಯಕ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ಕರ್ನಾಟಕ ಹೈ ಕೋರ್ಟ್
ಸಿಸಿ ಟಿವಿಯಲ್ಲಿ ಸೆರೆಯಾದ ಈ ಆಘಾತಕಾರಿ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾರಿಲೀ ಖುಷಿ ಖುಷಿಯಾಗಿ ಆಟವಾಡುತ್ತಾ ಹೋಗುತ್ತಿದ್ದ ಸಂದರ್ಭದಲ್ಲಿ ಪುಟಾಣಿ ಮಗುವಿನ ಮೇಲೆ ಬೀದಿಗಳು ಡೆಡ್ಲಿ ಅಟ್ಯಾಕ್ ಮಾಡುವ ದೃಶ್ಯವನ್ನು ಕಾಣಬಹುದು. ಏಕಾ ಏಕಿ ದಾಳಿ ಮಾಡಿದ ನಾಯಿಗಳು ಮಗುವಿನ ಕೈ ಕಾಲನ್ನು ಹಿಡಿದು ಎಳೆದಾಡಿದ್ದು, ಮಗುವಿನ ಚೀರಾಟದ ಸದ್ದನ್ನು ಕೇಳಿ ಓಡಿ ಬಂದ ಸ್ಥಳೀಯರು ನಾಯಿಗಳನ್ನು ಓಡಿಸಿ ಮಗುವನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ