
ಪುಣೆ, ಆಗಸ್ಟ್ 21:ಕೆಲವರು ತಟ್ಟೆಯ ತುಂಬಾ ಊಟ ಹಾಕಿಕೊಳ್ತಾರೆ, ಕೊನೆಗೆ ವೇಸ್ಟ್ ಮಾಡ್ತಾರೆ, ಹೆಚ್ಚಿನವರಿವರಿಗೆ ಈ ಅಭ್ಯಾಸಯಿರುತ್ತೆ. ಇನ್ನು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗೆ ಹೋದಾಗಲೂ ಎಲ್ಲವನ್ನು ಆರ್ಡರ್ ಮಾಡಿ ಕೊನೆಗೆ ಫುಡ್ ವೇಸ್ಟ್ ಮಾಡ್ತಾರೆ. ದೊಡ್ಡ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗೆ ಹೋದ ವೇಳೆ ಮೆನು ನೋಡಿದ ಕೂಡಲೇ ಎಲ್ಲಾ ಬಗೆಯ ಆಹಾರವನ್ನು ಆರ್ಡರ್ ಬಿಡುವವರೇ ಹೆಚ್ಚು. ಆದರೆ ಸ್ವಲ್ಪ ತಿನ್ನುತ್ತಿದ್ದಂತೆ ಹೊಟ್ಟೆ ತುಂಬಿ ಹೋಗುತ್ತದೆ. ಮತ್ತೇನು ಮಾಡೋದು ಅಂತ ಮನಸ್ಸಿನಲ್ಲಿ ಅಂದುಕೊಂಡು ಪ್ಲೇಟ್ ಖಾಲಿ ಮಾಡದೇ ಹಾಗೆಯೇ ಬಿಟ್ಟು ಬರುತ್ತಾರೆ. ಅಂತಹವರಿಗೆ ಇದೀಗ ಪುಣೆಯ ಸೌತ್ ಇಂಡಿಯಾ ರೆಸ್ಟೋರೆಂಟ್ (South Indian Restaurant In Pune) ಒಂದೊಳ್ಳೆ ನಿಯಮವನ್ನು ಜಾರಿಗೆ ತಂದಿದೆ. ಈ ರೆಸ್ಟೋರೆಂಟ್ ಮೆನು ಬೋರ್ಡ್‌ನಲ್ಲಿ ಯಾರು ಫುಡ್ ವೇಸ್ಟ್ ಮಾಡ್ತಾರೋ ಅವರಿಗೆ 20 ರೂ ದಂಡ ವಿಧಿಸಲಾಗುವುದು ಎಂದು ಉಲ್ಲೇಖಿಸಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರೆಸ್ಟೋರೆಂಟ್ ಮೆನು ಬೋರ್ಡ್ ನಲ್ಲಿ ಏನಿದೆ ನೋಡಿ
@rons1212 ಹೆಸರಿನ ಎಕ್ಸ್ ಖಾತೆಯಲ್ಲಿ ರೆಸ್ಟೋರೆಂಟ್ ಹ್ಯಾಂಡ್ ರೈಟಿಂಗ್ ಮೆನು ಫೋಟೋ ಹಂಚಿಕೊಂಡಿದ್ದಾರೆ. ಪುಣೆಯ ಒಂದು ಹೋಟೆಲ್ ಆಹಾರವನ್ನು ವ್ಯರ್ಥ ಮಾಡಿದರೆ ಹೆಚ್ಚುವರಿಯಾಗಿ 20 ರೂ ಶುಲ್ಕ ವಿಧಿಸುತ್ತಿದೆ. ಪ್ರತಿಯೊಂದು ರೆಸ್ಟೋರೆಂಟ್ ಕೂಡ ಇದೇ ರೀತಿ ಮಾಡಬೇಕು, ಮದುವೆ ಮತ್ತು ಸಮಾರಂಭಗಳಿಗೂ ದಂಡ ವಿಧಿಸಲು ಪ್ರಾರಂಭಿಸಬೇಕು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಮೆನು ಬೋರ್ಡ್‌ನಲ್ಲಿ ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ವಿವಿಧ ಆಹಾರ ಪದಾರ್ಥಗಳ ಲಿಸ್ಟ್ ಇದೆ. ಆದರೆ ಕೊನೆಗೆ ಆಹಾರ ವ್ಯರ್ಥ ಮಾಡಿದರೆ ನಿಮಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ ಎಂಬ ದೊಡ್ಡದಾದ ಅಕ್ಷರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Video: ಬರ್ಗರ್ ತಿನ್ನುತ್ತಿದ್ದ ವೇಳೆ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು, ಪ್ರಾಣಾಪಾಯದಿಂದ ಪಾರಾದ ಯೂಟ್ಯೂಬರ್ ಜೋಡಿ
ಈ ಪೋಸ್ಟ್ ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು ಬಳಕೆದಾರರೊಬ್ಬರು, ಆಹಾರ ವೇಸ್ಟ್ ಮಾಡುವುದನ್ನು ತಪ್ಪಿಸಲು ಇದೊಂದು ಒಳ್ಳೆಯ ಕ್ರಮ ಎಂದಿದ್ದಾರೆ. ಆಹಾರ ಚೆನ್ನಾಗಿಲ್ಲದಿದ್ದರೆ ಏನು ಮಾಡೋದು, ಇಷ್ಟವಿಲ್ಲದ ಆಹಾರ ಕೊಟ್ರೆ ಹೆಚ್ಚುವರಿ 20 ರೂ ಕೊಡ್ಬೇಕಾ. ಆದರೆ ನಾನು ಆಹಾರ ವೇಸ್ಟ್ ಮಾಡೋದನ್ನು ಬೆಂಬಲಿಸ್ತಾ ಇಲ್ಲ. ಆದರೆ ಈ ಅಸಂಬದ್ಧ ನೀತಿಯನ್ನು ವಿರೋಧಿಸುತ್ತಿದ್ದೇನೆ ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ಹೇಳಿದ್ದಾರೆ. ಇನ್ನು ಕೆಲವರು ಒಳ್ಳೆಯ ರೂಲ್ಸ್, ಹೀಗೆ ಮಾಡಿಯಾದ್ರು ಆಹಾರ ವೇಸ್ಟ್ ಆಗೋದನ್ನು ತಪ್ಪಿಸೋಣ ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 20 ರೂಪಾಯಿ ತುಂಬಾ ಕಡಿಮೆ ಎಂದು ನಾನು ಭಾವಿಸುತ್ತೇನೆ. ಶುಲ್ಕ ಆಹಾರದ ತೂಕವನ್ನು ಆಧರಿಸಿರಬೇಕು. ಬಫೆಗಳಲ್ಲಿ ಜನರು ತುಂಬಾ ವ್ಯರ್ಥ ಮಾಡುವುದನ್ನು ನಾನು ನೋಡಿದ್ದೇನೆ, ಮಕ್ಕಳಿಗೆ ತಿನ್ನಲು ಸಾಧ್ಯವಿಲ್ಲದಿದ್ದರೂ ಮಿತಿಮೀರಿ ಫುಡ್ ಆರ್ಡರ್ ಮಾಡುತ್ತಾರೆ. ಅದರ ಬಗ್ಗೆ ಯಾರು ಕೂಡ ಹೆಚ್ಚು ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Thu, 21 August 25