ದೂರದಲ್ಲಿ ಒಂದು ಹೆಬ್ಬಾವು ಕಂಡರೂ ಕೈಕಾಲು ನಡುಗಿ ಹೋಗುತ್ತದೆ. ಇನ್ನೇನಾದರೂ ಹತ್ತಿರದಲ್ಲಿ ಹೆಬ್ಬಾವು ಬಂತೆಂದರೆ ಜೀವವೇ ಹೋದಂತಾಗುತ್ತದೆ. ಈ ಹೆಬ್ಬಾವುಗಳ ಬಗೆಗಿನ ಜನರ ಭಯ ಅಂತಹದ್ದು. ಹೆಬ್ಬಾವುಗಳ ಆಕ್ರಮಣಕಾರಿ ಬೇಟೆಯ ಬಗ್ಗೆ ಗೊತ್ತಿರುವ ಎಲ್ಲರೂ ಭಯ ಬೀಳುವುದು ಸಹಜ. ಏಕೆಂದರೆ ಹೆಬ್ಬಾವುಗಳು ಬರಿ ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯರನ್ನು ಕೂಡಾ ಜೀವಂತವಾಗಿ ನುಂಗಿ ನೀರು ಕುಡಿದು ಬಿಡುತ್ತವೆ. ಪ್ರಾಣಿಗಳು ಮಾತ್ರವಲ್ಲದೆ ಮನುಷ್ಯರನ್ನೂ ಹೆಬ್ಬಾವುಗಳು ಜೀವಂತವಾಗಿ ನುಂಗಿದಂತಹ ಅದೆಷ್ಟೋ ಉದಾಹರಣೆಗಳಿವೆ. ಇದೀಗ ದೈತ್ಯ ಹೆಬ್ಬಾವಿನ ಆಕ್ರಮಣಕಾರಿ ಬೇಟೆಯ ಕುರಿತ ವಿಡಿಯೋವೊಂದು ಹರಿದಾಡುತ್ತಿದ್ದು, ಕೈಗೆ ಸಿಕ್ಕ ಬೇಟೆ ಯಾವುದೇ ಕಾರಣಕ್ಕೂ ತಪ್ಪಿ ಹೋಗಬಾರದು, ಅದು ನನ್ನ ಹೊಟ್ಟೆಗೆ ಸೇರಲೇಬೇಕು ಎಂದು, ಹೆಬ್ಬಾವೊಂದು ಸತತ 12 ಗಂಟೆಗಳ ಕಾಲ ಮರದ ಕೊಂಬೆಯಲ್ಲಿ ತಲೆಕೆಳಗಾಗಿ ನೇತಾಡುತ್ತಾ, ಸರ್ಕಸ್ ಮಾಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಹೆಬ್ಬಾವಿನ ಆಕ್ರಮಣಕಾರಿ ಬೇಟೆಯನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
@sunshinecoastsnakecatchers ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ದೈತ್ಯ ಹೆಬ್ಬಾವು ಮರದ ಕೊಂಬೆಯ ಮೇಲೆ ತಲೆ ಕೆಳಗಾಗಿ ನೇತಾಡುತ್ತಾ, ತಾನು ಬೇಟೆಯಾಡದ ಒಪ್ಪೊಸಮ್ ಎಂಬ ಪ್ರಾಣಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು, ನುಂಗಲು ಹರ ಸಾಹಸ ಪಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ
ವೈರಲ್ ವಿಡಿಯೋದಲ್ಲಿ ಮರದ ಕೊಂಬೆಯಲ್ಲಿ ಹೆಬ್ಬಾವೊಂದು ತಲೆಕೆಳಗಾಗಿ ನೇತಾಡುತ್ತಾ, ತನ್ನ ಬೇಟೆಯನ್ನು ಬಾಯಲ್ಲಿ ಕಚ್ಚಿ ಹಿಡಿದಿರುವಂತಹ ದೃಶ್ಯವನ್ನು ಕಾಣಬಹುದು. ಈ ಹೆಬ್ಬಾವು ಒಪ್ಪೊಸಮ್ ಪ್ರಾಣಿಯನ್ನು ಬೇಟೆಯಾಡಿರುತ್ತೆ, ಆದ್ರೆ ಒಪ್ಪೊಸಮ್ ಭಾರವಿದ್ದ ಕಾರಣ ಹಾವು ಎಷ್ಟೇ ಪ್ರಯತ್ನ ಪಟ್ಟರೂ ತನ್ನ ಬೇಟೆಯನ್ನು ಮೇಲಕ್ಕೆತ್ತಲು ಹಾವಿಗೆ ಕಷ್ಟಸಾಧ್ಯವಾಗುತ್ತದೆ. ಹೀಗಿದ್ದರೂ ಛಲ ಬಿಡದ ಹೆಬ್ಬಾವು ಕೈಗೆ ಸಿಕ್ಕಂತಹ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಬಿಡುವ ಮಾತೆ ಇಲ್ಲ, ಆ ಬೇಟೆಯನ್ನು ತಿಂದೇ ತೀರುತ್ತೇನೆ ಎಂದು, ಸತತ 12 ಗಂಟೆಗಳ ಕಾಲ ಮರದಲ್ಲಿ ತಲೆಕೆಳಗಾಗಿ ನೇತಾಡುತ್ತಾ, ಬೇಟೆಯಾಡಿದಂತಹ ಪ್ರಾಣಿಯನ್ನು ನುಂಗಲು ಸರ್ಕಸ್ ಮಾಡಿದೆ.
ಜನವರಿ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 18 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇಂತಹ ದೃಶ್ಯವನ್ನು ನಾನು ಕೇವಲ ಸಿನೆಮಾಗಳಲ್ಲಿ ಮಾತ್ರ ನೋಡಿದ್ದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼವನ್ಯ ಜೀವಿಗಳ ಕುರಿತ ಇಂತಹ ದೃಶ್ಯವನ್ನು ತೋರಿಸುವ ಅವಶ್ಯಕತೆ ಇದೆಯೇ?ʼ ಎಂದು ಪ್ರಶ್ನಿಸಿದ್ದಾರೆ. ಮತ್ತು ಅನೇಕರು ಹೆಬ್ಬಾವಿನ ದಾಳಿಗೆ ಸಿಳುಕಿದ ಒಪ್ಪೊಸಮ್ ಸತ್ತಿದೆಯೇ ಅಥವಾ ಜೀವಂತವಾಗಿದೆಯೇ ಎಂದು ಕೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Fri, 12 January 24