ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿ ಟೀಕೆಗೆ ಗುರಿಯಾಗಿದ್ದ ಘಟನೆಗಳು ಈ ಹಿಂದೆಯೂ ನಡೆದಿವೆ. ರೈಲಿನಲ್ಲಿ, ರೋಡಿನಲ್ಲಿ, ವಿಮಾನದಲ್ಲಿ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಮೂಲಕ ಇತರರಿಗೂ ತೊಂದರೆಯನ್ನುಂಟುಮಾಡಿದ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಒಂದಷ್ಟು ಮುಸ್ಲಿಂ ಪ್ರಯಾಣಿಕರು ಚಲಿಸುತ್ತಿರುವ ರೈಲಿನಲ್ಲಿಯೇ ನಮಾಜ್ ಮಾಡಲು ಮುಂದಾಗಿದ್ದಾರೆ. ಅಲ್ಲಿಗೆ ಬಂದಂತಹ ಟಿಟಿಇ ಹೀಗೆ ಪ್ರಯಾಣಿಕರು ಓಡಾಡುವ ಸ್ಥಳದಲ್ಲಿ ಏಕೆ ನಮಾಜ್ ಮಾಡ್ತಿರಾ? ಅಷ್ಟಕ್ಕೂ ನಮಾಜ್ ಮಾಡ್ಲೇಬೇಕು ಅಂತಿದ್ರೆ ನಿಮ್ಮ ಸೀಟ್ ಅಲ್ಲಿ ಕುಳಿತು ನಮಾಜ್ ಮಾಡಿ ಅದು ಬಿಟ್ಟು ಇತರರಿಗೆ ತೊಂದರೆಕೊಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಟಿಟಿಇ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಅಭಿಜಿತ್ (abhijithmajumder) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ “ಈ ಧೈರ್ಯವಂತ ಟಿಕೆಟ್ ಕಲೆಕ್ಟರ್‌ಗೆ ಪದಕ ನೀಡಿ ಗೌರವಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಒಂದಷ್ಟು ಮುಸ್ಲಿಂ ಪ್ರಯಾಣಿಕರು ಪ್ಲಾಸ್ಟಿಕ್ ಹಾಸಿ ನಮಾಜ್ ಮಾಡಲು ತಯಾರಿ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ನಮಾಜ್ ಮಾಡಲು ಮುಂದಾದಾಗ ಅಲ್ಲಿಗೆ ಬಂದಂತಹ ಟಿಟಿಇ ಯಾವುದೇ ಅಂಜಿಕೆಯಿಲ್ಲದೆ ಇದು ರೈಲು ನಮಾಜ್ ಮಾಡುವ ವಾಹನವಲ್ಲ, ಅಷ್ಟಕ್ಕೂ ನಿಮಗೆ ನಮಾಜ್ ಮಾಡಲೇಬೇಕು ಅಂತಿದ್ರೆ ನಿಮ್ಮ ಸೀಟ್ ಅಲ್ಲಿ ಕುಳಿತು ನಮಾಜ್ ಮಾಡಿ ಇಲ್ಲವೇ ಸೀಟ್ ಪಕ್ಕದಲ್ಲಿರುವ ಸ್ಥಳದಲ್ಲಿ ನಮಾಜ್ ಮಾಡಿ, ಅದು ಬಿಟ್ಟು ಹೀಗೆ ಎಲ್ಲರೂ ಓಡಾಡುವ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಲ್ಲ, ಹೀಗೆ ನಮಾಜ್ ಮಾಡಿ ಇತತರಿಗೆ ತೊಂದರೆ ಕೊಡುವುದು ಕೂಡಾ ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಾ ಬಂಧನದಂದು ರಜೆ ತೆಗೆದುಕೊಂಡ್ರೆ 7 ದಿನದ ಸಂಬಳ ಕಟ್, ಇದನ್ನು ವಿರೋಧಿಸಿದ HR, ಮ್ಯಾನೇಜರ್ ಕೆಲಸದಿಂದ ವಜಾ
Dear @AshwiniVaishnaw, please give this ticket collector a medal, certificate, and a cheque. pic.twitter.com/mERCeoIfrN
— Abhijit Majumder (@abhijitmajumder) August 13, 2024
ಆಗಸ್ಟ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನೊಬ್ಬ ಮುಸ್ಲಿಂ ಆಗಿ ಹೇಳುತ್ತಿದ್ದೇನೆ, ಟಿಟಿಇ ಮಾಡಿದ ಕೆಲಸ ತುಂಬಾನೇ ಸರಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಧೈರ್ಯವಂತ ವ್ಯಕ್ತಿಗೆ ನನ್ನದೊಂದು ಸಲಾಂʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ