AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಖಾಸಗಿ ಅಂಗ ಪ್ರದರ್ಶಿಸಿ ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕ, ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ?

ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಇದು ದೇಶ ಕಂಡ ಮತ್ತೊಂದು ನಿರ್ಭಯಾ ಪ್ರಕರಣ ಎಂದು ಜನ ಹೇಳುತ್ತಿದ್ದಾರೆ. ಈ ನಡುವೆ ಅದೇ ರಾಜ್ಯದಲ್ಲಿ ಇನ್ನೊಂದು ಅಸಹ್ಯಕರ ಕೃತ್ಯ ನಡೆದಿದ್ದು, ವ್ಯಕ್ತಿಯೊಬ್ಬ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆಯೊಬ್ಬರಿಗೆ ಖಾಸಗಿ ಅಂಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Video: ಖಾಸಗಿ ಅಂಗ ಪ್ರದರ್ಶಿಸಿ ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕ, ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ?
ವೈರಲ್​​ ವಿಡಿಯೋ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 14, 2024 | 12:59 PM

Share

ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮೊನ್ನೆಯಷ್ಟೇ ಕೋಲ್ಕಾತ್ತಾದಲ್ಲಿ ಕಾಮುಕನೊಬ್ಬ ಟ್ರೈನಿ ವೈದ್ಯೆಯ ಮೇಲೆ ಭಯಾನಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಈತನ ಈ ಕೌರ್ಯಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಇದು ದೇಶ ಕಂಡ ಮತ್ತೊಂದು ನಿರ್ಭಯಾ ಪ್ರಕರಣ ಎಂದು ಜನ ಹೇಳುತ್ತಿದ್ದಾರೆ. ಈ ಘೋರ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ನ್ಯಾಯಾಕ್ಕಾಗಿ ಪ್ರತಿಭಟನೆ ಕೂಡಾ ನಡೆಯುತ್ತಿದೆ. ಈ ನಡುವೆ ಅದೇ ರಾಜ್ಯದಲ್ಲಿ ಇನ್ನೊಂದು ತಲೆ ತಗ್ಗಿಸುವಂತಹ ಕೃತ್ಯ ನಡೆದಿದ್ದು, ಕಾಮುಕನೊಬ್ಬ ಕರ್ತವ್ಯದಲ್ಲಿದ್ದ ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈತ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಪರಾರಿಯಾಗಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಅಸಹ್ಯಕರ ಘಟನೆ ಕೂಡಾ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಇಲ್ಲಿನ ಕ್ಲಿನಿಕ್‌ ಒಂದರ ಒಳಗೆ ಬಂದ ಕಾಮುಕ ವೈದ್ಯೆಯೊಬ್ಬರಿಗೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯವನ್ನು ವೈದ್ಯೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಮಹಿಳೆಯರಿಗೆ ರಕ್ಷಣೆ ಎಂಬುದೇ ಇಲ್ಲವೇ ಎಂಬ ಆತಂಕ ಮೂಡಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು Mrseeker ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಗಿದ್ದು, “ವೈದ್ಯೆಯ ಮುಂದೆ ಖಾಸಗಿ ಅಂಗ ಪ್ರದರ್ಶಿಸಿ ಪರಾರಿಯಾದ ಕಾಮುಕ, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಯ ಸ್ಥಿತಿ ಹೇಗಾಗಿದೆ ನೋಡಿ” ಎಂಬ ಶೀರ್ಷಿಕೆನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಇದ್ದಕ್ಕಿದ್ದಂತೆ ಕ್ಲಿನಿಕ್‌ ಒಳಗಡೆ ಬಂದ ಕಾಮುಕನೊಬ್ಬ ಪ್ಯಾಂಟ್‌ ಜಿಪ್‌ ತೆರೆದು, ವೈದ್ಯೆಯೊಬ್ಬರಿಗೆ ತನ್ನ ಖಾಸಗಿ ಅಂಗವನ್ನು ತೋರಿಸಿ, ಬಳಿಕ ಸೈಕಲ್‌ ಏರಿ ಪರಾರಿಯಾಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್

ಆಗಸ್ಟ್‌ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 59 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಹಿಳೆಯರಿಗೆ ಎಲ್ಲಿದೆ ರಕ್ಷಣೆʼ ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ