ರಾಜಸ್ಥಾನ, ಮಾ. 17: ಅಂಗಡಿ ಮುಂಗಟ್ಟು, ಮನೆಗಳಿಗೆ ನುಗ್ಗಿ ಕಳ್ಳತನ (theft) ಮಾಡುವವರು ಒಂದು ಕಡೆಯಾದ್ರೆ, ಒಂದಷ್ಟು ಖದೀಮರು ಎಟಿಎಂ (ATM) ಹಾಗೂ ಬ್ಯಾಂಕ್‌ಗಳಿಗೆಯೇ (Bank) ನುಗ್ಗಿ ದೊಡ್ಡ ಮೊತ್ತದ ಹಣ, ಲಾಕರ್‌ನಲ್ಲಿದ್ದ ಚಿನ್ನವನ್ನು ದರೋಡೆ (Robbery) ಮಾಡುತ್ತಾರೆ. ಇಂತಹ ಬ್ಯಾಂಕ್ ದರೋಡೆಗಳಿಗೆ ಸಂಬಂಧಿಸಿದ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಎಟಿಎಂನಲ್ಲಿದ್ದ ನಗದು ಹಣವನ್ನು ದೋಚಿದ್ದಾರೆ. ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ಗೆ ಸೇರಿದ ಎಟಿಎಂ ಗೆ ನುಗ್ಗಿ ಮೊದಲು ಅಲ್ಲಿದ್ದ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನಕ್ಕೂ ಮುಂಚಿನ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ರಾಜಸ್ಥಾನದ ಜುಂಝುನು ಎಂಬಲ್ಲಿ ನಡೆದಿದ್ದು, ಇಲ್ಲಿನ ಎಟಿಎಂ ಒಂದಕ್ಕೆ ನುಗ್ಗಿದ ದರೋಡೆಕೋರರು ಹಣ ದೋಚಿ ಪರಾರಿಯಾಗಿದ್ದಾರೆ. ಶನಿವಾರ (ಮಾ. 15) ಬೆಳಗಿನ ಜಾವ 3.11 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ಸೇರಿದ ಎಟಿಎಂಗೆ ನುಗ್ಗಿದ ಕಳ್ಳರು ಮೊದಲಿಗೆ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಕತ್ತರಿಸಿದ ಅದರಲ್ಲಿದ್ದ ಬರೋಬ್ಬರಿ 38 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಎಟಿಎಂ ಯಂತ್ರ ಕತ್ತರಿಸುವಾಗ ಅದರೊಳಗಿದ್ದ 100 ರೂ. ನೋಟಿನ ಬಂಟಲ್‌ಗಳು ಸುಟ್ಟು ಹೋಗಿದ್ದು, ಕಳ್ಳರು ಅದನ್ನು ಅಲ್ಲೇ ಬಿಟ್ಟು ಇನ್ನುಳಿದ ಹಣವನ್ನು ದೋಚಿದ್ದಾರೆ.
ಮಾಹಿತಿಗಳ ಪ್ರಕಾರ ಮಾರ್ಚ್ 13 ರಂದು ಮಧ್ಯಾಹ್ನ 1 ಹಂಟೆಯ ಸುಮಾರಿಗೆ ಆ ಎಟಿಎಂಗೆ 39 ಲಕ್ಷಕ್ಕೂ ಹೆಚ್ಚಿನ ಹಣವನ್ನು ಲೋಡ್ ಮಾಡಲಾಗಿತ್ತು. ಮತ್ತು ಗ್ರಾಹಕರು 1 ಲಕ್ಷ ಹಣವನ್ನು ಮಾತ್ರ ವಿತ್‌ಡ್ರಾ ಮಾಡಿದ್ದರು. ಎರಡು ದಿನಗಳ ಬಳಿಕ ಮುಂಜಾನೆ ವೇಳೆ ಕಳ್ಳರು ಎಟಿಎಂನಲ್ಲಿದ್ದ ಹಣವನ್ನೆಲ್ಲಾ ದೋಚಿ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹಣ ದೋಚಿದ ಖದೀಮರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
timesofindia ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಎಟಿಎಂಗೆ ನುಗ್ಗಿದ ಮುಸುಕುಧಾರಿ ಕಳ್ಳ ಕಳ್ಳತನಕ್ಕೂ ಮೊದಲು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆಯುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕಾಲ್ ಸೆಂಟರ್‌ಗೆ ನುಗ್ಗಿ ಲ್ಯಾಪ್‌ಟಾಪ್, ಮಾನಿಟರ್ ಸೇರಿದಂತೆ ಸಿಕ್ಕಿದ್ದನ್ನೆಲ್ಲಾ ದೋಚಿದ ಪಾಕಿಸ್ತಾನದ ಜನ; ವಿಡಿಯೋ ವೈರಲ್
ಮಾರ್ಚ್ 16 ರಂದು ಶೇರ್ ಮಾಡಲಾದ ಈ ವಿಡಿಯೋ 5.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಿಸಿ ಕ್ಯಾಮೆರಾದ ಬದಲು ಇಂತಹ ಸ್ಥಳಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸುವುದು ಉತ್ತಮʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕ್ಯಾಮೆರಾ ಅಳವಡಿಸಿದರೆ ಸಾಲದು, ಎಟಿಎಂ ಯಂತ್ರಗಳ ಬಳಿ ಕೆಲವೊಂದು ಅತ್ಯಾಧುನಿಕ ಎಚ್ಚರಿಕೆಯ ವ್ಯವಸ್ಥೆಯನ್ನು ಅಳವಡಿಸಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಿಗಳನ್ನು ಇಲ್ಲಿ ಕ್ಲಿಕ್ ಮಾಡಿ