AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ಫಾಲೋ ಮಾಡುವ ಏಕೈಕ ಇನ್‌ಸ್ಟಾಗ್ರಾಮ್ ಖಾತೆ ಯಾವುದು ಗೊತ್ತಾ?

ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 8.5 ಮಿಲಿಯನ್ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. ಆದರೆ ಇವರು ಒಂದೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಫಾಲೋ ಮಾಡುತ್ತಿದ್ದಾರೆ. ಅಷ್ಟಕ್ಕೂ ರತನ್​​ ಟಾಟಾ ಫಾಲೋ ಮಾಡುತ್ತಿರುವ ಇನ್‌ಸ್ಟಾಗ್ರಾಮ್ ಖಾತೆ ಯಾವುದು ಎಂದು ನೀವು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಪೂರ್ತಿಯಾಗಿ ಓದಿ.

ರತನ್ ಟಾಟಾ ಫಾಲೋ ಮಾಡುವ ಏಕೈಕ ಇನ್‌ಸ್ಟಾಗ್ರಾಮ್ ಖಾತೆ ಯಾವುದು ಗೊತ್ತಾ?
ರತನ್ ಟಾಟಾ Image Credit source: Instagram
ಅಕ್ಷತಾ ವರ್ಕಾಡಿ
|

Updated on:Mar 10, 2023 | 1:09 PM

Share

ಅನೇಕ ಉದ್ಯಮಿಗಳಿಗೆ ತನ್ನ ವ್ಯಕ್ತಿತ್ವ ಮತ್ತು ಸಾಧನೆಯ ಮೂಲಕ ಸ್ಫೂರ್ತಿಯಾಗಿರುವ ಭಾರತದ ಪ್ರಸಿದ್ದ ಉದ್ಯಮಿ ರತನ್ ಟಾಟಾ. ಇವರ ವ್ಯಕ್ತಿತ್ವದಿಂದಲೇ ಇವರು ಚಿರಪರಿಚಿತರು. ಇವರು ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ದೇಶ ಕೊವಿಡ್​ 19 ಸಂಕಷ್ಟಕ್ಕೀಡಾಗಿರುವ ಸಮಯದಲ್ಲಿ ಇವರು ನೀಡಿರುವ ಸಹಾಯ ಅಷ್ಟಿಷ್ಟಲ್ಲ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 8.5 ಮಿಲಿಯನ್ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. ಇಷ್ಟೊಂದು ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವುದು ವಿಶೇಷ ಸಂಗತಿ ಏನಲ್ಲಾ, ಆದರೆ ಇವರು ಒಂದೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಫಾಲೋ ಮಾಡುತ್ತಿದ್ದಾರೆ. ಆದಾಗ್ಯೂ, ಇದು ಯಾವುದೇ ಸೆಲೆಬ್ರಿಟಿಗಳು ಅಥವಾ ಅವರ ಗೆಳೆಯರಲ್ಲ. ಅಷ್ಟಕ್ಕೂ ರತನ್​​ ಟಾಟಾ ಫಾಲೋ ಮಾಡುತ್ತಿರುವ ಇನ್‌ಸ್ಟಾಗ್ರಾಮ್ ಖಾತೆ ಯಾವುದು ಎಂದು ನೀವು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಪೂರ್ತಿಯಾಗಿ ಓದಿ.

ಸದಾ ಸಮಾಜ ಸೇವೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಿರುವ ರತನ್​ ಟಾಟಾರವರು ಫಾಲೋ ಮಾಡುವ ಏಕೈಕ ಇನ್‌ಸ್ಟಾಗ್ರಾಮ್ ಖಾತೆ ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್‌. ಇತ್ತೀಚಿನ ದಿನಗಳಲ್ಲಿ ಟಾಟಾ ಟ್ರಸ್ಟ್‌ಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ರತನ್ ಟಾಟಾ.

View this post on Instagram

A post shared by Tata Trusts (@tata_trusts)

ಇದನ್ನೂ ಓದಿ: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿಯ ವಿಡಿಯೋ ವೈರಲ್

130 ವರ್ಷಗಳ ಹಿಂದೆ ಭಾರತೀಯರ ಉನ್ನತ ಶಿಕ್ಷಣಕ್ಕಾಗಿ ಸಹಾಯಕವಾಗುವಂತೆ ಟಾಟಾ ಗ್ರೂಪ್ ಸಂಸ್ಥಾಪಕ ಜಮ್ ಶೆಟ್ ಜಿ ಟಾಟಾ 1892ರಲ್ಲಿ ಈ ಟಾಟಾ ಟ್ರಸ್ಟ್​​​ ಸ್ಥಾಪಿಸಿದರು. ದೇಶ ಕಟ್ಟಿದ ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ ಜಮ್‍ಸೆಟ್‍ಜಿ ಟಾಟಾಜಗತ್ತಿನ ನಂಬರ್‌ ವನ್ ದಾನಿಯಾಗಿದ್ದರು. ದಾನ ಮಾಡುವ ವಿಚಾರದಲ್ಲಿ ಜಮ್‍ಸೆಟ್‍ಜಿ ಟಾಟಾ, ಮೈಕ್ರೋಸಾಫ್ಟ್‌ ದಿಗ್ಗಜ ಬಿಲ್‌ಗೇಟ್ಸ್‌ರನ್ನೇ ಹಿಂದಿಕ್ಕಿದ್ದಾರೆ. ಟಾಟಾ ಗ್ರೂಪ್​ನ ಫಂಡ್ ಮುಖ್ಯವಾಗಿ ಭಾರತೀಯ ನಾಗರಿಕರಿಗೆ ಉನ್ನತ ಶಿಕ್ಷಣ ನೀಡಲು ಬಳಕೆ ಮಾಡಲಾಗುತ್ತದೆ. ಟಾಟಾ ಟ್ರಸ್ಟ್ಸ್ ಅಧಿಕೃತ ವೆಬ್‌ಸೈಟ್ ಪ್ರಕಾರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಉನ್ನತ ಸಂಶೋಧನೆಗೆ ಒತ್ತು ನೀಡುವುದು ಆ ಸಂದರ್ಭದಲ್ಲಿ ಪ್ರಮುಖವಾಗಿತ್ತು. ಬೆಳವಣಿಗೆ ಹೊಂದಿದ ಅಮೇರಿಕಾದಂತಹ ದೇಶಗಳು ಕೂಡಾ ಇದೇ ಮಾರ್ಗವನ್ನು ಹಿಡಿದಿದೆ ಎಂದು ಉಲ್ಲೇಖ ಮಾಡಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:09 pm, Fri, 10 March 23

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ