ಶನಿವಾರ CSK ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ RCB ತಂಡವು ಅದ್ಧೂರಿಯಾಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಒಂದೆಡೆ ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇನ್ನೊಂದೆಡೆ ನೆಟ್ಟಿಗರು RCB ಪ್ಲೇ-ಆಫ್‌ಗೆ ಹೋಗೋಕೆ ಕಾರಣನೇ ನಮ್ಮ ಅದೃಷ್ಟ ದೇವತೆ ಅಶ್ವಿನಿ ಅಕ್ಕ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಂದು ರಾಯಲ್ ಚಾಲೆಂಜರ್ಸ್ ತಂಡ ಸತತ ಸೋಲು ಕಂಡಾಗ, ಇದಕ್ಕೆಲ್ಲಾ ಅಶ್ವಿನಿ ಪುನೀತ್ ರಾಜ್‌ಕುಮಾರ್ RCB ಜೆರ್ಸಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಕಾರಣ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದೀಗ RCB ಅದ್ಧೂರಿಯಾಗಿ ಪ್ಲೇ-ಆಫ್ ಪ್ರವೇಶ ಪಡೆದಿದ್ದು, ಹೆಣ್ಣಿನ ಬಗ್ಗೆ ಕೊಂಕು ಮಾತನಾಡಿದವರಿಗೆ ಸರಿಯಾಗಿ ಉತ್ತರ ಸಿಕ್ಕಂತಾಗಿದೆ.
ತ್ರಿವೇಣಿ ಗೌಡ ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮೂರ್ಖರೇ ನೋಡಿ… ನಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಕಾಲ್ಗುಣವನ್ನು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಅಲ್ಲಿ ಅದ್ಧೂರಿಯಾಗಿ ಪ್ಲೇ-ಆಫ್ ಪ್ರವೇಶ ಮಾಡಿದ ನಮ್ಮ RCB! ಇದಕ್ಕೆಲ್ಲಾ ನಮ್ಮ ಅದೃಷ್ಟ ದೇವತೆ ಅಶ್ವಿನಿ ಮೇಡಂ ಕಾರಣ ಎಂಬ ಬರಹಗಳನ್ನು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: 90 ರ ದಶಕದ ಹಾಡಿಗೆ ಅಜ್ಜಿಯ ಭರ್ಜರಿ ಸ್ಟೆಪ್ಸ್; ವಿಡಿಯೋ ಇಲ್ಲಿದೆ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಂದು ಹೆಣ್ಣಿನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದವರಿಗೆ ಸರಿಯಾಗಿ ಉತ್ತರ ಸಿಕ್ಕಂತಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ